ಮಳೆ ಕಡಿಮೆಯಾದರೂ ಕಡಿಮೆಯಾಗದ ಮಳೆ ನೀರು 
ರಾಜ್ಯ

ಬೆಂಗಳೂರು ಮುಳುಗಡೆಯಾದರೂ ಕೆರೆಗಳು ಬಾಯಾರಿದಂತಿವೆ: ಪ್ರವಾಹಕ್ಕೆ ಭೂ ಮಾಫಿಯಾಗಳೇ ಕಾರಣ; ಆರೋಪ

ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಮನೆಗಳು, ಟೆಕ್ ಕಚೇರಿಗಳಿಗೆ ನೀರು ನುಗ್ಗಿ ಮತ್ತು ರಸ್ತೆಗಳನ್ನೇ ನದಿಗಳನ್ನಾಗಿಸಿದರೂ, ನಗರದ ಬಹುತೇಕ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಈ ಜಲಮೂಲಗಳ ಫೀಡರ್ ಕಾಲುವೆಗಳನ್ನು ಚರಂಡಿಯಾಗಿ ಪರಿವರ್ತಿಸಿದ ಮತ್ತು ಅವುಗಳ ಹರಿವನ್ನು ಬದಲಾಯಿಸಿದ ಭೂಮಾಫಿಯಾಗೆ ಧನ್ಯವಾದಗಳು ಎಂದು ಪರಿಸರವಾದಿಗಳು ತಿಳಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ನಗರದ ಮನೆಗಳು, ಟೆಕ್ ಕಚೇರಿಗಳಿಗೆ ನೀರು ನುಗ್ಗಿ ಮತ್ತು ರಸ್ತೆಗಳನ್ನೇ ನದಿಗಳನ್ನಾಗಿಸಿದರೂ, ನಗರದ ಬಹುತೇಕ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಈ ಜಲಮೂಲಗಳ ಫೀಡರ್ ಕಾಲುವೆಗಳನ್ನು ಚರಂಡಿಯಾಗಿ ಪರಿವರ್ತಿಸಿದ ಮತ್ತು ಅವುಗಳ ಹರಿವನ್ನು ಬದಲಾಯಿಸಿದ ಭೂಮಾಫಿಯಾಗೆ ಧನ್ಯವಾದಗಳು ಎಂದು ಪರಿಸರವಾದಿಗಳು ತಿಳಿಸಿದ್ದಾರೆ.

ವಿವಿಧ ನಾಗರಿಕ ಸಂಸ್ಥೆಗಳು ಮತ್ತು ಸರ್ಕಾರದ ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಲ್ಯಾಂಡ್ ಮಾಫಿಯಾಗಳು ನಡೆಸಿದ ಈ ಕಿಡಿಗೇಡಿತನವು ನಗರದ ಕೆರೆಗಳ ಸಾವಿಗೆ ಕಾರಣವಾಯಿತು ಎಂದು ಪರಿಸರ ಬೆಂಬಲ ಗುಂಪಿನ ಸಂಯೋಜಕ ಲಿಯೋ ಸಲ್ಡಾನ್ಹಾ ಆರೋಪಿಸಿದ್ದಾರೆ.

ಬ್ರಿಟಿಷ್ ಆಡಳಿತಗಾರರು 'ಸಾವಿರ ಕೆರೆಗಳ ನಗರ' ಎಂದು ಕರೆದಿದ್ದ ಬೆಂಗಳೂರು 1,600ಕ್ಕೂ ಹೆಚ್ಚು ಕೆರೆಗಳನ್ನು ಹೊಂದಿದ್ದು, ಆದರೆ ಇದೀಗ ಮಹಾನಗರದಲ್ಲಿ ಸುಮಾರು 400 ಜಲಮೂಲಗಳನ್ನು ಮಾತ್ರ ಹೊಂದಿದೆ. 'ಕಣ್ಮರೆಯಾದ ಆ ಕೆರೆಗಳು ವಸತಿ ಬಡಾವಣೆಗಳು, ಬಸ್ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಮತ್ತು ಟೆಕ್ ಪಾರ್ಕ್‌ಗಳಿಗೆ ದಾರಿ ಮಾಡಿಕೊಟ್ಟಿವೆ. ದುಃಖಕರವೆಂದರೆ ಆ 400 ಕೆರೆಗಳು ಸಹ ವಿನಾಶದ ಅಂಚಿನಲ್ಲಿವೆ' ಎಂದು ಸಲ್ಡಾನ್ಹಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ದಕ್ಷಿಣ ಬೆಂಗಳೂರಿನ ಸುಬ್ರಹ್ಮಣ್ಯಪುರ ಕೆರೆಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಅದು ಮೋರಿಯಾಗಿ ಮಾರ್ಪಟ್ಟಿದೆ ಮತ್ತು ಕಳೆಗಳಿಂದ ತುಂಬಿಹೋಗಿದೆ. ಕೇವಲ 15 ವರ್ಷಗಳ ಹಿಂದಷ್ಟೇ ಜನರು ಅದರ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಬಳಸುತ್ತಿದ್ದರು ಎಂಬುದನ್ನು ಈಗ ಯಾರೊಬ್ಬರೂ ಊಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

'ವಿಪರ್ಯಾಸವೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸುಬ್ರಹ್ಮಣ್ಯಪುರ ಕೆರೆಯ ಮೇಲ್ಭಾಗದಲ್ಲಿರುವ 'ವೆಂಕಟರಾಯನ ಕೆರೆ' ಎಂಬ ಇನ್ನೊಂದು ಕೆರೆಯ ಮೇಲೆ ಲೇಔಟ್ ಅನ್ನು ಅಭಿವೃದ್ಧಿಪಡಿಸಿದೆ. ಆದರೆ ಬಲಿಷ್ಠ ಬಿಲ್ಡರ್‌ವೊಬ್ಬರು ಸುಬ್ರಹ್ಮಣ್ಯಪುರ ಮತ್ತು ವೆಂಕಟರಾಯನ ಕೆರೆಗಳ ಫೀಡರ್ ಕಾಲುವೆಗಳ ಮೇಲೆ ಎರಡು ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಿದ್ದಾರೆ' ಸಲ್ಡಾನ್ಹಾ ಹೇಳಿಕೊಂಡಿದ್ದಾರೆ.

ಇದಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ವರ್ಷಗಳಲ್ಲಿ ತನ್ನ ಫೀಡರ್ ಕಾಲುವೆಯ ಅಗಲವನ್ನು 60 ಅಡಿಯಿಂದ ಕೇವಲ 10 ಅಡಿ ಅಗಲದ ಚರಂಡಿಯನ್ನಾಗಿ ಮಾಡಿದೆ. ಕೆರೆಯ ಫೀಡರ್ ಕಾಲುವೆಯು ಹತ್ತಿರದ ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಬಡಾವಣೆಗಳ ಕೊಳಚೆ ನೀರನ್ನು ಇದು ಒಯ್ಯುತ್ತದೆ. ಚರಂಡಿಯಿಂದಾಗಿ ಒಂದೇ ಒಂದು ಹನಿ ಮಳೆ ನೀರು ಕೂಡ ಕೆರೆಗೆ ಬರುತ್ತಿಲ್ಲ ಎಂದು ಅವರು ಹೇಳಿದರು.

ಬದಲಾಗಿ, ಅದನ್ನು ವೃಷಭಾವತಿ ನದಿಗೆ ನೇರವಾಗಿ ಹರಿಯುವಂತೆ ಮಾಡಲಾಗಿದೆ. ಇದರಿಂದ ವೃಷಭಾವತಿ ನದಿಯು ಈಗ ಪ್ರಮುಖ ಚರಂಡಿಯಾಗಿ ಮಾರ್ಪಟ್ಟಿದೆ ಸಲ್ಡಾನ್ಹಾ ಹೇಳಿದರು.
2009ರಿಂದ ಸುಬ್ರಹ್ಮಣ್ಯಪುರ ಕೆರೆ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿತು ಮತ್ತು ನಾವೀಗ 2022ರಲ್ಲಿ ಇದ್ದೇವೆ. ಆದರೆ, ನ್ಯಾಯಾಂಗದ ಮೇಲುಸ್ತುವಾರಿಯಲ್ಲಿಯೂ ರಾಜ ಕಾಲುವೆ (ಕೆರೆಯ ಫೀಡರ್ ಕಾಲುವೆ) ನಾಶವಾಗಿದೆ. ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದೆ. ಇದು ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಸಲ್ಡಾನ್ಹಾ ಹೇಳಿದರು.

ಸುಬ್ರಹ್ಮಣ್ಯಪುರ ಕೆರೆಯ ಎರಡು ಕಿ.ಮೀ ವ್ಯಾಪ್ತಿಯಲ್ಲಿರುವ ಚಿಕ್ಕಲ್ಲಸಂದ್ರದ ನಿವಾಸಿ ರವಿಕುಮಾರ್‌ ಮಾತನಾಡಿ, ಚಿಕ್ಕಲ್ಲಸಂದ್ರ ಕೆರೆ, ಇಟ್ಟಮಡು ಕೆರೆ, ನಾರಾಯಣಪುರ ಕೆರೆಗಳನ್ನು ಲ್ಯಾಂಡ್ ಮಾಫಿಯಾದವರು ಕಬಳಿಸಿ ಅಕ್ರಮವಾಗಿ ವಸತಿ ಬಡಾವಣೆಯನ್ನಾಗಿ ಮಾಡಿಕೊಂಡಿದ್ದು, ಒತ್ತುವರಿಯನ್ನು ತೆರವುಗೊಳಿಸಲು ನಾಗರಿಕ ಸಂಸ್ಥೆಯು ಇದೀಗ ಅಸಹಾಯಕವಾಗಿದೆ.

ಕಳೆದ ಕೆಲ ವರ್ಷಗಳ ಹಿಂದೆ ನಾಗರಿಕ ಸಂಸ್ಥೆಗಳು ಚಿಕ್ಕಲ್ಲಸಂದ್ರದ ಕೆರೆ ಒತ್ತುವರಿಯನ್ನು ತೆರವುಗೊಳಿಸಿದ್ದರು. ಆದರೆ, ಇಂದು ಮತ್ತೆ ಒತ್ತುವರಿದಾರರು ವಾಪಸ್ ಆಗಿದ್ದಾರೆ. ಈಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡ ತನ್ನ ಕಸದ ವಾಹನಗಳನ್ನು ಕೆರೆಯ ಅಂಗಳದಲ್ಲಿ ನಿಲ್ಲಿಸಿ ಇತರರಿಗೆ ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಡುತ್ತಿದೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ವಿರುದ್ಧದ ಅಭಿಯಾನದ ನೇತೃತ್ವ ವಹಿಸಿದ್ದ ಖ್ಯಾತ ಹೋರಾಟಗಾರ ಎಸ್.ಆರ್ ಹಿರೇಮಠ್ ಮಾತನಾಡಿ, ನಗರದ ಅತಿ ದೊಡ್ಡ ಜಲಮೂಲವಾಗಿರುವ ಬೆಳ್ಳಂದೂರು ಕೆರೆಯ ಜೌಗು ಪ್ರದೇಶ ಮತ್ತು ಫೀಡರ್ ಕಾಲುವೆಗಳ ಮೇಲೆ ವಸತಿ ಅಭಿವೃದ್ಧಿಗಳು ನಡೆದಿದ್ದರಿಂದ ಅತಿರೇಕದ ಅತಿಕ್ರಮಣಕ್ಕೆ ಬಲಿಯಾಗಿದೆ ಎಂದು ಹೇಳಿದರು.

‘ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ನೆರವಿನಿಂದ ನಾನು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಿದ್ದೆ ಮತ್ತು ಹೈಕೋರ್ಟ್‌ನಲ್ಲೂ ಹೋರಾಟ ನಡೆಸಿದ್ದೇನೆ. ಸರ್ಕಾರಿ ಭೂಮಿಯನ್ನು ಕಬಳಿಸಿದವರು ಅತ್ಯಂತ ಶಕ್ತಿಶಾಲಿ ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿರುವವರು ಹಾಗೂ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿರುವುದೇ ಸಮಸ್ಯೆಯಾಗಿದೆ' ಎಂದು ಹೇಳಿದರು.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಕೆರೆಯು ಭೀಕರ ಪ್ರಮಾಣದಲ್ಲಿ ತುಂಬಿದ್ದು, ಒತ್ತುವರಿಯಾಗಿದ್ದ ಎಲ್ಲಾ ಪ್ರದೇಶಗಳನ್ನು ಮುಳುಗಿಸಿದೆ.

'ನಾನು ಬೆಳ್ಳಂದೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಒಂದು ವಾರದಿಂದ ನಾನು ಕೂಡ ಪ್ರವಾಹದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ಈ ಸ್ಥಳಕ್ಕೆ ಬಂದು 15 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ. ಆದರೆ, ನಾನು ಎಂದಿಗೂ ಅಂತಹ ಪ್ರವಾಹವನ್ನು ಕಂಡಿರಲಿಲ್ಲ' ಎಂದು ಹೆಸರು ಹೇಳಲಿಚ್ಛಿಸದ ಕಾರ್ಪೊರೇಟ್‌ ಕಂಪನಿಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಸರ್ಕಾರ ಕನಿಷ್ಠ ತಲೆಕೆಡಿಸಿಕೊಂಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಎಟಿ ರಾಮಸ್ವಾಮಿ ಸಮಿತಿ ವರದಿ ಮತ್ತು ವಿ.ಬಾಲಸುಬ್ರಮಣ್ಯಂ ವರದಿ ‘ದುರಾಸೆ ಮತ್ತು ಅಸಹಕಾರದಿಂದಾಗಿ’ ಸರ್ಕಾರಿ ಕಚೇರಿಗಳ ಕೊಳಕು ಮೂಲೆಗಳಲ್ಲಿ ಧೂಳು ಹಿಡಿಯುತ್ತಿದೆ. ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ, ಈ ವರದಿಗಳು ಹುಳುಗಳು ತುಂಬಿರುವ ಡಬ್ಬದಂತಿವೆ. ಹೀಗಾಗಿ ಅವುಗಳನ್ನು ತೆರೆಯಲು ಬಯಸುವುದಿಲ್ಲ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT