ಬೆಂಗಳೂರು: ವಾಶ್ ರೂಂ ಬಳಸುವ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಹೈಪರ್ ಮಾರ್ಕೆಟ್ ಒಂದರ ಹೌಸ್ ಕೀಪಿಂಗ್ ಸಿಬ್ಬಂದಿ ಸಿಕ್ಕಿಬಿದ್ದಿದ್ದಾನೆ.
ವಾಶ್‌ರೂಮ್ ಬಳಸಲು ಬಂದಿದ್ದ ಖಾಸಗಿ ಸಂಸ್ಥೆಯ ಎಚ್ ಆರ್ ಮ್ಯಾನೇಜರ ಆರೋಪಿಗಳು ಸ್ಟಾಲ್‌ನ ಕಮೋಡ್‌ನಲ್ಲಿ ನಿಂತು, ವಾಶ್‌ರೂಮ್‌ನೊಳಗೆ ಮಹಿಳೆಯರ ವಿಡಿಯೋ ಚಿತ್ರೀಕರಿಸುವುದನ್ನು ನೋಡಿದ್ದಾರೆ.
ತಕ್ಷಣ ಸ್ಟಾಲ್‌ನಿಂದ ಹೊರಬಂದ ಮಹಿಳೆ, ಆರೋಪಿ ಲಕ್ಷ್ಮಣ್ ಕುಮಾರ್ ಇದ್ದ ಕ್ಯುಬಿಕಲ್‌ನ ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ರೆಸ್ಟ್ ರೂಂ ನಿಂದ ಹೊರಬಂದು, ಹೈಪರ್‌ಮಾರ್ಕೆಟ್‌ನ ಸ್ವಾಗತಕಾರರಿಗೆ ದೂರು ನೀಡಿದರು, ಅವರು ತಮ್ಮ ಸಹೋದ್ಯೋಗಿಯನ್ನು ಕರೆತಂದು ಪರಿಶೀಲನೆ ನಡೆಸಿದ್ದಾರೆ.
ನನ್ನ ಸಹೋದ್ಯೋಗಿ ಬಾಗಿಲು ತಟ್ಟಿದಾಗ ಆರೋಪಿ ಪ್ರತಿಕ್ರಿಯಿಸಲಿಲ್ಲ. ಬಾಗಿಲಿನ ಕೆಳಗಿರುವ ಜಾಗವನ್ನು ಇಣುಕಿ ನೋಡಿದಾಗ, ಆರೋಪಿ ತನ್ನ ಕಾಲುಗಳನ್ನು ಮೇಲಕ್ಕೆ ಎತ್ತಿದ್ದ. ನಂತರ ನನ್ನ ಸಹೋದ್ಯೋಗಿ ಪಕ್ಕದ ಸ್ಟಾಲ್ ಒಳಗೆ ಹೋಗಿ ಮೇಲಿನಿಂದ ಪರಿಶೀಲಿಸಿದರು. ಆರೋಪಿ ಕಮೋಡ್ ಮೇಲೆ ನಿಂತಿದ್ದನ್ನು ನೋಡಿದರು, ಆನಂತರ ಅವನನ್ನು ವಾಶ್‌ರೂಮ್‌ನಿಂದ ಹೊರಗೆ ಎಳೆಯಲಾಯಿತು, ”ಎಂದು 27 ವರ್ಷದ ಮ್ಯಾನೇಜರ್ ಒಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11.20ರ ಸುಮಾರಿಗೆ ವೈಟ್‌ಫೀಲ್ಡ್ ನಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಎಂಟನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಎಚ್ ಆರ್ ಮ್ಯಾನೇಜರ್ ಕೂಡ ಸಹ ಅದೇ ಮಹಡಿಯಲ್ಲಿ ಕೆಲಸ ಮಾಡುತ್ತಾರೆ, ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮ್ಯಾನೇಜರ್ ಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದರು.
ಆದರೆ ಮ್ಯಾನೇಜರ್ ಹೌಸ್ ಕೀಪಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ, ಬದಲಿಗೆ ಆತನನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿದ್ದರು. ತನಗೆ ಬೆಂಬಲ ಸಿಗುತ್ತಿದೆ ಎಂದು ತಿಳಿದ ಆರೋಪಿ ತಾನು ಏನನ್ನೂ ರೆಕಾರ್ಡ್ ಮಾಡಿಲ್ಲ ಎಂದು ಹೇಳಿದನು. ಇದಾದ ನಂತರ ಕೆಲಕಾಲ ವಾಗ್ವಾದ ನಡೆಯಿತು.
ವಿಷಯ ಪೊಲೀಸ್ ಕಂಟ್ರೋಲ್ ರೂಂ ಗೆ ತಿಳಿಯಿತು. ಸ್ಥಳಕ್ಕೆ ಬಂದ ವೈಟ್ ಫೀಲ್ಡ್ ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು.
ದೂರುದಾರ ಮಹಿಳೆಯ ಪತಿ ಸೈಬರ್ ತಜ್ಞರಾಗಿದ್ದು. ಆರೋಪಿಯ ಮೊಬೈಲ್ ಪರಿಶೀಲಿಸಿ, ಮೊಬೈಲ್ ನಲ್ಲಿ ಕೆಲವು ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು ಅವುಗಳನ್ನು ಪುನ ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ 2000 ರ 354 ಸಿ (ವೋಯರಿಸಂ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.