ರಾಜ್ಯ

ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

Ramyashree GN

ಬೆಂಗಳೂರು: ಮುಂಬರುವ ಡಾ. ಕೆ ಶಿವರಾಮ ಕಾರಂತ ಲೇಔಟ್‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವಂತೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಗೆ (ಜೆಸಿಸಿ) ಸುಪ್ರೀಂ ಕೋರ್ಟ್ ಹೇಳಿದೆ. ಈ ಸಮಿತಿಯು ಲೇಔಟ್ ರೂಪಿಸುವ ಕುರಿತು ಮೇಲ್ವಿಚಾರಣೆ ಮಾಡುತ್ತದೆ.

‘ಬಿಡಿಎ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಮತ್ತು ಇತರೆ’ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ. ಡಾ. ಶಿವರಾಮ ಕಾರಂತ್ ಲೇಔಟ್ ನಿರ್ಮಾಣದ ಮೇಲ್ವಿಚಾರಣೆಗೆ ನಾವು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯನ್ನು ಕೋರುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

ಜೆಸಿಸಿ ದಕ್ಷತೆಗೆ ಹೆಸರುವಾಸಿಯಾಗಿರುವ ಕಾರಣ ಬಿಡಿಎಯ ಎರಡನೇ ಅತಿದೊಡ್ಡ ಲೇಔಟ್ ಆಗಿರುವ ಕಾರಂತ ಬಡಾವಣೆಯ ಕಾಮಗಾರಿ ವೇಗಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವು ಮುಖ್ಯವಾಗಿ ಉದ್ದೇಶಿಸಲಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.

ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಗ್ರಾಮಗಳಲ್ಲಿ ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ 2,250 ಎಕರೆ ಭೂಮಿಯಲ್ಲಿ ಒಟ್ಟು 25,000 ನಿವೇಶನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.

ಈ ಮೂಲಕ ಎರಡನೇ ಬಾರಿಗೆ ಬಡಾವಣೆಯ ರಕ್ಷಣೆಗೆ ನ್ಯಾಯಾಲಯ ಮುಂದಾಗಿದೆ. ಕಾರಂತ ಬಡಾವಣೆಗೆ 2008ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ, ಹಲವು ಭೂ ಮಾಲೀಕರು ತಮ್ಮ ಜಮೀನು ಸ್ವಾಧೀನಪಡಿಸಿಕೊಳ್ಳದಂತೆ ಪ್ರಕರಣ ದಾಖಲಿಸಿದ್ದರಿಂದ 2015ರಲ್ಲಿ ಹೈಕೋರ್ಟ್ ಬಡಾವಣೆಯ ನಿರ್ಮಾಣವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಬಿಡಿಎ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, 2018 ರ ಆಗಸ್ಟ್‌ನಲ್ಲಿ ಬಿಡಿಎ ಪರವಾಗಿ ತೀರ್ಪು ನೀಡಿತು ಮತ್ತು ಲೇಔಟ್ ನಿರ್ಮಾಣಕ್ಕೆ ಆದೇಶ ನೀಡಿತು.

ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರ ಹೊರತಾಗಿ, ಬಿಡಿಎ ಮಾಜಿ ಆಯುಕ್ತ ಜಯಕರ್ ಜೆರೋಮ್ ಮತ್ತು ನಿವೃತ್ತ ಡಿಜಿಪಿ ಎಸ್.ಟಿ. ರಮೇಶ್ ಅವರನ್ನೊಳಗೊಂಡಂತೆ ನಿವೃತ್ತ ಸರ್ಕಾರಿ ಅಧಿಕಾರಿಗಳ ಸಮಿತಿಯನ್ನು ರಚಿಸಿದ್ದಾರೆ.

SCROLL FOR NEXT