ರಾಜ್ಯ

300 ಅಧಿಕಾರಿಗಳ ನೇಮಕ ಮಾಡಲು ಕೃಷಿ ಕೇಡರ್ ನಿಯಮಗಳಿಗೆ ತಿದ್ದುಪಡಿ: ಸಂಪುಟ ಸಭೆ ಅನುಮೋದನೆ

Srinivasamurthy VN

ಬೆಂಗಳೂರು: ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಕೇಡರ್ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಅಂಗೀಕರಿಸಿದ್ದು, ಶೀಘ್ರದಲ್ಲಿಯೇ 300 ಅಧಿಕಾರಿಗಳ ನೇಮಕಾತಿಗೆ ಮುಂದಾಗಲು ಸರ್ಕಾರ ಯೋಜಿಸಿದೆ. 

ಪ್ರಸ್ತುತ ಇಲಾಖೆಯಲ್ಲಿ 1,801 ಕೃಷಿ ಅಧಿಕಾರಿಗಳು ಮತ್ತು 2,099 ಸಹಾಯಕ ಕೃಷಿ ಅಧಿಕಾರಿಗಳ ಮಂಜೂರಾದ ಸಾಮರ್ಥ್ಯವಿದ್ದು, ಹಿಂದಿನ ನಿಯಮಗಳ ಪ್ರಕಾರ, ಬಿಎಸ್ಸಿ ಕೃಷಿ ಪದವೀಧರರು ಮಾತ್ರ ನೇಮಕಾತಿಗೆ ಅರ್ಹರಾಗಿದ್ದರು. ಆದರೆ ಈಗ ತಂದಿರುವ ತಿದ್ದುಪಡಿಯೊಂದಿಗೆ ಬಿಎಸ್ಸಿ ಅಗ್ರಿಕಲ್ಚರ್ ಮಾರ್ಕೆಟಿಂಗ್ ಮತ್ತು ಸಹಕಾರ, ಬಿಎಸ್ಸಿ ಆನರ್ಸ್ ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್, ಬಿಎಸ್ಸಿ ಆನರ್ಸ್ ಅಗ್ರಿಕಲ್ಚರ್ ಬಿಸಿನೆಸ್ ಮ್ಯಾನೇಜ್ಮೆಂಟ್, ಬಿಎಸ್ಸಿ ಅಗ್ರಿಕಲ್ಚರ್ ಬಯೋಟೆಕ್ನಾಲಜಿ, ಬಿಎಸ್ಸಿ ಅಗ್ರಿಕಲ್ಚರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಶೇಕಡಾ 15 ರಷ್ಟು ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. 85 ರಷ್ಟು ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ಇಟ್ಟು ಪ್ರತಿಕ್ರಿಯೆ ಆಹ್ವಾನಿಸಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು 300 ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಯೋಜಿಸಿರುವ ಹಿನ್ನೆಲೆಯಲ್ಲಿ ಸಿ & ಆರ್ ನಿಯಮ ತಿದ್ದುಪಡಿ ಮಾಡಲಾಗಿದೆ. ನಿಯಮಗಳ ಬದಲಾವಣೆ ಎಂದರೆ ಅನರ್ಹರಾಗಿರುವ ಪದವೀಧರರು ಸ್ಪರ್ಧಿಸಲು ಅರ್ಹರಾಗುತ್ತಾರೆ ಎಂದು ಹೇಳಿದರು.
 

SCROLL FOR NEXT