ಸನ್ನಿ ಲಿಯೋನ್ 
ರಾಜ್ಯ

ಟಿಇಟಿ ಹಾಲ್‌ಟಿಕೆಟ್‌ನಲ್ಲಿ ನಟಿ ಸನ್ನಿ ಲಿಯೊನ್‌ ಅಶ್ಲೀಲ ಚಿತ್ರ!: ಎಫ್‌ಐಆರ್‌ ದಾಖಲು, ಇಲಾಖೆ ಸ್ಪಷ್ಟನೆ

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್‌ಟಿಕೆಟ್‌ನಲ್ಲಿ ಪರೀಕ್ಷಾರ್ಥಿಯ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್‌ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್‌ಟಿಕೆಟ್‌ನಲ್ಲಿ ಪರೀಕ್ಷಾರ್ಥಿಯ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್‌ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕೆಲ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದ್ದು, ಈ ಕುರಿತ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಇಲಾಖೆ ಎಫ್ಐಆರ್ ದಾಖಲಿಸಿದೆ. ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಇಲಾಖೆಯ ದೂರು ಆಧರಿಸಿ ಶಿವಮೊಗ್ಗದಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಈ ಪ್ರಮಾದ ಇಲಾಖೆಯಿಂದ ಆದ ಲೋಪವಲ್ಲ. ಪರೀಕ್ಷೆ ತೆಗೆದುಕೊಂಡ ಪ್ರತಿ ಅಭ್ಯರ್ಥಿಯೂ ಸ್ವತಃ ಯೂಸರ್‌ ಐಡಿ, ಪಾಸ್‌ವರ್ಡ್‌ ಬಳಸಿ ನೋಂದಣಿ ಮಾಡಿಕೊಳ್ಳುತ್ತಾರೆ. ಎಲ್ಲ ಮಾಹಿತಿ, ಪೋಟೊ ಅವರೇ ಅಪ್‌ಲೋಡ್‌ ಮಾಡುತ್ತಾರೆ. ಎಲ್ಲ ಮಾಹಿತಿ ಸರಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿರುತ್ತದೆ. ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಬಹುದು. ಅರ್ಜಿಯ ಮುದ್ರಿತ ಪ್ರತಿ ಪಡೆಯಬಹುದು. ಇಲಾಖೆಯ ತಂತ್ರಾಂಶ ಸಂಪೂರ್ಣ ಸುರಕ್ಷತೆ ಹೊಂದಿದೆ. ಹಾಗಾಗಿ, ಯಾವುದೇ ಲೋಪವಾಗಿಲ್ಲ’ ಎಂದು ಆಯುಕ್ತರ ಕಚೇರಿ ಸ್ಪಷ್ಟನೆ ನೀಡಿದೆ.

ಇಲಾಖೆಯಿಂದ ಸ್ಪಷ್ಟೀಕರಣ
ಇನ್ನು ಟಿಇಟಿ ಹಾಲ್ ಟಿಕೆಟ್ ನಲ್ಲಿ ಸನ್ನಿಲಿಯೋನ್ ಅಶ್ಲೀಲ ಚಿತ್ರ ಪ್ರಕಟ ಕುರಿತು ಸ್ಪಷ್ಟೀಕರಣ ನೀಡಿರುವ ಇಲಾಖೆ, ಪರೀಕ್ಷೆಯು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳಿಲ್ಲದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿರುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಹೇಳಿದೆ.

'06-11-2022ರಂದು ನಡೆದ ಟಿಇಟಿ-2022 ರ ಪರೀಕ್ಷೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ 781 ಕೇಂದ್ರಗಳಲ್ಲಿ ನಡೆದಿದ್ದು 3,32,913 ಅಭ್ಯರ್ಥಿಗಳು ಹಾಜರಾಗಿದ್ದು, ಪರೀಕ್ಷಾ ಹಾಜರಾತಿ ಶೇಕಡ 92%ರಷ್ಟಿದೆ. ಪರೀಕ್ಷೆಯು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪದೋಷಗಳಿಲ್ಲದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿರುತ್ತದೆ. ಪ್ರತಿ ಅಭ್ಯರ್ಥಿಯು ಟಿಇಟಿ-2022 ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾನೇ ತನ್ನ User ID ಮತ್ತು Password ನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ಸೃಷ್ಟಿಸಿಕೊಂಡ User ID ಮತ್ತು Password ಮಾಹಿತಿಯು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ
ಖಾಸಗಿ ಮಾಹಿತಿಯಾಗಿರುತ್ತದೆ. ಸದರಿ User ID ಮತ್ತು Password ನ್ನು ಬಳಸಿ ಲಾಗಿನ್ (Login) ಅಗುವದರ ಮೂಲಕ ಅಭ್ಯರ್ಥಿಯು ತನ್ನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಪೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್ಲೋಡ್ ಮಾಡಿದ ನಂತರ, ಅಭ್ಯರ್ಥಿಯು ತಾನು ನೀಡಿರುವ ಮಾಹಿತಿಯು ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ಅರ್ಜಿ Submit ಮಾಡಿದ ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ಅಭ್ಯರ್ಥಿಯು ತನ್ನ ಅನ್‌ಲೈನ್ ಅರ್ಜಿಯ ಪ್ರಿಂಟ್ ಅನ್ನು ಪಡೆಯುತ್ತಾರೆ.

ಅಭ್ಯರ್ಥಿಯು ತನ್ನ ಅರ್ಜಿಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ ತನ್ನ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಈ ತಂತ್ರಾಂಶವು KSWAN ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು, ಸಂಪೂರ್ಣ ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಯ State Data Center (SDC) ನಿಯಂತ್ರಣದ ಸರ್ವರ್ ನಲ್ಲಿ ಅಳವಡಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ಕಛೇರಿಯ ತಂತ್ರಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಆನ್ ಲೈನ್ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ, ಅದ್ದರಿಂದ ಮಾಧ್ಯಮದಲ್ಲಿ ಬಿತ್ತರವಾಗಿರುವ ಸುದ್ದಿಯಲ್ಲಿ ಇಲಾಖೆಯ ಪಾತ್ರವಿರುವುದಿಲ್ಲ, ಆದಾಗ್ಯೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ. ಮೇಲ್ಕಂಡ ಮಾಹಿತಿಯನ್ನು ಸುದ್ದಿ ಮಾಧ್ಯಮದಲ್ಲಿ ಪ್ರಕಟಿಸುವಂತೆ ಕೋರಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT