ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಕಡಲೆಕಾಯಿ ಪರಿಷೆ: ವಿವಿಧ ಕಾರ್ಯಕ್ರಮಗಳ ಪಟ್ಟಿ ಇಂತಿದೆ

ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ ನಾಳೆ ಸಿಎಂ ಚಾಲನೆ ನೀಡುತ್ತಿದ್ದು, ಐದು ದಿನ ನಡೆಯುವ ಪಾರಂಪರಿಕ ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕಡಲೆಕಾಯಿ ಪರಿಷೆಗೆ ನಾಳೆ ಸಿಎಂ ಚಾಲನೆ ನೀಡುತ್ತಿದ್ದು, ಐದು ದಿನ ನಡೆಯುವ ಪಾರಂಪರಿಕ ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಸಾಂಸ್ಕೃತಿಕ ಕಾರ್ಯಕ್ರಮ
ನಾಳೆ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಸಂಜೆ 6ರಿಂದ 7.30ರವರೆಗೆ ಶ್ರೀಧರ್ ಸಾಗರ ರವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಸಂಜೆ 6 ರಿಂದ 7.30ರವರೆಗೆ ಶ್ರೀಮತಿ ರಂಗಲಕ್ಷ್ಮೀ ಶ್ರೀನಿವಾಸ್ ಅವರಿಂದ ಬೀದಿ ನಾಟಕ ನಡೆಯಲಿದೆ. ಅಲ್ಲದೆ ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಂಜೆ 6 ರಿಂದ 7.30ರ ವರೆಗೆ ಶ್ರೀಮತಿ ವೀಣಾ ಮುರಳಿಧರ್ ರವರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ನ. 22 ರಂದು ವಿಜಯ ವಿಠ್ಠಲ ಶಾಲೆಯ ವತಿಯಿಂದ ವೈವಿದ್ಯಮಯ ಸಾಂಸ್ಕೃತಿಕ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ದರಣೇಂದ್ರ ಕುಮಾರ್, ಕಡಿಲೆಕಾಯಿ ಪರಿಷೆಯ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಷೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಅಂಗಡಿಗಳಿಗೆ ಅವಕಾಶ ನೀಡಲಾಗಿದ್ದು, ಸುಮಾರು 5 ಲಕ್ಷಕ್ಕೂ ಅಧಿಕ ಜನರು ಪರಿಷೆಗೆ ಆಗಮಿಸುವ ನಿರೀಕ್ಷೆ ಇದೆ. ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿ ಥೀಮ್ ಪಾರ್ಕ್ ನಿರ್ಮಿಸಿದ್ದ ಅದರ ಮಧ್ಯದಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಸಾರ್ವಜನಿಕರಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಎ.ಪಿ.ಎಸ್ ಕಾಲೇಜ್ ಆಟದ ಮೈದಾನ ಮತ್ತು ಕೊಹಿನೂರು ಆಟದ ಮೈದಾನ ಆಶ್ರಮ ವೃತ್ತದಲ್ಲಿ ಕಲ್ಪಿಸಲಾಗಿದೆ. 

ತೆಪ್ಪೋತ್ಸವ..!
ದಶಕದ ಬಳಿಕ ಬಸವನಗುಡಿ ಪರಿಷೆಯಲ್ಲಿ ಈ ಬಾರಿ ಮತ್ತೆ ತೆಪ್ಪೋತ್ಸವ ಆರಂಭವಾಗಲಿದೆ. ಇದು ಪರಿಷೆಯ ಮುಖ್ಯ ಆಕರ್ಷಣೆಯಾಗಲಿದೆ. 2008ರಲ್ಲಿ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ಆಗಿತ್ತು. ಆದಾದ ಬಳಿಕ ನಾನಾ ಕಾರಣಗಳಿಂದ ತೆಪ್ಪೋತ್ಸವ ನಡೆಸಿರಲಿಲ್ಲ. ಈ ಬಾರಿ ಮತ್ತೆ ಅದು ಆರಂಭವಾಗುತ್ತಿದೆ. ಇದು ಪರಿಷೆಗೆ ಹೊಸ ಮೆರಗು ನೀಡಲಿದೆ. ತೆಪ್ಪೋತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಕೆರೆಯಲ್ಲಿನ ಪಾಚಿ, ತ್ಯಾಜ್ಯವನ್ನು ಹೊರಹಾಕಲಾಗುತ್ತಿದೆ. ಇದರ ಜೊತೆಗೆ ಬ್ಯೂಗಲ್ ರಾಕ್ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಥೀಮ್ ಪಾರ್ಕ್ ನಿರ್ಮಿಸಿರುವುದು ಕಡಲೆಕಾಯಿ ಪರಿಷೆಯ ವಿಶೇಷ ಆಕರ್ಷಣೆಯಾಗಿದೆ.

ಬಸವನಗುಡಿ ಪರಿಷೆ ಇತಿಹಾಸ..!
1537 ರಲ್ಲಿ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಬಸವನಗುಡಿ ಬೆಟ್ಟದ ಮೇಲೆ ದೊಡ್ಡ ಬಸವ ದೇವಾಲಯವನ್ನು ಸ್ಥಾಪಿಸಿದರು. ಈ ದೇವಾಲಯವನ್ನು ಸದ್ಯ ಬುಲ್ ಟೆಂಪಲ್ ಎಂದು ಕರೆಯಲಾಗುತ್ತಿದೆ. 1537 ಕ್ಕೂ ಹಿಂದೆ ಸ್ವರ್ಗದಿಂದ ನಂದಿ ಬಂದು ದೇವಸ್ಥಾನದ ಸುತ್ತಮುತ್ತಲು ರೈತರು ಬೆಳೆಯುತ್ತಿದ್ದ ಬೆಳೆಯನ್ನ ತಿಂದು ಹೋಗುತ್ತಿತ್ತು. ಈ ಹಿನ್ನಲೆ ಬೆಟ್ಟದ ಮೇಲೆ ದೊಡ್ಡ ಬಸವಣ್ಣವ ದೇವಾಲಯ ಸ್ಥಾಪಿಸಿ ಪ್ರತಿವರ್ಷ ತಾವು ಬೆಳೆದ ಕಡಲೆಕಾಯಿಯನ್ನ ನಂದಿಗೆ ಅರ್ಪಿಸಲು ಶುರುಮಾಡಿದರು ಎನ್ನುವ ಪ್ರತೀತಿ ಇದೆ. ಹಿನ್ನಲೆ ಅಂದಿನಿಂದ ಇಲ್ಲಿಗೆ ಸುತ್ತಲಿನ ಗ್ರಾಮಗಳ ರೈತರು ಪ್ರತಿ ವರ್ಷ ಬಂದು ತಮ್ಮ ವಾರ್ಷಿಕ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಆ ಸಂಪ್ರದಾಯ ಇಂದಿಗೂ ಮುಂದುವರೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT