ರಾಜ್ಯ

ಸೆ. 6 ರಂದು ಅತ್ಯುತ್ತಮ ಸಿಬ್ಬಂದಿಗೆ 'ಸರ್ವೋತ್ತಮ ಸೇವಾ ಪ್ರಶಸ್ತಿ' ಪ್ರದಾನ: ಕರ್ನಾಟಕ ಸರ್ಕಾರ

Srinivasamurthy VN

ಬೆಂಗಳೂರು: ರಾಜ್ಯ ಸರ್ಕಾರವು ತನ್ನ 30 ಅತ್ಯುತ್ತಮ ಉದ್ಯೋಗಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಸೆಪ್ಟೆಂಬರ್ 6 ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಈ ಪ್ರಶಸ್ತಿ ತಲಾ 50 ಸಾವಿರ ನಗದು ಬಹುಮಾನ ಹೊಂದಿದೆ ಎನ್ನಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ 2020-21 ರಲ್ಲಿ ಸಮಾರಂಭವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಆಯ್ಕೆಯಾದ 10 ಉದ್ಯೋಗಿಗಳಿಗೆ 25,000 ನಗದು ಬಹುಮಾನ ಮತ್ತು ಸ್ಮರಣಿಕೆ ಸೇರಿದಂತೆ ಪ್ರಶಸ್ತಿಗಳನ್ನು ನೀಡಲಾಗುವುದು. ಈ ವರ್ಷ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ (ಟಿಎನ್‌ಎಸ್‌ಇ) ನೊಂದಿಗೆ ಈ ಕುರಿತು ಮಾತನಾಡಿ, 'ಪ್ರತಿ ಜಿಲ್ಲೆಯಿಂದ ಡಿಸಿಗಳು ಶಿಫಾರಸು ಮಾಡಿದ ನೌಕರರ ಪಟ್ಟಿಯನ್ನು ಕಳುಹಿಸಿದ್ದಾರೆ ಮತ್ತು ನೌಕರರು ಸಹ ಅರ್ಜಿ ಸಲ್ಲಿಸಬಹುದು. ''ಸರ್ಕಾರಕ್ಕೆ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಪಿಎಆರ್ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯು ಪಟ್ಟಿಯನ್ನು 30 ಕ್ಕೆ ಶಾರ್ಟ್ ಲಿಸ್ಟ್ ಮಾಡಲಿದೆ ಎಂದು ಅವರು ಹೇಳಿದರು.
 

SCROLL FOR NEXT