ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ 'Emirates EK 562' ಮೊದಲ ಬಾರಿಗೆ ಬೆಂಗಳೂರಿಗೆ ಆಗಮನ

ಇದೇ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸೂಪರ್‌ ಜಂಬೋ ಏರ್ ಬಸ್‌ ಶುಕ್ರವಾರ ಬೆಂಗಳೂರಿಗೆ ಬಂದಿಳಿದಿದೆ.

ಬೆಂಗಳೂರಿಗೆ ಬಂದಿಳಿದ ವಿಶ್ವದ ಅತೀ ದೊಡ್ಡ ವಾಣಿಜ್ಯ ವಿಮಾನ
Srinivasa Murthy VN
Updated On : 14 Oct 2022, 6:33 pm

ಬೆಂಗಳೂರು: ಇದೇ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸೂಪರ್‌ ಜಂಬೋ ಏರ್ ಬಸ್‌ ಶುಕ್ರವಾರ ಬೆಂಗಳೂರಿಗೆ ಬಂದಿಳಿದಿದೆ.

ಎಮಿರೇಟ್ಸ್ ಸಂಸ್ಥೆಯ EK 562 ಸಂಖ್ಯೆ ಸೂಪರ್‌ ಜಂಬೋ ಏರ್ ಬಸ್‌ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಎಮಿರೈಟ್ಸ್‌ ಏರ್‌ಲೈನ್ಸ್‌ನ ಈ ಬೃಹತ್‌ ವಿಮಾನವೂ ಡಬಲ್‌ ಡೆಕ್ಕರ್‌ ವಿಮಾನವಾಗಿದ್ದು, ಬೆಳಿಗ್ಗೆ 10 ಗಂಟೆಗೆ ದುಬೈನಿಂದ ಹೊರಟು, ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ತಲುಪಿದೆ. ಪುನಃ ಮತ್ತೆ ವಿಮಾನವೂ ಬೆಂಗಳೂರಿನಿಂದ ಸಂಜೆ 6.40ಕ್ಕೆ ಹೊರಟು ರಾತ್ರಿ 9ಕ್ಕೆ ದುಬೈ ತಲುಪಲಿದೆ.

Advertisement

Advertisement

ಈ ಹಿಂದೆಯೇ ಎಮಿರೇಟ್ಸ್‌ ಏರ್‌ಲೈನ್ಸ್‌ ಘೋಷಿಸಿದಂತೆ, ಜಂಬೋ ಜೆಟ್‌ನ ಮೊದಲ ಹಾರಾಟ ಅಕ್ಟೋಬರ್‌ 30ರ ರಾತ್ರಿ ದುಬೈನಿಂದ ಟೇಕಾಫ್‌ ಆಗಿ ಅ.31ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ, ಎರಡು ವಾರದ ಮುನ್ನವೇ ಬೃಹತ್‌ ಲೋಹದ ಹಕ್ಕಿ ಬೆಂಗಳೂರು ತಲುಪಿರುವುದು ವಿಮಾನ ಪ್ರಯಾಣಿಕರಲ್ಲಿ ಸಂತಸ ತಂದಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ದೆಹಲಿಯಿಂದ ನಗರಕ್ಕೆ ಬಂತು 4,000 ಕೆಜಿ ತೂಕದ ಖಡ್ಗ!

A380 ಸರಣಿಯ ಈ ವಿಮಾನವು ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಫಸ್ಟ್ ಕ್ಲಾಸ್, ಎಕಾನಮಿ ಮತ್ತು ಬ್ಯೂಸಿನೆಸ್ ಟಿಕೆಟ್ ವ್ಯವಸ್ಥೆ ಇದೆ. ಎಕಾನಮಿ ಕ್ಲಾಸ್‌ ವಿಶಾಲವಾಗಿದ್ದು, ಹೆಚ್ಚುವರಿ ಲೆಗ್‌ರೂಮ್‌ ಹೊಂದಿದೆ. ಬ್ಯೂಸಿನೆಸ್ ಕ್ಲಾಸ್​ನಲ್ಲಿ ಸೀಟ್ ವ್ಯವಸ್ಥೆ ಮಾತ್ರ ಹೊಂದಿದೆ, ಫಸ್ಟ್ ಕ್ಲಾಸ್​ನಲ್ಲಿ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments