ರಾಜ್ಯ

ಬೆಂಗಳೂರು: ಲೊಕೊ ಪೈಲಟ್ ಮುಂಜಾಗ್ರತೆಯಿಂದ ಟ್ರ್ಯಾಕ್ ಮೇಲೆ ಮಲಗಿದ್ದ ಮಹಿಳೆಯ ರಕ್ಷಣೆ

Ramyashree GN

ಬೆಂಗಳೂರು: ಬೈಯಪ್ಪನಹಳ್ಳಿ ನಿಲ್ದಾಣದ ಲೂಪ್ ಲೈನ್‌ನಲ್ಲಿ ರೈಲು ಬರುತ್ತಿದ್ದಾಗ ಹಳಿಗಳ ಮೇಲೆ ಮಲಗಿದ್ದ 24 ವರ್ಷದ ಮಹಿಳೆಯನ್ನು ಕಂಡ ಬೆಂಗಳೂರು ರೈಲ್ವೆ ವಿಭಾಗದ ಲೊಕೊ ಪೈಲಟ್ (ಎಲ್‌ಪಿ) ಅಲರ್ಟ್ ಆಗಿ ಆಕೆಯನ್ನು ರಕ್ಷಿಸಿದ್ದಾರೆ. ಲೊಕೊ ಪೈಲಟ್ ಖಾಲಿದ್ ಅಹ್ಮದ್ ಅವರು ಮಹಿಳೆಯನ್ನು ಕಂಡ ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ.

ಅಕ್ಟೋಬರ್ 1 ರಂದು ಬೆಳಿಗ್ಗೆ 9.20 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಅಹ್ಮದ್ ಅವರು ಬೆಂಗಳೂರು-ಕೋಲಾರ ಡೆಮು ವಿಶೇಷ (ರೈಲು ಸಂಖ್ಯೆ. 06387) ಅನ್ನು ಚಾಲನೆ ಮಾಡುತ್ತಿದ್ದಾಗ ಮಹಿಳೆಯನ್ನು ರಕ್ಷಿಸಿದ್ದಾರೆ. 'ಅವರು ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಆಕೆ ಅಳುತ್ತಿದ್ದಳು ಮತ್ತು ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳಲು ಉತ್ಸುಕಳಾಗಿದ್ದಳು. ಆಕೆ ಮತ್ತೆ ಟ್ರ್ಯಾಕ್‌ಗಳ ಮಧ್ಯೆ ನಡೆಯಲು ಪ್ರಾರಂಭಿಸಿದಳು' ಎಂದು ಪ್ರಕಟಣೆ ತಿಳಿಸಿದೆ.

ನಂತರ, ಎಲ್‌ಪಿ ಬೈಯಪ್ಪನಹಳ್ಳಿ ಕ್ಯಾಬಿನ್ ಸ್ಟೇಷನ್ ಮಾಸ್ಟರ್‌ಗೆ ವಾಕಿ-ಟಾಕಿ ಮೂಲಕ ಕರೆ ಮಾಡಿದ್ದಾರೆ. ಸ್ಟೇಷನ್ ಮಾಸ್ಟರ್ ಎಸ್.ಕೆ. ಬಿಸ್ವಾಸ್ ಮತ್ತು ಪಾಯಿಂಟ್ ಮ್ಯಾನ್ ಅನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದರು ಎಂದು ಪ್ರಕಟಣೆ ತಿಳಿಸಿದೆ.

ಮಹಿಳೆಯನ್ನು ರೈಲ್ವೇ ಸಂರಕ್ಷಣಾ ಪಡೆಗೆ ಹಸ್ತಾಂತರಿಸಲಾಯಿತು. ಅಲ್ಲಿ ಆಕೆಗೆ ಸಲಹೆ ನೀಡಲಾಯಿತು ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT