ಸಾಂದರ್ಭಿಕ ಚಿತ್ರ 
ರಾಜ್ಯ

ಚಿತ್ರದುರ್ಗ: ಇಬ್ಬರು ಪುಟ್ಟ ಮಕ್ಕಳೊಂದಿಗೆ ಚೆಕ್ ಡ್ಯಾಂಗೆ ಹಾರಿ ಮಹಿಳೆ ಆತ್ಮಹತ್ಯೆ

ತೀವ್ರ ಮದ್ಯಪಾನದ ಚಟಕ್ಕೆ ಒಳಗಾಗಿದ್ದ ಪತಿಯ ಕಿರುಕುಳ ತಾಳಲಾರದೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಹಿಳೆ ಚೆಕ್ ಡ್ಯಾಂಗೆ ಹಾರಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಚಿತ್ರದುರ್ಗ: ತೀವ್ರ ಮದ್ಯಪಾನದ ಚಟಕ್ಕೆ ಒಳಗಾಗಿದ್ದ ಪತಿಯ ಕಿರುಕುಳ ತಾಳಲಾರದೆ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಹಿಳೆ ಚೆಕ್ ಡ್ಯಾಂಗೆ ಹಾರಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಚಾನಕಲ್ ಲಂಬಾಣಿ ಹಟ್ಟಿಯ 28 ವರ್ಷದ ಅರ್ಪಿತಾ ತನ್ನಿಬ್ಬರು ಮಕ್ಕಳಾದ ಮಗಳು 6 ವರ್ಷದ ಮಾನಸ ಮತ್ತು ಮಗ 4 ವರ್ಷದ ಮದನ್ ಜೊತೆ ಚೆಕ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಹೊಸದುರ್ಗ ತಾಲ್ಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾಳಿಗೆ ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಜೊತೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದರೂ ವರ್ಷಗರುಳಿದಂತೆ ಮಂಜಾನಾಯ್ಕ್ ಗೆ ಪತ್ನಿ ಮೇಲೆ ಅನುಮಾನ ಕಾಡುತ್ತಿತ್ತು.

ಇದರ ಜೊತೆಗೆ ನಿತ್ಯವೂ ಮದ್ಯಪಾನ ಮಾಡಿ ಮನೆಗೆ ಬಂದು ಅರ್ಪಿತಾಗೆ ಕಿರುಕುಳ ನೀಡುತ್ತಿದ್ದ. ಇದರಿಂದ ತೀವ್ರ ಮನನೊಂದ ಅರ್ಪಿತಾ ತನ್ನಿಬ್ಬರು ಮಕ್ಕಳನ್ನು ಚೆಕ್ ಡ್ಯಾಂ ಬಳಿ ಕರೆದುಕೊಂಡು ಹೋಗಿ ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸೆಲ್ಫಿ ವೇಳೆ ಪುಟ್ಟ ಬಾಲಕ ಮದನ್ ಅಪ್ಪ ಎಂದು ಕೂಗಿರುವ ವಿಡಿಯೊ ವೈರಲ್ ಆಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ರಾಜ್ಯ ಸರ್ಕಾರ ನಿಯಮದ ಮಿತಿಯೊಳಗೆ ಸಾಲ ಮಾಡಿದೆ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹೆಚ್ಚುತ್ತಿರುವ ಸಬ್ಸಿಡಿ: ಗ್ರಾಮ ಪಂಚಾಯಿತಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್- CAG ವರದಿ

SCROLL FOR NEXT