ರಾಜ್ಯ

ಮತದಾರರ ಪಟ್ಟಿ ಪರಿಷ್ಕರಣೆ ಲೋಪ: ನ್ಯಾಯಾಂಗ ತನಿಖೆ ಇಲ್ಲ- ಸಿಎಂ ಬೊಮ್ಮಾಯಿ

Srinivas Rao BV

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯೆ ಲೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಕಾಂಗ್ರೆಸ್ ಬೇಡಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಂಗ ತನಿಖೆಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಇದು ಕ್ರಿಮಿನಲ್ ಪ್ರಕರಣ, ತ್ವರಿತವಾಗಿ ತನಿಖೆಯಾಗಬೇಕು.  ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಕೆಲವರನ್ನು ಬಂಧಿಸಲಾಗಿದೆ. ತೀವ್ರ ಗತಿಯಲ್ಲಿ ತನಿಖೆ ನಡೆದಿದೆ ಎಂದು ಹೇಳಿದ್ದಾರೆ. 

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರತಿವರ್ಷ ಇಲ್ಲವೇ ಚುನಾವಣಾ ಸಂದರ್ಭದಲ್ಲಿ ನಡೆಯುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಕೇಳಿ ಬಂದಿರುವ ಆರೋಪಗಳು ಅಪರಾಧ ಪ್ರಕರಣಗಳಾಗಿದೆ. ಹಾಗಾಗಿ, ಪೊಲೀಸ್ ತನಿಖೆಯೇ ಸೂಕ್ತ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. 

ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡಿಎಗೆ ಸಂಬಂಧಿಸಿದಂತೆ ತನಿಖೆ ನಡೆದು, ಈ ಹಗರಣದಿಂದ ಪಾರಾಗಲು ನ್ಯಾಯಾಂಗ ತನಿಖೆ ನೆರವಾಯಿತು. ಇಂತಹ  ಕಾಂಗ್ರೆಸ್‌ ಈಗ ನ್ಯಾಯಾಂಗದ ತನಿಖೆಗೆ ಬೇಡಿಕೆ ಇಡುತ್ತಿದೆ  ಎಂದು ವ್ಯಂಗ್ಯವಾಡಿದ್ದಾರೆ.

SCROLL FOR NEXT