ರಾಜ್ಯ

ಒಂಭತ್ತು ವರ್ಷಗಳ ಬಳಿಕ ಚಾಮರಾಜನಗರದ ಈ ಆರು ಗ್ರಾಮಗಳಲ್ಲಿ ದೀಪಾವಳಿ ಆಚರಣೆ!

Manjula VN

ಮೈಸೂರು: ‘ಬೆಳಕಿನ ಹಬ್ಬ’ ದೀಪಾವಳಿಯನ್ನು ಪ್ರತಿ ವರ್ಷ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆರು ಗ್ರಾಮಗಳು ಒಂಬತ್ತು ವರ್ಷಗಳ ಬಳಿಕ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ.

ದೀಪಾವಳಿ ಹಬ್ಬವನ್ನು ಬುಧವಾರ ಆಚರಿಸಿದರೆ ಶುಭ ಹಾಗೂ ಇತರೆ ದಿನಗಳಲ್ಲಿ ಆಚರಿಸುವುದು ಅಶುಭ ಎಂದು ಇಲ್ಲಿ ಪರಿಗಣಿಸಲಾಗಿದ್ದು, ಈ ಬಾರಿಯ ಹಬ್ಬ ಬುಧವಾರ ಬಂದಿರುವ ಹಿನ್ನೆಲೆಯಲ್ಲಿ ಈ ಆರು ಗ್ರಾಮಗಳು 9 ವರ್ಷಗಳ ಬಳಿಕ ಈ ಬಾರಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿವೆ.

ಬುಧವಾರದ ಹೊರತಾಗಿ ಬೇರೆ ದಿನ ದೀಪಾವಳಿ ಅಥವಾ ಯುಗಾದಿ ಹಬ್ಬವನ್ನು ಇಲ್ಲಿ ಆಚರಿಸುವುದಿಲ್ಲ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಜಾನುವಾರುಗಳಿಗೆ ಶಾಪವಾಗುವುದರಿಂದ ಬುಧವಾರ ಬಿಟ್ಟು ಬೇರೆ ದಿನಗಳಲ್ಲಿ ಬರುವ ಹಬ್ಬವನ್ನು ನಾವು ಆಚರಣೆ ಮಾಡುವುದಿಲ್ಲ ಎಂದು ಗ್ರಾಮದ ಮುಖಂಡ ಮಲಿಯಪ್ಪ ಹೇಳಿದ್ದಾರೆ. 

ಇದನ್ನು ನೀವು ಮೂಢನಂಬಿಕೆ ಅಥವಾ ಬೇರೆ ಏನೂ ಬೇಕಾದರೂ ಕರೆಯಿರಿ, ಬುಧವಾರ ಹೊರತುಪಡಿಸಿ ಬೇರೆ ದಿನಗಳಲ್ಲಿ ಹಬ್ಬಗಳನ್ನು ಆಚರಿಸಿದಾಗಲೆಲ್ಲಾ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ಬುಧವಾರ ಬರುವ ಹಬ್ಬವನ್ನು ಇಲ್ಲಿ ಆಚರಣೆ ಮಾಡಲಾಗುತ್ತದೆ. 

ತಲೆಮಾರುಗಳಿಂದಲೂ ಯಾರೂ ಆಚರಣೆ ಉಲ್ಲಂಘಿಸಿಲ್ಲ...
ಪಡಗೂರು ಗ್ರಾಮದ ಇಬ್ಬರು ಬಾಲಕರು ಹಬ್ಬ ಆಚರಿಸಲು ಬಾಳೆ ಕಂದು ತರಲು ಹೋದಾಗ ಮಠಾಧೀಶರು ಮರಕ್ಕೆ ಕಟ್ಟಿ ಅವರನ್ನು ಶಿಕ್ಷಿಸಿದ್ದರು. ಇದರಿಂದ ಕುಪಿತಳಾದ ಮಾರಮ್ಮ, ಇಬ್ಬರು ಮಕ್ಕಳ ತಾಯಿಯಂದಿರು ಊರಿನ ಮುಖ್ಯಸ್ಥನನ್ನು ಶಪಿಸಿದ್ದರು, ನಂತರ ಇಡೀ ನೆಲ್ಲೂರು ಗ್ರಾಮವು ಬೂದಿಯಾಯಿತು. ಬಳಿಕ ಆರು ಗ್ರಾಮಗಳ ನಿವಾಸಿಗಳು ಮಾರಮ್ಮನನ್ನು ಬೇಡಿಕೊಂಡರು. ಬಳಿಕ ಯುಗಾದಿ ಹಾಗೂ ದೀಪಾವಳಿ ಹಬ್ಬ ಬುಧವಾರದಂದು ಬಂದರೆ ಮಾತ್ರ ಆಚರಿಸುವಂತೆ ಸಲಹೆ ನೀಡಿದರು. ಬಳಿಕ ಗ್ರಾಮಸ್ಥರು ಜಾನುವಾರಿಗಳಿಗೆ ಎದುರಾಗಿದ್ದ ರೋಗವನ್ನು ನಿವಾರಿಸಲು ಎಂಗಳವಾಡಿ ಬಳಿಯ ಮಹದೇಶ್ವರ ದೇವಸ್ಥಾನದಿಂದ ಪವಿತ್ರ ನೀರನ್ನು ತಂದು, ಅದನ್ನು ರಾಗಿ ಗಂಜಿಯೊಂದಿಗೆ ಬೆರೆಸಿ ಜಾನುವಾರುಗಳಿಗೆ ನೀಡಿ ರಕ್ಷಿಸಲು ಪ್ರಾರಂಭಿಸಿದರು. ದೇವತೆ ನೀಡಿದ್ದ ಸಲಹೆಯನ್ನು ಗ್ರಾಮಸ್ಥರು ಗಂಭೀರವಾಗಿ ಪರಿಗಣಿಸಿ ಇಂದಿನವರೆಗೂ ಪಾಲನೆ ಮಾಡಿಕೊಂಡು ಬಂದಿದ್ದಾರೆ. 

9 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬ ಬುಧವಾರ ಬಂದಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ನೆನೆಕಟ್ಟೆ, ಮಳವಳ್ಳಿ, ಮಾದರಹಳ್ಳಿ, ವೀರನಾಪುರ, ಎಗರವಾಡಿ, ಬೆಂತಲಾಪುರ, ಚಿನ್ನಾಜನ ಹುಂಡಿಯ ಆರು ದೂರದ ಗ್ರಾಮಗಳಲ್ಲಿ ಸಂತಸ ಮರಳಿದೆ. 

6 ಗ್ರಾಮಗಳಲ್ಲಿನ ಪ್ರತಿ ಮನೆಯೂ ಸುಣ್ಣ-ಬಣ್ಣ ಬಳಿದಿದ್ದು. ಹಬ್ಬದ ನಿಮಿತ್ತ ಹೊಸ ಬಟ್ಟೆ, ಸಿಹಿತಿಂಡಿ ಖರೀದಿಸಲು ಗ್ರಾಮಸ್ಥರು ಸಮೀಪದ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ.

ಯುಗಾದಿ ಹಬ್ಬ ಸೋಮವಾರ ಬಿದ್ದರೂ ಪ್ರತೀವರ್ಷ ಬುಧವಾರವೇ ಆಚರಿಸುತ್ತಿದ್ದೇವೆ. ಈ ಆರು ಗ್ರಾಮಗಳಲ್ಲಿ ಯಾರೂ ಜಾತಿಯ ರೇಖೆಗಳನ್ನು ದಾಟಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಉಲ್ಲಂಘಿಸಿಲ್ಲ. ಮಂಗಳವಾರ ಅಮಾವಾಸ್ಯೆ ಬಂದಿದ್ದು, ಬುಧವಾರ ಬಲಿ ಪಾಡ್ಯಮಿ ಬರುತ್ತಿರುವುದು ಸಂತಸ ತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

SCROLL FOR NEXT