ರಾಜ್ಯ

ರಾಜ್ಯದಲ್ಲಿ ತಗ್ಗಿದ ಮಳೆ, ಚಳಿ ಅಬ್ಬರ ಜೋರು: ಕೊಡಗು, ಕೊಪ್ಪಳ ಸೇರಿದಂತೆ 6 ಜಿಲ್ಲೆಗಳಲ್ಲಿ ತೀವ್ರ ಶೀತ ಅನುಭವ

Sumana Upadhyaya

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನೆರೆಯ ತಮಿಳುನಾಡಿನ ಚೆನ್ನೈ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ರೀತಿಯಲ್ಲಿ ಮಳೆಯುಂಟಾಗಿತ್ತು. ಅದರ ಪ್ರಭಾವ ಕರ್ನಾಟಕದ ಬೆಂಗಳೂರು ಹಾಗೂ ಹಲವು ಜಿಲ್ಲೆಗಳಿಗೆ ಬೀಸಿ ವ್ಯಾಪಕ ಮಳೆಯಾಗಿತ್ತು. ವಾಯುಭಾರ ಕುಸಿತ ಪುದುಚೇರಿ ಮಾರ್ಗವಾಗಿ ಅರಬ್ಬಿ ಸಮುದ್ರದಲ್ಲಿ ಕೊನೆಗೊಂಡಿತ್ತು. 

ಕಳೆದೆರಡು ದಿನಗಳಿಂದ ಮಳೆಯ ಪ್ರಭಾವ ಕಡಿಮೆಯಾಗಿ ಚಳಿಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಚಳಿ ಜೋರಾಗಿದೆ. ಕೊಪ್ಪಳ, ಕೊಡಗಿನಲ್ಲಿ ಇಂದು ಬೆಳಗ್ಗೆ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 

ಬೆಂಗಳೂರಿನಲ್ಲಿ ಇಂದು ವಿಪರೀತ ಚಳಿಯಿದೆ. 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಂದು ಬೆಂಗಳೂರಿನಲ್ಲಿ ದಾಖಲಾಗಿದೆ. ಮುಂಜಾನೆಯಿಂದಲೇ ಮಂಜು ಮುಸುಕಿದ ವಾತಾವರಣವಿದೆ. ಇನ್ನು ಕೆಲ ದಿನಗಳ ಕಾಲ ಇದು ಮುಂದುವರಿಯುವ ಸಾಧ್ಯತೆಯಿದೆ. ಇಂದು ಮತ್ತು ನಾಳೆ ಮಂಜು ಮುಸುಕಿದ ವಾತಾವರಣ ಮುಂದುವರಿಯಲಿದೆ.

ವಾಡಿಕೆಗೆ ಮೊದಲೇ ಚಳಿ: ಸಾಮಾನ್ಯವಾಗಿ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಆರಂಭವಾಗಿ ಜನವರಿ ಕೊನೆ-ಫೆಬ್ರವರಿ ಆರಂಭದವರೆಗೆ ಇರುತ್ತದೆ. ಆದರೆ ಈ ವರ್ಷ ಸತತ ಮಳೆಯಿಂದಾಗಿ ವಾತಾವರಣ ತೇವಾಂಶ ಇರುವುದರಿಂದ ವಾಡಿಕೆಗಿಂತ ಮೊದಲೇ ಚಳಿ ಆರಂಭವಾಗಿದೆ. ತಣ್ಣನೆ ಗಾಳಿ ಬೀಸತೊಡಗಿದೆ. ಹಿಂಗಾರು ಋತುವಿನಲ್ಲಿ ಮಳೆ ಮುಗಿದು ಈಗ ಚಳಿ ಕಾಲಿಟ್ಟಿದೆ.

ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ತಾಪಮಾನದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ಬೆಳಗ್ಗೆ ತೇವಾಂಶ ಹೆಚ್ಚಿರುವುದೇ ಚಳಿ ಹೆಚ್ಚಲು ಕಾರಣ. ವಾಡಿಕೆಯ ಪ್ರಕಾರ ನವೆಂಬರ್‌ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗೆ ರಾಜ್ಯದಲ್ಲಿ ಚಳಿ ಹೆಚ್ಚು ತೀಕ್ಷ್ಣವಾಗಿರುತ್ತದೆ. ಆದರೆ ಈ ಬಾರಿ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ, ಉತ್ತರ ಮತ್ತು ಈಶಾನ್ಯ ದಿಕ್ಕಿನಿಂದ ರಾಜ್ಯದತ್ತ ಬೀಸುತ್ತಿರುವ ಗಾಳಿ ಹಾಗೂ ಗಾಳಿಯಲ್ಲಿನ ತೇವಾಂಶದ ಕಾರಣದಿಂದ ನವೆಂಬರ್‌ಎರಡನೇ ವಾರದಿಂದಲೇ ಮೈ ಕೊರೆಯುವ ಚಳಿ ಶುರುವಾಗಿದೆ.

ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಮುಂಜಾನೆ ಚಳಿ ಆವರಿಸಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ. ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಮುಂಜಾನೆ ಚಳಿ ಆವರಿಸಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ.

<

SCROLL FOR NEXT