ರಾಜ್ಯ

ಬೆಂಗಳೂರು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ: ಸಿಎಂ ಬೊಮ್ಮಾಯಿ ಭರವಸೆ

Manjula VN

ಬೆಂಗಳೂರು: ಬೆಂಗಳೂರಿನಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸೌತ್ ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೊರೆಂಟ್ಸ್ ಅಸೋಸಿಯೇಷನ್‌ನ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ಬೆಂಗಳೂರು ಆದ್ಯತೆಯ ನಗರ. ಇದು ಅತ್ಯಧಿಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ, ಚಲನಶೀಲತೆ, ಸ್ಥಾಪಿತ ಆರ್'ಆ್ಯಂಡ್ ಡಿ ಮತ್ತು ಫಾರ್ಚೂನ್ 500 ಕಂಪನಿಗಳು ಇಲ್ಲಿನೆ. ಇಲ್ಲಿ ಸಮಸ್ಯೆಗಳಿವೆ ಎಂಬುದನ್ನು ನಾನೂ ಒಪ್ಪುತ್ತೇನೆ, ಇತರ ನಗರಗಳಲ್ಲಿಯೂ ಸಮಸ್ಯೆಗಳಿವೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆಗಳಿದೆ. ಬೆಂಗಳೂರಿನ ಎಲ್ಲಾ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ ಎಂದು ಭರವಸೆ ನೀಡಿದರು.

ಪ್ರತಿ ದಿನ ಲಕ್ಷಗಟ್ಟಲೆ ಜನರು ಇಲ್ಲಿಗೆ ಬರುವುದರಿಂದ ಟ್ರಾಫಿಕ್ ಜಾಮ್ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ ಹೋಗಿದೆ, ನಗರದಲ್ಲಿ ಕೆಲಸ ಮಾಡುವವರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳವಾಗಿದೆ. ಹೀಗಾಗಿ ರಾಜ್ಯದಲ್ಲಿ ಐದು ಹೊಸ ನಗರಗಳನ್ನು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಅದನ್ನು ‘ನವ ಕರ್ನಾಟಕ’ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಈ ವರ್ಷ ಮೂರು ಹೊಸ ವಿಮಾನ ನಿಲ್ದಾಣಗಳನ್ನು ತೆರೆಯಲಾಗುವುದು ಮತ್ತು ಮುಂದಿನ ವರ್ಷ ಮೂರು ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಹೊಸ ಏರ್‌ಸ್ಟ್ರಿಪ್ ಕೂಡ ನಿರ್ಮಾಣವಾಗಲಿದೆ.

ಪ್ರಮುಖ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಅಂಜನಾದ್ರಿ ಹಾಗೂ ಜೋಗ ಫಾಲ್ಸ್ ಸೇರಿದಂತೆ ಒಟ್ಟು ಆರು ರೋಪ್ ವೇಗಳ ನಿರ್ಮಾಣವಾಗುತ್ತಿದೆ. ಕರ್ನಾಟಕ ಪ್ರಗತಿಪರ ಮತ್ತು ಸೌಹಾರ್ದಯುತ ರಾಜ್ಯವಾಗಿದೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಆತಿಥೇಯವಾಗಿದೆ. ಉತ್ತಮ ಆತಿಥ್ಯವು ಜನರನ್ನು ಆಕರ್ಷಿಸುವುದಲ್ಲದೆ ರಾಜ್ಯದ ಬಗ್ಗೆ ಉತ್ತಮ ಅನಿಸಿಕೆ ಮೂಡಿಸುತ್ತದೆ.

ಕರ್ನಾಟಕವು ಶೀಘ್ರದಲ್ಲೇ ಎರಡು ಪ್ರವಾಸಿ ತಾಣಗಳನ್ನು ಹೊಂದಲಿದೆ. ಮೈಸೂರು ಹಾಗೂ ಹಂಪಿ ಪ್ರವಾಸಿ ಸರ್ಕಿಟ್ ಹೊಂದಲಿದೆ. ಒಂದು ಟಿಕೆಟ್ ನಲ್ಲಿ ಎಲ್ಲವನ್ನು ನೋಡುವ ವ್ಯವಸ್ಥೆ ಕಲ್ಪಿಸಲಾಗುವುದು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯ. ಬೆಂಗಳೂರನ್ನು ಎಲ್ಲರೂ ಪ್ರೀತಿಸುತ್ತಾರೆ. ಪ್ರತಿ ದಿನ ಐದರಿಂದ ಹತ್ತು ಸಾವಿರ ವಿಜ್ಞಾನಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ವಿಶ್ವದ ಯಾವುದೇ ರಾಜ್ಯದಲ್ಲಿರದ 400 ಆರ್ ಆಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ದೇಶದಲ್ಲಿಯೇ ಅತಿ ಹೆಚ್ಚಿನ ಜನರು ಬಂದು ಹೋಗುವ ತಾಣ ಬೆಂಗಳೂರು ಎಂದರು.

ಮಹಿಳೆಯರು ಮತ್ತು ಯಾತ್ರಾರ್ಥಿಗಳಂತೆ ಪ್ರತಿಯೊಂದು ಕ್ಷೇತ್ರಕ್ಕೂ ಪ್ರತ್ಯೇಕವಾದ ಹೊಸ ಪ್ರವಾಸೋದ್ಯಮ ಕ್ರಿಯಾ ಯೋಜನೆ ಇರಲಿದೆ. ಜಿ.ಎಸ್.ಟಿ ಯಲ್ಲಿ ರಿಯಾಯಿತಿ ನೀಡುವ ಬಗ್ಗೆ ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

SCROLL FOR NEXT