ರಾಜ್ಯ

ಕಣ್ಣೀರು ತಂದ ಈರುಳ್ಳಿ: 205 ಕೆಜಿ ಉಳ್ಳಾಗಡ್ಡಿ ಮಾರಾಟ ಮಾಡಿದ ಗದಗ ರೈತನಿಗೆ ಸಿಕ್ಕಿದ್ದು ಬರೀ 8 ರು. 36 ಪೈಸೆ!

Shilpa D

ಗದಗ: ಇತ್ತೀಚೆ ತರಕಾರಿ ಬೆಳೆಗಳು ಹುಚ್ಚುಚ್ಚಾಗಿ ಏರಿಳಿತ ಕಾಣುತ್ತಿವೆ, ಆದರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.

ಗದಗದ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಹಣ ಪಡೆದಿದ್ದಾರೆ. ಇದರಿಂದ ಕಂಗೆಟ್ಟ ರೈತ ತನ್ನ ಉತ್ಪನ್ನಗಳನ್ನು ಬೆಂಗಳೂರಿಗೆ ತರದಂತೆ ಇತರ ರೈತರಿಗೆ ಎಚ್ಚರಿಕೆ ನೀಡಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ರಸೀದಿ ವೈರಲ್ ಆಗಿದೆ.

ಯಶವಂತಪುರ ಮಾರುಕಟ್ಟೆಯಲ್ಲಿಈರುಳ್ಳಿ ಮಾರಾಟ ಮಾಡಲು ಸುಮಾರು 50 ರೈತರು 415 ಕಿಮೀ ನಿಂದ ಬರುತ್ತಾರೆ, ಕ್ವಿಂಟಾಲ್ ಈರುಳ್ಳಿಗೆ 500 ರು ಇದ್ದ ಬೆಲೆ ಏಕಾ ಏಕಿ 200 ರುಪಾಯಿಗೆ ಕುಸಿದಿದೆ.

ಬಿಲ್ ವಿತರಿಸಿದ ಸಗಟು ವ್ಯಾಪಾರಿ ಈರುಳ್ಳಿಯನ್ನು ಕ್ವಿಂಟಾಲ್​ಗೆ 200 ರೂ. ಎಂದು ಮೌಲ್ಯೀಕರಿಸಿದ್ದಾರೆ. ಆದರೆ ಪೋರ್ಟರ್ ಶುಲ್ಕವಾಗಿ 24 ರೂ., ಸರಕು ಸಾಗಣೆಗೆ 377.64 ರೂ.ಗಳನ್ನು ಕಡಿತಗೊಳಿಸಿದ ನಂತರ ಪಾವಡೆಪ್ಪ ಹಳ್ಳಿಕೇರಿ ಅವರಿಗೆ 8.36 ರೂ.ಗಳನ್ನು ನೀಡಿದ್ದಾರೆ.

ಕೋಪಗೊಂಡ ರೈತರು, ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇದೀಗ ಪ್ರತಿಭಟನೆಗೆ ಯೋಜಿಸುತ್ತಿದ್ದಾರೆ.ಈ ವರ್ಷ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗದಗದ ನಾವು ರೈತರು ಬಾಧಿತರಾಗಿದ್ದೇವೆ. ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ. ಪುಣೆ ಮತ್ತು ತಮಿಳುನಾಡಿನಿಂದ ತಮ್ಮ ಉತ್ಪನ್ನಗಳನ್ನು ಯಶವಂತಪುರಕ್ಕೆ ತರುವ ರೈತರು ತಮ್ಮ ಬೆಳೆ ಉತ್ತಮವಾಗಿರುವುದರಿಂದ ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ. ಆದರೂ ನಾವ್ಯಾರೂ ಬೆಲೆ ಇಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ನೊಂದ ರೈತ ಪಾವಡೆಪ್ಪ ಹೇಳಿದ್ದಾರೆ.

ಗದಗ ಮತ್ತು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಯಶವಂತಪುರ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಇತರ ರೈತರನ್ನು ಎಚ್ಚರಿಸಲು ನಾನು ರಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದಾಗಿ ಹೇಳಿದ್ದಾರೆ. ಬೆಳೆ ಬೆಳೆದು ಮಾರಾಟ ಮಾಡಲು ನಾನು 25 ಸಾವಿರ ರು ಹಣ ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.

SCROLL FOR NEXT