ರವೀಂದ್ರ ಕಲಾಕ್ಷೇತ್ರ 
ರಾಜ್ಯ

ಬುಕ್ಕಿಂಗ್ ರದ್ದು ಮಾಡಿದ ರವೀಂದ್ರ ಕಲಾಕ್ಷೇತ್ರ: ಹೈಕೋರ್ಟ್ ಮೊರೆ ಹೋದ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ!

ಮಹಿಳಾ ಸಾಧಕರು ಮತ್ತು ಯುವ ತಾರೆಯರ ಸನ್ಮಾನ ಕಾರ್ಯಕ್ರಮಕ್ಕಾಗಿ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದಕ್ಕಾಗಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ರವೀಂದ್ರ ಕಲಾಕ್ಷೇತ್ರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಬೆಂಗಳೂರು: ಮಹಿಳಾ ಸಾಧಕರು ಮತ್ತು ಯುವ ತಾರೆಯರ ಸನ್ಮಾನ ಕಾರ್ಯಕ್ರಮಕ್ಕಾಗಿ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದಕ್ಕಾಗಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ರವೀಂದ್ರ ಕಲಾಕ್ಷೇತ್ರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಹೌದು.. ಕಬ್ಬನ್ ಪಾರ್ಕ್‌ನಲ್ಲಿ ನಿತ್ಯ ಸಂಚರಿಸುವ 3 ಸಾವಿರಕ್ಕೂ ಹೆಚ್ಚು ವಾಕರ್ಸ್ ಮತ್ತು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಸದಸ್ಯರು ಮಹಿಳಾ ಸಾಧಕರು ಮತ್ತು ಯುವ ತಾರೆಯರನ್ನು ಸನ್ಮಾನಿಸಲು ಬಯಸಿದ್ದು, ಅಕ್ಟೋಬರ್ 9 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ಜೂನ್ 7 ರಂದು ರವೀಂದ್ರ ಕಲಾಕ್ಷೇತ್ರದ ಸಭಾಂಗಣವನ್ನು ಕಾಯ್ದಿರಿಸಿದ್ದರು, ಇದಕ್ಕಾಗಿ 24,373 ರೂ ಹಣವನ್ನೂ ಪಾವತಿ ಮಾಡಿದ್ದರು. ಆದರೆ ಸಂಘದ ಗಮನಕ್ಕೇ ತಾರದೇ ಮತ್ತು ಯಾವುದೇ ಕಾರಣ ನೀಡದೆ ರವೀಂದ್ರ ಕಲಾಕ್ಷೇತ್ರದ ಆಡಳಿತ ಮಂಡಳಿ ಬುಕ್ಕಿಂಗ್ ರದ್ದುಗೊಳಿಸಿತ್ತು. 

ಈ ಕುರಿತು ಸಂಘದ ಸದಸ್ಯರು ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿದಾಗ, ಮುಖ್ಯಮಂತ್ರಿಗಳ ಕಚೇರಿಯಿಂದ ನಿರ್ದೇಶನ ಬಂದಿದೆ. ಹೀಗಾಗಿ ಬುಕ್ಕಿಂಗ್ ರದ್ದು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವರು ಕೂಡ ಭಾಗವಹಿಸುವ ಕಾರ್ಯಕ್ರಮವನ್ನು ಅದೇ ದಿನ ಆಯೋಜಿಸಲು ಸರ್ಕಾರ ಬಯಸಿದೆ. ಹೀಗಾಗಿ ಕಲಾಕ್ಷೇತ್ರದ ಪದಾಧಿಕಾರಿಗಳು ತಮ್ಮ ಕಾರ್ಯವನ್ನು ಅಕ್ಟೋಬರ್ 23 ಕ್ಕೆ ಬದಲಾಯಿಸುವಂತೆ ಸಂಘದ ಸದಸ್ಯರಿಗೆ ಸಲಹೆ ನೀಡಿದರು. ಆದರೆ ಸದಸ್ಯರು ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ದಿನಾಂಕ ಬದಲಾವಣೆ ಸಾಧ್ಯವಿಲ್ಲ ಎಂದು TNIE ಗೆ ತಿಳಿಸಿದರು.

ಹೈಕೋರ್ಟ್ ಮೊರೆ ಹೋದ ಸದಸ್ಯರು
ಇನ್ನು ಸಂಘದ ಸದಸ್ಯರು ಹೊರರಾಜ್ಯದಿಂದಲೂ ಕೆಲವರನ್ನು ಆಹ್ವಾನಿಸಿದ್ದಾರೆ. ಕಳೆದ ವರ್ಷ 21 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದೇಶದಿಂದ ಬರುವವರು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯು ಅವರ ಯೋಜನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅಂತೆಯೇ ಕಲಾಕ್ಷೇತ್ರ ಆಡಳಿತ ಮಂಡಳಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಮೊರೆ ಹೋಗಿರುವುದರಿಂದ ಅವರ ಕಾರ್ಯಕ್ರಮ ಯಾವುದೇ ಬದಲಾವಣೆಯಿಲ್ಲದೆ ಸಾಗುತ್ತದೆ. ಕಲಾಕ್ಷೇತ್ರದ ಅಧಿಕಾರಿಗಳು ಬುಕಿಂಗ್ ದಿನಾಂಕದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯಬೇಕೆಂದು ಸಂಘದ ಪರ ವಕೀಲ ವಿಜಯ ಕುಮಾರ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅಸೋಸಿಯೇಷನ್ ​​ಅಧ್ಯಕ್ಷ ಉಮೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ, “ನಾವು ಆಡಳಿತ, ಪೊಲೀಸ್, ಇತರ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದೇವೆ, ಆದರೆ ಯಾವುದೇ ಸಹಾಯ ಸಿಗಲಿಲ್ಲ. ಹೀಗಾಗಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ' ಎಂದರು. ಅಲ್ಲದೆ ಕಲಾಕ್ಷೇತ್ರದ ಅಧಿಕಾರಿಗಳು ಬುಕಿಂಗ್‌ಗೆ ಅಡ್ಡಿಪಡಿಸದಂತೆ ತಡೆಯಬೇಕೆಂದು ಸಂಘದ ಪರ ವಕೀಲ ವಿಜಯ ಕುಮಾರ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್