ಸಾಂದರ್ಭಿಕ ಚಿತ್ರ 
ರಾಜ್ಯ

ಹೆಚ್ಚಿದ ಕೊರೋನಾ: ಇಂದು ಬೆಂಗಳೂರಿನಲ್ಲಿ 225 ಸೇರಿ ರಾಜ್ಯದಲ್ಲಿ 268 ಮಂದಿಗೆ ಪಾಸಿಟಿವ್; ಸಾವು ಶೂನ್ಯ!

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 268 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,70,096ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 268 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 40,70,096ಕ್ಕೆ ಏರಿಕೆಯಾಗಿದೆ.

ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40,258 ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 225 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 18,75,402ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿಯಲ್ಲೂ ಕೊರೋನಾದಿಂದ ಯಾವುದೇ ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇಂದು 278 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 40,27,968ಕ್ಕೆ ಏರಿಕೆಯಾಗಿದೆ. ಇನ್ನು 1,828 ಸಕ್ರಿಯ ಪ್ರಕರಣಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

ನಮಸ್ತೆ.. ಏನ್ರೀ ರಾಹುಲ್ ಹೇಗಿದ್ದೀರಾ? ; ಸಂಸತ್ ಭವನದ ಬಳಿ ಪ್ರಧಾನಿ ಮೋದಿ-Rahul Gandhi ಅಪರೂಪದ ಮುಖಾಮುಖಿ! Video

ಮಾತುಕತೆಗೂ ಮುನ್ನವೇ ಟೆಹ್ರಾನ್‌ಗೆ ದೊಡ್ಡ ಗೆಲುವು; ಫ್ರೀಜ್ ಮಾಡಲಾದ ಇರಾನ್ ಸ್ವತ್ತುಗಳ ಬಿಡುಗಡೆಗೆ ಅಮೆರಿಕ ಒಪ್ಪಿಗೆ!

SCROLL FOR NEXT