ರಾಜ್ಯ

ಭಾವನಾತ್ಮಕವಾಗಿ ಮತ ಕೇಳುತ್ತಿರುವ ಸಿದ್ದರಾಮಯ್ಯ ನೂರು ಕಾಲ ಬದುಕಲಿ: ಸಿಎಂ ಬೊಮ್ಮಾಯಿ

Manjula VN

ಚಿಕ್ಕಮಗಳೂರು: ಸಿದ್ದರಾಮಯ್ಯ ಅವರು ತಮಗೆ ಆರೋಗ್ಯ ಸರಿ ಇಲ್ಲ ಎಂದು ಭಾವನಾತ್ಮಕವಾಗಿ ಮತ ಕೇಳುತ್ತಿದ್ದು, ಅವರು ನೂರು ಕಾಲ ಬದುಕಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದ್ದಾರೆ.

ಜನಸಂಕಲ್ಪ ಯಾತ್ರೆ ಹಿನ್ನೆಲೆ ಕಡೂರಿಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಅವರು ತಮಗೆ ಆರೋಗ್ಯ ಸರಿ ಇಲ್ಲ. ಬಿಪಿ ಶುಗರ್​ ಇದೆ, ಬಹಳ ದಿನ ಬದುಕಿರ್ತೀನೋ ಇಲ್ಲವೋ ಗೊತ್ತಿಲ್ಲ. ನಾನು ಸಿಎಂ ಆಗಬೇಕಾದರೆ ನೀವು ಮತ ಹಾಕಲೇಬೇಕು ಎಂದು ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ಅವರಿಗೆ ಏನು ಆಗುವುದು ಬೇಡ, ಅವರು ನೂರು ಕಾಲ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

2013 ರಲ್ಲೂ ಸಿದ್ದರಾಮಯ್ಯ ಅವರು ಇದೇ ರೀತಿ ಹೇಳಿದ್ದರು. ಆಗ ಜನ ಅವರನ್ನು ನಂಬಿ ಮತ ಹಾಕಿದ್ದರು. ಆದರೆ, ಸಿದ್ದರಾಮಯ್ಯ ಜನರ ಮತಗಳಿಗೆ ಬೆಲೆ ನೀಡಿಲ್ಲ. ಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ಕೊಲೆ, ಸುಲಿಗೆ ಜಾಸ್ತಿ ಇತ್ತು. ಈಗ ಜನ ಅವರನ್ನು ನಂಬದೆ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಈಗ ಮತ್ತೆ ಅವರನ್ನು ನಂಬುವ ಸ್ಥಿತಿಯಲ್ಲಿ ಜನ ಇಲ್ಲ. ಕನ್ನಡಿಗರು ಇಂತಹ ಮಾತಿಗೆ ಬೆಲೆ ನೀಡಲ್ಲ. ಕನ್ಮಡಿಗರು ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ತಿಳಿಸಿದರು.

SCROLL FOR NEXT