ರಾಜ್ಯ

ಜಾಗತಿಕ ಟಿವಿ ಚಾನೆಲ್‌ಗಳು ಕನ್ನಡ ಭಾಷೆಯಲ್ಲಿಯೂ ಕಾರ್ಯಕ್ರಮ ಪ್ರಸಾರ ಮಾಡಬೇಕು: ಸಚಿವ ವಿ ಸುನಿಲ್ ಕುಮಾರ್

Manjula VN

ಬೆಂಗಳೂರು: ಅನಿಮಲ್ ಪ್ಲಾನೆಟ್, ಬಿಬಿಸಿ ಅರ್ಥ್ ಮತ್ತು ನ್ಯಾಟ್‌ಜಿಯೊ ವೈಲ್ಡ್‌ನಂತಹ ಜಾಗತಿಕ ಜ್ಞಾನ ಆಧಾರಿತ ಟೆಲಿವಿಷನ್ ಚಾನೆಲ್‌ಗಳು ಕನ್ನಡ ಭಾಷೆಯಲ್ಲಿಯೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ನೋಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವರಿಗೆ ಸುನೀಲ್ ಕುಮಾರ್ ಅವರು ನವೆಂಬರ್ 25 ರಂದು ಪತ್ರ ಬರೆದಿದ್ದು, ಪತ್ರದಲ್ಲಿ ಜಾಗತಿಕ ಟಿವಿ ವಾಹಿನಿಗಳು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಆದೇ ರೀತಿ ಕನ್ನಡದಲ್ಲಿಯೂ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕನ್ನಡಿಗರು ಪ್ರಧಾನ ಜ್ಞಾನ/ಇನ್ಫೋಟೈನ್‌ಮೆಂಟ್ ಚಾನೆಲ್‌ಗಳನ್ನು ಕನ್ನಡಕ್ಕೆ ಡಬ್ ಮಾಡದ ಕಾರಣ ಅವುಗಳನ್ನು ಆನಂದಿಸುವುದರಿಂದ ವಂಚಿತರಾಗುತ್ತಿದ್ದಾರೆ. ಕನ್ನಡಿಗರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಜಾಗತಿಕ ಟಿವಿ ಚಾನೆಲ್‌ಗಳನ್ನು ಕನ್ನಡ ಭಾಷೆಗೆ ಡಬ್ ಮಾಡಲು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಡಬೇಕೆಂಬುದು ವಿನಂತಿಸಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.

SCROLL FOR NEXT