ರಾಜ್ಯ

ಮೈಸೂರು: ನಂಬರ್ ಪ್ಲೇಟ್ ಇಲ್ಲದ ಕಾರು ಡಿಕ್ಕಿ; ಗುಪ್ತಚರ ದಳದ ನಿವೃತ್ತ ಅಧಿಕಾರಿ ಸಾವು, ಕೊಲೆ ಶಂಕೆ

Ramyashree GN

ಮೈಸೂರು: ನವೆಂಬರ್ 4 ರಂದು ಇಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಗುಪ್ತಚರ ದಳದ ನಿವೃತ್ತ ಅಧಿಕಾರಿಯೊಬ್ಬರನ್ನು ಕೊಲೆ ಮಾಡಲಾಗಿದೆ ಎಂದು ನಗರ ಪೊಲೀಸರು ಶಂಕಿಸಿದ್ದಾರೆ.

ಭಾನುವಾರ ಪೊಲೀಸರ ಹೇಳಿಕೆ ಪ್ರಕಾರ, ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಕ್ಯಾಂಪಸ್‌ನ ಕಿರಿದಾದ ಲೇನ್‌ನಲ್ಲಿ ಆರ್‌ಎನ್ ಕುಲಕರ್ಣಿ (83) ಎಂದಿನಂತೆ ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಶುಕ್ರವಾರ ಸಂಜೆ 5.30 ಗಂಟೆಗೆ ಅಪಘಾತ ಸಂಭವಿಸಿದ್ದು, ಕಾರು ಗುದ್ದಿದ ಪರಿಣಾಮ 83 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಯಿತು ಎಂದು ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ವಿಚಾರಣೆ ಬಳಿಕ, ಇದು ಅಪಘಾತವಲ್ಲ. ಆದರೆ, ಯೋಜಿತ ಕೊಲೆ ಎಂದು ನಾವು ತೀರ್ಮಾನಕ್ಕೆ ಬಂದಿದ್ದೇವೆ. ಸಹಾಯಕ ಪೊಲೀಸ್ ಆಯುಕ್ತ ನರಸಿಂಹರಾಜ ನೇತೃತ್ವದಲ್ಲಿ ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.

‘ವಾಹನದಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡು ಬಂದ ಮೇಲೆ ನಮಗೆ ಅನುಮಾನ ಬಂದಿತು. ತನಿಖೆ ನಡೆಯುತ್ತಿದೆ ಮತ್ತು ಕೆಲವು ಪ್ರಮುಖ ಸುಳಿವುಗಳು ಲಭ್ಯವಾಗಿದ್ದು, ಅವುಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.

ಪೊಲೀಸ್ ಮೂಲಗಳ ಪ್ರಕಾರ, ಕುಲಕರ್ಣಿ ಅವರು 35 ವರ್ಷಗಳ ಕಾಲ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಸೇವೆ ಸಲ್ಲಿಸಿ 23 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿದ 'ಭಾರತದಲ್ಲಿ ಭಯೋತ್ಪಾದನೆಯ ಮುಖಗಳು' ಸೇರಿದಂತೆ ಮೂರು ಪುಸ್ತಕಗಳನ್ನು ಅವರು ಬರೆದಿದ್ದಾರೆ.

ನಿವೃತ್ತ ಐಬಿ ಅಧಿಕಾರಿ ತಮ್ಮ ಆರಂಭಿಕ ದಿನಗಳಲ್ಲಿ ಶಿಕ್ಷಕರಾಗಿದ್ದರು ಮತ್ತು ಭಾರತ ಸರ್ಕಾರದ ರಹಸ್ಯ ಸೇವಾ ಏಜೆಂಟ್ ಆಗಿದ್ದರು. ಅವರು ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳು, ಕಾರ್ಪೊರೇಟ್ ಜಗತ್ತಿನಲ್ಲಿ ಮತ್ತು ಪೈಲಟ್ ಆಗಿಯೂ ಕೆಲಸ ಮಾಡಿದ್ದರು.

SCROLL FOR NEXT