ರಾಜ್ಯ

ಬಿಬಿಎಂಪಿಯ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ಹಲವು ಅನುಮಾನ; ಕಣ್ಣೊರೆಸುವ ತಂತ್ರ ಎನ್ನುತ್ತಿರುವ ನಾಗರಿಕರು

Sumana Upadhyaya

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ರಾಜಕಾಲುವೆ, ಕೆರೆ ಒತ್ತುವರಿ ಜಾಗದ ತೆರವು ಕಾರ್ಯಾಚರಣೆಯದ್ದೇ ಸುದ್ದಿ. ಇತ್ತೀಚಿನ ಪ್ರವಾಹ ಸದೃಶ ಮಳೆಗೆ ಬೆಂಗಳೂರಿನ ಪೂರ್ವದಿಂದ ಆಗ್ನೇಯ ಭಾಗಕ್ಕೆ ಭಾರೀ ಸಮಸ್ಯೆಯುಂಟಾಗಿತ್ತು. ಇದಕ್ಕೆ ರಾಜಕಾಲುವೆ, ಕೆರೆ ಒತ್ತುವರಿ, ಚರಂಡಿಯನ್ನು ಅತಿಕ್ರಮಣ ಮಾಡಿ ಅಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸಿರುವುದೇ ಕಾರಣ ಎಂದು ಬಿಬಿಎಂಪಿ ಒತ್ತುವರಿ ಕಾರ್ಯ ನಡೆಸುತ್ತಿದ್ದು ಇಂದು 5ನೇ ದಿನಕ್ಕೆ ಕಾಲಿಟ್ಟಿದೆ.

ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ನಿಜವಾಗಿಯೂ ಬಿಬಿಎಂಪಿ ಸಮಸ್ಯೆಯನ್ನು ಬಗೆಹರಿಸುವ ಗಂಭೀರ ಆಲೋಚನೆ ಹೊಂದಿದೆಯೇ ಅಥವಾ ಕೇವಲ ಜನರ ಕಣ್ಣೊರೆಸುವ ತಂತ್ರವೇ ಎಂಬ ಸಂದೇಹಗಳು ಬರುತ್ತಿವೆ. 

ಬಿಬಿಎಂಪಿಯ ‘ಆಪರೇಷನ್‌ ಸ್ಟಾರ್ಮ್‌ ವಾಟರ್‌ ಡ್ರೈನ್‌ ಅತಿಕ್ರಮಣ’ (‘Operation Storm Water Drain Encroachment’) ಒತ್ತುವರಿ ತೆರವು ಕಾರ್ಯಾಚರಣೆ ನಿನ್ನೆ ಗುರುವಾರ 4 ವಲಯಗಳಲ್ಲಿ 29 ಅತಿಕ್ರಮಣಗಳನ್ನು ಇದುವರೆಗೆ ಕಳೆದ ಸೋಮವಾರದಿಂದ 73ನ್ನು ತೆರವುಗೊಳಿಸಲಾಗಿದೆ. 

ಇತ್ತೀಚಿನ ಮಳೆಯ ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಮಹದೇವಪುರ ವಲಯದ ಕೆಲವು ಭಾಗಗಳಲ್ಲಿ ಮತ್ತು ಮೊದಲ ಮೂರು ದಿನ ತೆರವು ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿರುವ ಪ್ರದೇಶದಲ್ಲಿ ಈಗ ನಿಲ್ಲಿಸಲಾಗಿದೆ. ಬಿಬಿಎಂಪಿ ಈಗ ಸಮೀಕ್ಷೆ ಕೈಗೊಂಡು ನಂತರ ತೆರವು ಕಾರ್ಯ ನಡೆಸಲು ನಿರ್ಧರಿಸಿದೆ.

ಬಿಬಿಎಂಪಿಯ ಈ ಹಠಾತ್ ನಿಲುವು ಬದಲಾವಣೆಯ ಭಾಗವಾಗಿ, ಬಿಬಿಎಂಪಿ ಸರ್ವೆ ಪೂರ್ಣಗೊಳ್ಳುವವರೆಗೂ ತೆರವು ಕಾರ್ಯ ನಿಲ್ಲಿಸಿದ ನಂತರ ಸರ್ವೆ ಟಾಸ್ಕ್ ಫೋರ್ಸ್ ನ್ನು ಸ್ಥಾಪಿಸಿತು. ವಾಗ್ದೇವಿ ಲೇಔಟ್, ಮುನ್ನೇಕೊಳಲು, ಕಸವನಹಳ್ಳಿ ಗ್ರಾಮ, ಎಬಿಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್ ದೊಡ್ಡಕನಹಳ್ಳಿ, ಬೆಳತ್ತೂರು ಗ್ರಾಮ, ಸದಾಮಂಗಲ ಗ್ರಾಮ, ಬೊಳ್ಳೆನಿನಿ ಸಾಸ ಅಪಾರ್ಟ್‌ಮೆಂಟ್ ಇಂಟೀರಿಯರ್ ಮತ್ತು ಸಾಯಿ ಗಾರ್ಡನ್ ಲೇಔಟ್‌ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಭೂಮಾಪಕರ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬಿಬಿಎಂಪಿಯು ಬೆಂಗಳೂರಿನ ಅತಿ ಹೆಚ್ಚು ಬಾಧಿತ ಪ್ರದೇಶಗಳಲ್ಲಿನ ಅತಿಕ್ರಮಣಗಳನ್ನು ತೆಗೆದುಹಾಕುವ ಬದಲು ದಾಸರಹಳ್ಳಿ, ಯಲಹಂಕ (ಎರಡೂ ಉತ್ತರ ಬೆಂಗಳೂರು), ಬೊಮ್ಮನಹಳ್ಳಿ (ದಕ್ಷಿಣ) ಮತ್ತು ಮಹದೇವಪುರ ವಲಯದ ಕೆಲವು ಭಾಗಗಳಲ್ಲಿ (ಪೂರ್ವ ಮತ್ತು ಆಗ್ನೇಯ) ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ.

ಎನ್‌ಒಸಿ(NOC) ನೀಡಿದವರನ್ನೇ ಹೊಣೆಗಾರರನ್ನಾಗಿ ಮಾಡಬೇಕು: ಆದರೆ ಕಾರ್ಯಾಚರಣೆ ಮುಂದುವರಿಯುವ ಪ್ರದೇಶಗಳು ಅದನ್ನು ನಿಲ್ಲಿಸಿದ ಸ್ಥಳಕ್ಕಿಂತ ಮಳೆಗೆ ಕಡಿಮೆ ಪರಿಣಾಮ ಬೀರಿದೆ. ಈ ಕ್ರಮವು ನಾಗರಿಕ ಕಾರ್ಯಕರ್ತರು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳು (RWAs) ಬಿಬಿಎಂಪಿಯ ಉದ್ದೇಶವನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಪೌರಕಾರ್ಮಿಕ ವಿಂಗ್ ಕಮಾಂಡರ್ (ನಿವೃತ್ತ) ಜಿ ಪಿ ಅತ್ರಿ ಮಾತನಾಡಿ, ಬಿಬಿಎಂಪಿಯ ಕಾರ್ಯಾಚರಣೆ ಕಣ್ಣೊರೆಸುವಂತೆ ಕಾಣುತ್ತಿದೆ. ಹಿಂದಿನ ಬಿಬಿಎಂಪಿ ಆಯುಕ್ತರು ಈ ಅತಿಕ್ರಮಣಗಳನ್ನು ತೆಗೆದುಹಾಕಲು ನೀಡಿದ ಭರವಸೆಗಳನ್ನು ಉಲ್ಲೇಖಿಸಿದರು. 

ಇದೇ ಅಭಿಪ್ರಾಯ ಹೊಂದಿರುವ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ನ ವಿದ್ಯಾ ಗೊಗ್ಗಿ, ಆಕ್ಯುಪೆನ್ಸಿ ಪ್ರಮಾಣಪತ್ರಗಳು, ಎನ್‌ಒಸಿಗಳು ಮತ್ತು ಇತರ ದಾಖಲೆಗಳನ್ನು ನೀಡಿದವರು ಇದಕ್ಕೆ ಜವಾಬ್ದಾರರಾಗಿರಬೇಕು. ನಾವು ಮಾತನಾಡಿದರೆ ಅಥವಾ ಎತ್ತಿ ತೋರಿಸಿದರೆ ನಮ್ಮನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದರು. 

ಅತಿಕ್ರಮಣ ಪ್ರಕ್ರಿಯೆಗೆ ತಡೆ ನೀಡಲಾಗಿದೆಯೇ ಮತ್ತು ಅದಕ್ಕೆ ಪರ್ಯಾಯ ಪ್ರಾಧಿಕಾರವು ಮಳೆನೀರು ಚರಂಡಿ ಒತ್ತುವರಿ ವಿಚಾರಣೆ ನಡೆಸುತ್ತಿದೆಯೇ ಎಂದು ಕರ್ನಾಟಕ ಹೈಕೋರ್ಟ್ ಬಿಬಿಎಂಪಿಯನ್ನು ಕೇಳಿದೆ.

SCROLL FOR NEXT