ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಮರಾಠಿಯಲ್ಲಿ ಕಪ್ಪು ಬಣ್ಣದಲ್ಲಿ ಬರಹ 
ರಾಜ್ಯ

ಬೆಳಗಾವಿ ಗಡಿ ವಿವಾದ: ಕರ್ನಾಟಕದ ಬಸ್ಸುಗಳಿಗೆ ಕಪ್ಪು ಮಸಿ, ಮರಾಠಿಯಲ್ಲಿ ಬರೆದು ಪುಂಡಾಟಿಕೆ

ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ ಮತ್ತೆ ಆರಂಭವಾಗಿದೆ. ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಹೊರಹಾಕಿದ ಬೆನ್ನಲ್ಲೇ ಇಂದು ಪ್ರತಿಭಟನೆ ಆರಂಭಿಸಿರುವ ಮರಾಠ ಸಂಘದ ಸದಸ್ಯರು ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ.

ಪುಣೆ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಮರಾಠಿ ಭಾಷಿಕರ ಪುಂಡಾಟಿಕೆ ಮತ್ತೆ ಆರಂಭವಾಗಿದೆ. ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಹೊರಹಾಕಿದ ಬೆನ್ನಲ್ಲೇ ಇಂದು ಪ್ರತಿಭಟನೆ ಆರಂಭಿಸಿರುವ ಮರಾಠ ಸಂಘದ ಸದಸ್ಯರು ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ.

ಈ ವೇಳೆ ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದಲ್ಲ ಎಂದು ಘೋಷಣೆಯನ್ನೂ ಕೂಗಿದ್ದಾರೆ.ಮರಾಠಿ ಭಾಷಿಕ ಪುಂಡಾಟ ಮತ್ತೆ ಮಿತಿ ಮೀರಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿಯಲಾಗಿದೆ.ದೌಂಡ್ ಗ್ರಾಮದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳೆದು ಪುಂಡಾಟಿಕೆ ಮೆರೆದಿದ್ದಾರೆ. 

ನಿಪ್ಪಾಣಿ - ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಮಸಿ ಬಳಿಯಲಾಗಿದೆ. ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮ ಬಳಿ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರಿಂದ ಮಸಿ ಬಳಿಯಲಾಗಿದೆ. 

ಏಕೆ ಪ್ರತಿಭಟನೆ?: ಮಹಾರಾಷ್ಟ್ರದ ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದಲ್ಲ ಎಂದು ಘೋಷಣೆ ಕೂಗಿದ್ದಾರೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ

'ಫುಟ್‌ಪಾತ್‌ಗೆ ಮತ್ತೆ ಕನ್ನ ಹಾಕಿದ್ರೆ FIR, ಪೊಲೀಸ್-ಪಾಲಿಕೆ ಜಂಟಿ ಟಾಸ್ಕ್‌ಫೋರ್ಸ್'; ಕೃಷ್ಣ ಬೈರೇಗೌಡ ಖಡಕ್‌ ಎಚ್ಚರಿಕೆ

Cricket: 'ಜನಪ್ರಿಯತೆಗಿಂತ ನಿರ್ಧಾರ ಮುಖ್ಯ'.. ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ Ajit Agarkar ಮುಂದುವರಿಕೆ ಕುರಿತು ಕೊನೆಗೂ ಮೌನ ಮುರಿದ BCCI!

ಜಂತರ್ ಮಂತರ್‌ನಲ್ಲಿ ಹಲ್ಲೆ ಆರೋಪ: 72 ಗಂಟೆಗಳಲ್ಲಿ ಸ್ವತಂತ್ರ ಭಾರದ್ವಾಜ್‌ ಬಂಧಿಸುವುದಾಗಿ ದೆಹಲಿ ಪೊಲೀಸರ ಭರವಸೆ!

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ