ತೀರ್ಥಹಳ್ಳಿಯಲ್ಲಿ ಬಸವರಾಜ ಬೊಮ್ಮಾಯಿ 
ರಾಜ್ಯ

ಶರಾವತಿ ಸಂತ್ರಸ್ತರು ಸಮಸ್ಯೆಯೊಂದಿಗೆ ಜೀವಿಸುವಂತೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಂಡಿವೆ ಹಿಂದಿನ ಸರ್ಕಾರಗಳು: ಬೊಮ್ಮಾಯಿ

60 ವರ್ಷವಾದರೂ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂಬ ನೋವು ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಯಲ್ಲಿ ತಿಳಿಸಿದರು.

ಶಿವಮೊಗ್ಗ: ಜನರ ಬದುಕಿನ ವಿಚಾರ ಬಂದಾಗ ಎಲ್ಲರೂ ಒಗ್ಗೂಡಬೇಕು. ಇಲ್ಲಿ ರಾಜಕೀಯ ಮಾಡಬಾರದು. 60 ವರ್ಷವಾದರೂ ಶರಾವತಿ ಸಂತ್ರಸ್ಥರ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂಬ ನೋವು ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಯಲ್ಲಿ ತಿಳಿಸಿದರು.

ತೀರ್ಥಹಳ್ಳಿಯಲ್ಲಿ  ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದ ಅನುಮತಿ ಪಡೆದು ಡಿಸೆಂಬರ್ ಅಂತ್ಯದೊಳಗೆ ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಿ ಎಲ್ಲರಿಗೂ ಹಕ್ಕುಪತ್ರ ನೀಡುವುದಾಗಿ  ಘೋಷಿಸಿದರು.

‘ಶರಾವತಿ ಸಂತ್ರಸ್ತರ ಸಮಸ್ಯೆಬಹಳ ವರ್ಷಗಳಿಂದ ಇದೆ. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನವೇ ಈ ಸಮಸ್ಯೆ ಪರಿಹರಿಸಬಹುದಾಗಿತ್ತು. ಆಗ ಈ ಬಗ್ಗೆ ಚಿಂತನೆ ನಡೆಸದೇ ರಾಜಕಾರಣ ಮಾಡಿಕೊಂಡು ಬಂದವರು ಇವತ್ತು ಅದನ್ನೇ ಮಾಡುತ್ತಿದ್ದಾರೆ. ಸಂತ್ರಸ್ತರು ಸಮಸ್ಯೆಯೊಂದಿಗೆ ಜೀವಿಸುವಂತೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಒಂದೇ ಸಮಸ್ಯೆ ಇಟ್ಟುಕೊಂಡು ಎಷ್ಟು ಬಾರಿ ರಾಜಕೀಯ ಲಾಭ ಪಡೆಯುತ್ತೀರಿ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಇಅರಣ್ಯ ಸಂರಕ್ಷಣೆ ಕಾಯ್ದೆಯಡಿ ಕೇಂದ್ರದ ಅನುಮತಿ ಪಡೆಯದೇ ಶರಾವತಿ ಸಂತ್ರಸ್ತರಿಗೆ ರಾಜ್ಯ ಸರ್ಕಾರ ನೀಡಿದ್ದ ಅರಣ್ಯ ಭೂಮಿ ಮಂಜೂರಾತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ 25,000 ಮುಳುಗಡೆ ಸಂತ್ರಸ್ತ ಕುಟುಂಬಗಳು ಅತಂತ್ರವಾಗಿದ್ದು, ಮುಖ್ಯಮಂತ್ರಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಪರಿಹಾರ ನೀಡಲು ಇದ್ದ ಅವಕಾಶಗಳು ಶರಾವತಿ ಯೋಜನೆ ಆಗಿದ್ದು 1978ರಲ್ಲಿ. ಅದಾದ ಬಳಿಕ ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿತ್ತು. ಆಗಲೇ ಯೋಜನೆಗೆ ಜಾಗ ಬಿಟ್ಟುಕೊಟ್ಟವರಿಗೆ ಪರಿಹಾರ ನೀಡಲು ಅವಕಾಶವಿತ್ತು ಎಂದು ಸಿಎಂ ತಿಳಿಸಿದರು.

1978ಕ್ಕಿಂತಲೂ ಮೊದಲು ಮೀಸಲು ಅರಣ್ಯ ಯಾವುದು, ವನ್ಯಜೀವಿ ಅರಣ್ಯ ಯಾವುದು ಅನ್ನುವುದರ ಮಾಹಿತಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಸರ್ವೇ ಮಾಡಿದಾಗ ಶರಾವತಿ ಯೋಜನೆಗೆ ಜಾಗ ಬಿಟ್ಟುಕೊಟ್ಟವರ ಬಳಿ ಇರುವ ಜಾಗ ಹೊರತು, ಉಳಿದ ಜಾಗವನ್ನು ಅರಣ್ಯ ಎಂದು ಘೋಷಿಸಲು ಅವಕಾಶವಿತ್ತು.1978ರಿಂದ 1980ರವರೆಗೆ ಮರು ಸರ್ವೆಗೆ ಅವಕಾಶವಿತ್ತು. ಆಗಲೂ ಶರಾವತಿ ಸಂತ್ರಸ್ಥರಿಗೆ ಜಮೀನು ಕೊಡಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

West Asia Conflict ಎಫೆಕ್ಟ್: ಗಗನಕ್ಕೇರುತ್ತಿದೆ ಜಾಗತಿಕ ತೈಲ ದರ, $100 ತಲುಪಿದ ಕಚ್ಚಾ ತೈಲ ಬೆಲೆ..!

'ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ, ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ': ವಿಜಯ್ ಮಲ್ಯ