ಶ್ರೀಗಂಧದ ಮರ 
ರಾಜ್ಯ

ಗಾಲ್ಫ್ ಕ್ಲಬ್‌ ಆವರಣದ ಶ್ರೀಗಂಧದ ಮರ ಕಳ್ಳತನ: ತಮಿಳುನಾಡಿನ ಗ್ಯಾಂಗ್​ ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ

ಬೆಂಗಳೂರು ನಗರದ ಹೃದಯ ಭಾಗದ ಗಾಲ್ಫ್ ಕ್ಲಬ್‌ ಆವರಣದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಹೈಗ್ರೌಂಡ್ಸ್ ಪೊಲೀಸರು ಭೇಟೆಯಾಡಿದ್ದಾರೆ.

ಬೆಂಗಳೂರು: ಬೆಂಗಳೂರು ನಗರದ ಹೃದಯ ಭಾಗದ ಗಾಲ್ಫ್ ಕ್ಲಬ್‌ ಆವರಣದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಹೈಗ್ರೌಂಡ್ಸ್ ಪೊಲೀಸರು ಭೇಟೆಯಾಡಿದ್ದಾರೆ.

ಹೌದು.. ಬೆಂಗಳೂರು ನಗರದ ಹೈಗ್ರೌಂಡ್ಸ್​ ಪೊಲೀಸರು ಕುಖ್ಯಾತ ಶ್ರೀಗಂಧ ಕಳವು ಮಾಡುವಂತಹ ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದು, ಮಿಳುನಾಡಿನ ಗ್ಯಾಂಗ್​ಲೀಡರ್ ಸೇರಿ​ 8 ಮಂದಿ ವಶಕ್ಕೆ ಪಡೆದಿದ್ದಾರೆ. 

ಆಗಸ್ಟ್ 1ರಂದು ಗಾಲ್ಫ್ ಆವರಣದಲ್ಲಿ ಎರಡು ಶ್ರೀಗಂಧದ ಮರಗಳನ್ನು ಕಳವು ಮಾಡಲಾಗಿತ್ತು. ಒಂದು ಮರವನ್ನು ಕಡಿದು ಸಾಗಿಸಲಾಗಿತ್ತು. ಆದರೆ ಮತ್ತೊಂದು ಮರವನ್ನು ಕಡಿದು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ ಪೆಕ್ಟರ್ ಶಿವಸ್ವಾಮಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. 

ಹಳೇ ಕಳ್ಳರ ವಿಚಾರಣೆ
ಮೊದಲಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರ ತಂಡ ಯಾರು ಕೃತ್ಯ ಎಸಗಿರಬಹುದೆಂಬ ಲೆಕ್ಕಾಚಾರ ಹಾಕಿದ್ದರು.. ಈ ಹಿಂದೆ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿ ಜೈಲಿಗೆ ಹೊಗಿ ವಾಪಾಸ್ ಬಂದ ಆಸಾಮಿಗಳ ವಿಚಾರಣೆಗೊಳಪಡಿಸಿದ್ದಾರೆ.. ನಂತರ ಆ ವ್ಯಕ್ತಿಗಳನ್ನೇ ಕರೆತಂದು ಮರಗಳನ್ನು ಕಡಿದ ಸ್ಟೈಲ್ ಯಾರದ್ದು ಎನ್ನುವ ಬಗ್ಗೆ ಮಾಹಿತಿ ಕೇಳಿದಾಗ ಆಸಾಮಿಗಳು ತಾವು ಕಂಡಂತ ನಾಲ್ಕೈದು ಮರಗಳ್ಳರ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಶಿವಸ್ವಾಮಿ ತಮಿಳುನಾಡಿನ ಗೊವಿಂದ ಸ್ವಾಮಿ ಅಂಡ್ ಟೀಮ್ ಬೆಂಗಳೂರಿಗೆ ಆಗಸ್ಟ್ 1ರಂದು ಬಂದು ಹೊದ ಬಗ್ಗೆ ಮೊಬೈಲ್ ನ ಟೆಕ್ನಿಕಲ್ ಮಾಹಿತಿಯಿಂದ ಪಕ್ಕ ಮಾಡಿಕೊಳ್ಳುತ್ತಾರೆ. ನಂತರ ಗೊವಿಂದಸ್ವಾಮಿ ಸೇರಿದಂತೆ ಆ ಗ್ಯಾಂಗ್ ನ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಗ್ಯಾಂಗ್​ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಈ ಗ್ಯಾಂಗ್ ನ ಪ್ರಮುಖರಾದ ಗೊವಿಂದಸ್ವಾಮಿ, ಮಾದ, ವೆಂಕಟೇಶ, ರಾಮಚಂದ್ರ, ವಾಸೀಂ ಬೇಗ್, ವರದರಾಜು, ರಾಮಚಂದ್ರಪ್ಪ ಹಾಗೂ ನಂಜೇಗೌಡನನ್ನು ಬಂಧಿಸಿ ಸುಮಾರು 3 ಕೋಟಿ ಮೌಲ್ಯದ 147 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಹಾಗೂ 730 ಕೆ.ಜಿ. ಶ್ರೀಗಂಧದ ಮರದ ತುಂಡನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಂಟು ಮಂದಿಯಲ್ಲಿ ಐವರು ತಮಿಳುನಾಡಿನವರು ಮತ್ತು ಉಳಿದ ಮೂವರು ಕರ್ನಾಟಕದವರು. ಸದ್ಯ ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 10 ಪ್ರಕರಣಗಳು ಪತ್ತೆಯಾಗಿವೆ.  ಈ ಆರೋಪಿಗಳು ನಗರದಲ್ಲಿ ಅಷ್ಟೇ ಅಲ್ಲದೇ, ಕಾಡಿನಲ್ಲೂ ತಮ್ಮ ಕೃತ್ಯಗಳನ್ನು ಎಸಗಿರೊದು ಪತ್ತೆಯಾಗಿದೆ.. ಬನ್ನೇರುಘಟ್ಟ ಅರಣ್ಯಕ್ಕೆ ತೆರಳುತಿದ್ದ ಈ ಗ್ಯಾಂಗ್ ಒಂದು ವಾರ ಉಳಿದು ಕೊಂಡು ಮರಗಳನ್ನು ಟಾರ್ಗೆಟ್ ಮಾಡಿ ಕಡಿಯುವ ಕೆಲಸ ಮಾಡುತಿದ್ದರು.. ತನಿಖೆ ವೇಳೆ ಕಾಡಿನಲ್ಲಿ ಈವರೆಗೂ ಸಾವಿರಾರು ಮರಗಳನ್ನು ಕಳವು ಮಾಡಿರೊ ಬಗ್ಗೆ ಮಾಹಿತಿ ಸಿಕ್ಕಿವೆ.

ಆರೋಪಿಗಳೆಲ್ಲರೂ ನಿತ್ಯ ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದು, ಸದಾಶಿವನಗರ, ಜಯನಗರ, ಮಡಿವಾಳ, ಕೆಆರ್ ಪುರಂ, ಯಶವಂತಪುರ, ಕೆಂಗೇರಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆ. ತುಮಕೂರಿನ ಪಾವಗಡ ಸಮೀಪದ ಆಂಧ್ರಪ್ರದೇಶದ ಮಡಕಶಿರಾದಲ್ಲಿರುವ ಶ್ರೀಗಂಧದ ಎಣ್ಣೆ ತಯಾರಿಕಾ ಕಾರ್ಖಾನೆಯಿಂದ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಶ್ರೀಗಂಧವನ್ನು ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT