ಸಂಗ್ರಹ ಚಿತ್ರ 
ರಾಜ್ಯ

12 ವರ್ಷದಿಂದ ತಲೆಮರೆಸಿಕೊಂಡಿದ್ದ ಹಂತಕನ ಬಂಧನಕ್ಕೆ ಹೊಸ ಆ್ಯಪ್ ನೆರವು!

ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಎಂಸಿಸಿಟಿಎನ್‌ಎಸ್ (ಮೊಬೈಲ್-ಕ್ರೈಮ್ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್) ಆ್ಯಪ್ ಮೂಲಕ ಬಂಧನಕ್ಕೊಳಪಡಿಸಲಾಗಿದೆ.

ಬೆಂಗಳೂರು: ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಎಂಸಿಸಿಟಿಎನ್‌ಎಸ್ (ಮೊಬೈಲ್-ಕ್ರೈಮ್ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್) ಆ್ಯಪ್ ಮೂಲಕ ಬಂಧನಕ್ಕೊಳಪಡಿಸಲಾಗಿದೆ.

ರಾಮನಗರ ನಿವಾಸಿ ರಮೇಶ್ ಬಂಧಿತ ವ್ಯಕ್ತಿಯಾಗಿದ್ದಾನೆ. ಯಶವಂತಪುರದ ಬಿ.ಕೆ.ನಗರದ 1ನೇ ಮುಖ್ಯರಸ್ತೆಯಲ್ಲಿ ಮಂಗಲವಾರ ರಾತ್ರಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ತಿಳಿದುಬಂದಿದೆ.

ಇತ್ತೀಚೆಗೆ ಪೊಲೀಸ್ ಠಾಣೆಗಳಿಗೆ ಎಂಸಿಸಿಟಿಎನ್‌ಎಸ್ ಮೊಬೈಲ್ ಆ್ಯಪ್ ಮೂಲಕ ಬೆರಳಚ್ಚು ಪರಿಶೀಲಿಸುವ ಡಿವೈಸ್ ಗಳನ್ನು ಗೃಹ ಇಲಾಖೆ ವಿತರಿಸಿದೆ. ಶಂಕಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಡಿವೈಸ್ ಬಳಸಿ ಪೊಲೀಸರು ಬೆರಳಚ್ಚು ಪರಿಶೀಲಿಸಿದಾಗ ಆತ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿದ್ದರೆ ಇದರಿಂದ ಮಾಹಿತಿ ತಿಳಿಯುತ್ತದೆ.

ಅಂತೆಯೇ ರಮೇಶ್ ನನ್ನು ಯಶವಂತಪುರ ಪೊಲೀಸರು ತಪಾಸಣೆ ನಡೆಸಿದಾಗ ಆತ ಕ್ರಿಮಿನಲ್ ಚರಿತ್ರೆ ಬಯಲಾಗಿದೆ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ರಮೇಶ್ ಯಶವಂತಪುರ ಬಿ.ಕೆ. ನಗರದ 1ನೇ ಮುಖ್ಯರಸ್ತೆ ಬದಿ ಕಾರಿ ನಿಲ್ಲಿಸಿಕೊಂಡು ನಿಂತಿದ್ದ. ಚಾಲಕನ ವರ್ತನೆ ಮೇಲೆ ಶಂಕೆಗೊಂಡ ಅದೇ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಸಿ.ರಾಜು ನೇತೃತ್ವದ ತಂಡ ಕೂಡಲೇ ಆತನನ್ನು ವಶಕ್ಕೆ ಪಡೆದು ಬೆರಳಚ್ಚು ಪರಿಶೀಲಿಸಿದ್ದಾರೆ. ದತ್ತಾಂಶದಲ್ಲಿ ಕೊಲೆ ಪ್ರಕಱಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ.

2005ರಲ್ಲಿ ತಾವರೆಕೆ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಬಾಲಾಜಿ ನಗರದಲ್ಲಿ ಮನೆಯೊಂದಕ್ಕೆ ಬಣ್ಣ ಬಳಿಯರು ರಮೇಶ್ ತೆರಳಿದ್ದ. ಆ ಮನೆ ಪಕ್ಕದಲ್ಲೇ ರಮೇಶ್'ಗೆ ಉಳಿದುಕೊಳ್ಳಲು ಬಾಡಿಗೆ ರೂಮನ್ನು ಮನೆ ಮಾಲೀಕರು ಕೊಡಿಸಿದ್ದರು. ಈ ಬಾಡಿಗೆ ರೂಮಿಗೆ ತನ್ನ 8-10 ಸ್ನೇಹಿತರನ್ನು ಸೇರಿಸಿಕೊಂಡು ಆರೋಪಿ ಪಾರ್ಟಿ ಮಾಡುತ್ತಿದ್ದ.

ಇದಕ್ಕೆ ಮನೆ ಮಾಲೀಕರು ಆಕ್ಷೇಪಿಸಿದ್ದರು. ಇದಕ್ಕೆ ಕೆಂಡಾಮಂಡಲಗೊಂಡಿದ್ದ ರಮೇಶ್ ಮಾಲೀಕನನ್ನು ಹತ್ಯೆ ಮಾಡಿದ್ದ. ಪ್ರಕಱಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿ, ಜಾಮೀನು ಪಡೆದು ಹೊರಬಂದಿದ್ದ. 2010ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ.

ಆರೋಪಿಯ ವಿರುದ್ಧ ನ್ಯಾಯಾಲಯ ವಾರೆಂಟ್ ಗಳನ್ನೂ ಕೂಡ ಜಾರಿ ಮಾಡಿತ್ತು. ಆದರೆ, ಆತ ಹಾಜರಾಗಿರಲಿಲ್ಲ. ಈ ಕೊಲೆ ಪ್ರಕರಣದ ಬಳಿಕ ಸಭ್ಯಸ್ಥನಾದ ರಮೇಶ್, ರಾಮನಗರದಲ್ಲಿ ನೆಲೆಸಿದ್ದ. ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಪಾಲ್ಗೊಳ್ಳದೆ ಮದುವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಸಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಇರಾನ್ ಪ್ರತಿಭಟನೆಯಲ್ಲಿ 2000 ಜನ ಸಾವು; ಇದಕ್ಕೆ ಉಗ್ರರು ಕಾರಣ ಎಂದ ಅಧಿಕಾರಿಗಳು

Toxic Teaserನಲ್ಲಿ 'ಟೂ ಮಚ್ ಸೆಕ್ಸ್' ಇದೆಯೇ? CBFCಗೆ ಮತ್ತೊಂದು ದೂರು!

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್, ಈ ಎರಡು ಮೈದಾನಗಳಲ್ಲೇ ಪಂದ್ಯ!

SCROLL FOR NEXT