ಮಹಾಮಳೆ: ನೀರು ಕಡಿಮೆಯಾದರೂ ಮಹದೇವಪುರ ನಿವಾಸಿಗಳಿಗೆ ಈಗ ಸೋಂಕಿನ ಭೀತಿ!

ಮಹದೇವಪುರದಲ್ಲಿ ದಾಖಲೆ ಮಳೆ ಸುರಿದು ಹಲವು ಮನೆಗಳಿಗೆ ನೀರು ನುಗ್ಗಿದ್ದು, ಇದೀಗ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯ ಚರಂಡಿ ನೀರು ಹಾಗೂ ಚರಂಡಿಗಳ ಕೊಳಚೆಯಿಂದ ಹೊಸ ಸೋಂಕು ಹರಡುವ ಭೀತಿ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ. 
ಮಹದೇವಪುರ ನಿವಾಸಿಗಳಿಗೆ ಈಗ ಸೋಂಕಿನ ಭೀತಿ
ಮಹದೇವಪುರ ನಿವಾಸಿಗಳಿಗೆ ಈಗ ಸೋಂಕಿನ ಭೀತಿ
Updated on

ಬೆಂಗಳೂರು: ಮಹದೇವಪುರದಲ್ಲಿ ದಾಖಲೆ ಮಳೆ ಸುರಿದು ಹಲವು ಮನೆಗಳಿಗೆ ನೀರು ನುಗ್ಗಿದ್ದು, ಇದೀಗ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯ ಚರಂಡಿ ನೀರು ಹಾಗೂ ಚರಂಡಿಗಳ ಕೊಳಚೆಯಿಂದ ಹೊಸ ಸೋಂಕು ಹರಡುವ ಭೀತಿ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ. 

ದೊಮ್ಮಲೂರು, ಬೆಳ್ಳಂದೂರು ಮತ್ತು ಅದರ ಸಮೀಪದ ಪ್ರದೇಶಗಳ ಕೆಲವು ಪ್ರದೇಶಗಳು ಈಗಾಗಲೇ ದುರ್ವಾಸನೆಯಿಂದ ದೂರವಿದ್ದು, ಬಿಬಿಎಂಪಿ ಈಗಾಗಲೇ ಆ ಪ್ರದೇಶವನ್ನು ಸೋಂಕುರಹಿತಗೊಳಿಸಲು ಸಿಬ್ಬಂದಿಯನ್ನು ನಿಯೋಜಿಸಿದೆ. 

ಈ ಕುರಿತು ಮಾತನಾಡಿರುವ ಯಮಲೂರಿನಲ್ಲಿ ಹೈನುಗಾರಿಕೆ ನಡೆಸುತ್ತಿರುವ ಯತೀಶ್ ಗೌಡ ಅವರು ಸುಮಾರು 2 ಎಕರೆ ಜಮೀನನ್ನು ಹೊಂದಿದ್ದು, ಬೆಳ್ಳಂದೂರಿನಲ್ಲಿ ನೀರು ನುಗ್ಗಿದ್ದರಿಂದ ಸುತ್ತಮುತ್ತ ದುರ್ವಾಸನೆ ಬೀರುತ್ತಿದ್ದು, ಕಳೆದ ಕೆಲವು ದಿನಗಳಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ದೂರಿದರು. “ನಾವು ಕೆರೆಗಳು ಮತ್ತು ಜೌಗು ಪ್ರದೇಶಗಳಿಗೆ ಹತ್ತಿರವಾಗಿರುವುದರಿಂದ, ಮಳೆ ಮತ್ತು ಪ್ರವಾಹದ ನಂತರ ಸೊಳ್ಳೆಗಳ ಕಡಿತವು ಹೆಚ್ಚಾಗಿದೆ. ಜನರು ಜ್ವರದಿಂದ ಬಳಲುತ್ತಿದ್ದಾರೆ ಎಂಬ ವರದಿಗಳೂ ಬಂದಿವೆ. ಅಂತೆಯೇ ಪ್ರವಾಹ ಮತ್ತು ಆರೋಗ್ಯದ ಅಪಾಯಗಳಿಗೆ ಚರಂಡಿಗಳ ಅತಿಕ್ರಮಣವೇ ಕಾರಣ ಎಂದು ಅವರು ಹೇಳಿದರು.

ಬಳಗೆರೆ, ಕೆಂಪಾಪುರ, ಚಲ್ಲಘಟ್ಟ ನಿವಾಸಿಗಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಬಿಬಿಎಂಪಿ ಹಿರಿಯ ಆರೋಗ್ಯ ನಿರೀಕ್ಷಕರು ಇತರ ಸಿಬ್ಬಂದಿಗಳೊಂದಿಗೆ ಈಗಾಗಲೇ ಪರಿಣಾಮಕ್ಕೊಳಗಾದ ಪ್ರದೇಶಗಳನ್ನು ಗುರುತಿಸಿ ಡೆಂಗ್ಯೂ ಮತ್ತು ಮಲೇರಿಯಾ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಸೋಂಕು ನಿವಾರಣೆ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 20 ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ವಲಸೆ ಕಾರ್ಮಿಕರನ್ನು ಪರೀಕ್ಷಿಸಲಾಗುತ್ತಿದೆ. ಜ್ವರ, ನೆಗಡಿ ಇರುವವರು ಶಿಬಿರಕ್ಕೆ ಆಗಮಿಸಿ ಚಿಕಿತ್ಸೆ ಪಡೆಯುವಂತೆ ಬಿಬಿಎಂಪಿ ಮನವಿ ಮಾಡಿದೆ’ ಎಂದು ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ.ತ್ರಿಲೋಕ್‌ಚಂದ್ರ ಹೇಳಿದರು.

ಅಂತೆಯೇ ಅವರು ಸೋಮವಾರದಿಂದ ಒತ್ತುವರಿ ತೆರವು ಕಾರ್ಯ ತೀವ್ರಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ರಸ್ತೆಗಳಲ್ಲಿ ಆಸ್ಪತ್ರೆ ತ್ಯಾಜ್ಯ: ಸ್ಥಳೀಯರಿಂದ ಪ್ರತಿಭಟನೆ
ಇತ್ತ ಆನಂದನಗರದಲ್ಲಿನ ತ್ಯಾಜ್ಯ ಸೋರಿಕೆಯನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಇಲ್ಲಿನ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಆರೋಗ್ಯದ ಹದಗೆಡುತ್ತಿದೆ ಎಂದು ಆರೋಪಿಸಿದರು. ಮಕ್ಕಳೊಂದಿಗೆ ಆರ್‌ಡಬ್ಲ್ಯೂಎ, ಆಸ್ಪತ್ರೆ ಆಡಳಿತದ ವಿರುದ್ಧ ತಮ್ಮ ಆಕ್ರೋಶವನ್ನು ತೋರಿಸುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com