ರಾಜ್ಯ

ಮೈಸೂರು ದಸರಾ: ಚಾಮುಂಡೇಶ್ವರಿ ದೇವಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ; ಜಂಬೂ ಸವಾರಿಗೆ ಚಾಲನೆ!

Vishwanath S

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

3ನೇ ಬಾರಿಗೆ ಅಭಿಮನ್ಯು ಆನೆ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗಿರುವ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದೆ. ಅಭಿಮನ್ಯುವಿನೊಂದಿಗೆ ಅರ್ಜುನ ನಿಶಾನೆ ಆನೆ, ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಲಿವೆ. ಒಟ್ಟು 9 ಆನೆಗಳು ರಾಜ ಬೀದಿಗಳಲ್ಲಿ ಸಾಗುತ್ತಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಬಂಜೂಸವಾರಿ ಸಾಗಲಿದೆ. 

ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗಿದ್ದು ಎರಡು ವರ್ಷ ಕೊರೋನಾದಿಂದ ಕಳೆಗುಂದಿದ್ದ ಮಹೋತ್ಸವ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಭಾರೀ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದರು.

ಸ್ತಬ್ಧಚಿತ್ರ ಪ್ರದರ್ಶನ ಮೆರವಣಿಗೆ: ಗಮನ ಸೆಳೆಯಲಿದೆ ಅಪ್ಪು ಮೂರ್ತಿ
ಈ ಭಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು ಭಾಗಿಯಾಗಿವೆ. ಈಗಾಗಲೇ ಸ್ತಬ್ಧಚಿತ್ರ  ಪ್ರದರ್ಶನ ಮೆರವಣಿಗೆ ಪ್ರಾರಂಭವಾಗಿದೆ. ಈ ಬಾರಿ ವಿಶೇಷವಾಗಿ ನಟ ದಿ. ಪುನೀತ್​ ರಾಜಕುಮಾರ್​ ಭಾವಚಿತ್ರ ಇರುವ ಸ್ತಬ್ಧಚಿತ್ರ ಸೇರಿದೆ. ಮೈಸೂರಿನಲ್ಲಿ ದಸರಾ ವೈಭವದ ಸಂಭ್ರಮ ಮನೆಮಾಡಿದೆ. ಜಂಬೂ ಸವಾರಿ ನೋಡಲು ಅರಮನೆಗೆ ಸಾಕಷ್ಟು ಜನರು ಆಗಮಿಸಿದ್ದು ಜಂಬೂ ಸವಾರಿಯನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

SCROLL FOR NEXT