ಸಾಂದರ್ಭಿಕ ಚಿತ್ರ 
ರಾಜ್ಯ

ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ; ನೀರಿನಲ್ಲಿ ಮುಳುಗಿ ಇಬ್ಬರ ಸಾವು

ರಾಜ್ಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ದುರಂತ ಸರಣಿ ಮುಂದುವರೆದಿದ್ದು, ಇಂದು ಹಾಸನದಲ್ಲಿ ಈಜಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

ಹಾಸನ: ರಾಜ್ಯದಲ್ಲಿ ಗಣೇಶ ಮೂರ್ತಿ ವಿಸರ್ಜನೆ ದುರಂತ ಸರಣಿ ಮುಂದುವರೆದಿದ್ದು, ಇಂದು ಹಾಸನದಲ್ಲಿ ಈಜಲು ಹೋಗಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ.

ಗುರುವಾರ ರಾತ್ರಿ ಹಾಸನದ ಅರಸೀಕೆರೆ ತಾಲೂಕಿನ ವಡಗೇರಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಈಜಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 

ಮೃತರನ್ನು ಪ್ರವೀಣ್ (27 ವರ್ಷ) ಮತ್ತು ನಾಗರಾಜ್ (31 ವರ್ಷ) ಎಂದು ಗುರುತಿಸಲಾಗಿದೆ. ಗಣೇಶ ಮೆರವಣಿಗೆಯ ನಂತರ ಗಣೇಶ ಮೂರ್ತಿಯ ವಿಸರ್ಜಿಸಿದ ಬಳಿಕ ಇಬ್ಬರೂ ಈಜುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ಮೃತದೇಹಗಳನ್ನು ಹೊರತೆಗೆದು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. 

ದುರದೃಷ್ಟವಶಾತ್ ಬೆಂಗಳೂರಿನಿಂದ ಬಂದಿದ್ದ ನಾಗರಾಜ್ ಅವರ ಅಣ್ಣ ಮಧು ಎಂಬಾತ ಶುಕ್ರವಾರ ಆಸ್ಪತ್ರೆಯಲ್ಲಿ ಮೃತ ಸಹೋದರನನ್ನು ನೋಡುವ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಗ್ರಾಮಸ್ಥರ ಪ್ರಕಾರ, ಮೃತ ನಾಗರಾಜ್ ಮತ್ತು ಪ್ರವೀಣ್ ಗ್ರಾಮದ ಮುಖಂಡರ ಎಚ್ಚರಿಕೆಯನ್ನು ಲೆಕ್ಕಿಸದೆ ವಿಗ್ರಹವನ್ನು ಮುಳುಗಿಸಿದ ನಂತರ ತುಂಬಿದ ಹಳ್ಳಕ್ಕೆ ಹಾರಿದ್ದಾರೆ. ಈ ವೇಳೆ ಆಯತಪ್ಪಿ ನಿಯಂತ್ರಣ ಸಿಗದೇ ಮುಳುಗಿದ್ದಾರೆ. ಸ್ಥಳದಲ್ಲಿದ್ದ ಜನರು ಅವರನ್ನು ರಕ್ಷಿಸಲು ಮುಂದಾದರಾದರೂ ಅದು ಸಾಧ್ಯವಾಗಲಿಲ್ಲ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ತಮಿಳುನಾಡಿನ ನೂತನ ಸಿಎಂ ಆಗಿ TVK ಮುಖ್ಯಸ್ಥ ವಿಜಯ್ ಪದಗ್ರಹಣ ಸಮಾರಂಭಕ್ಕೆ Rahul Gandhi, ಹೊಸ ಮೈತ್ರಿಕೂಟ ರಚನೆ ಸಂಕೇತ!

ಗುಜರಾತ್ ಟೈಟನ್ಸ್‌ಗೆ ಸತತ 4ನೇ ಗೆಲುವು: 77 ರನ್‌ಗಳಿಂದ ರಾಜಸ್ಥಾನಕ್ಕೆ ಹೀನಾಯ ಸೋಲು, 4ನೇ ಸ್ಥಾನಕ್ಕೆ ಕುಸಿದ RCB!

ಪಾಕ್ ISI ಮಾಡ್ಯೂಲ್ ಬಯಲಾದ ಬೆನ್ನಲ್ಲೇ ಉಗ್ರ ದಾಳಿಯ ಬಗ್ಗೆ ಗುಪ್ತಚರ ಎಚ್ಚರಿಕೆ: ದೆಹಲಿಯಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ಸಿಎಂ ಆಯ್ಕೆ ಕಗ್ಗಂಟು: ಮೂವರು ಘಟಾನುಘಟಿಗಳ ನೇರ ಹಣಾಹಣಿ, ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್!

SCROLL FOR NEXT