ಗೋವಿಂದ ಕಾರಜೋಳ 
ರಾಜ್ಯ

ಜನಪದ ವಿವಿ ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ: ಗೋವಿಂದ ಕಾರಜೋಳ

ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ. 

ಬೆಂಗಳೂರು: ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ. 
 
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು,  ಜಾನಪದ ವಿಶ್ವವಿದ್ಯಾಲಯ ನನ್ನ ಕಾಲದಲ್ಲಿಯೇ ಪ್ರಾರಂಭ ಆಯ್ತು. ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿವಿಯನ್ನು ಪ್ರಾರಂಭಿಸಲಾಯ್ತು. ಕೆಲವರ ತಲೆಯಲ್ಲಿ ಏನಿತ್ತು ಅಂದ್ರೇ ವಿಶ್ವವಿದ್ಯಾಲಯ ಎಂದು ಬಂದುಬಿಟ್ಟರೇ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಬರಲಿ ಅಂತಾರೆ. ವಿಶ್ವವಿದ್ಯಾಲಯ ಎಲ್ಲ ನನ್ನಿಂದಾನೇ ಪ್ರಾರಂಭ ಆಯ್ತು. ಆದರೆ, ಆದೇಶ ಕೊಡುವಾಗ ಉನ್ನತ ಶಿಕ್ಷಣ ಇಲಾಖೆಯಲ್ಲಿರಲಿ ಅಂತಾ ಹೇಳಿ ಅಲ್ಲಿಗೆ ಸೇರಿಸಿಬಿಟ್ಟರು. ಆದ್ದರಿಂದ ಜಾನಪದ ವಿವಿಯ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಹೇಳಿದರು.
 
ಈ ಜನಪದ ಕಲಾವಿದರು, ಕವಿಗಳು, ಸಾಹಿತಿಗಳು ಎಲ್ಲ ಕೆಳವರ್ಗದಿಂದ ಬಂದಿರುವವರು. ಕೆಳವರ್ಗದವರ ಬದುಕೇ ಜನಪದ ಕಲೆ ಆಗಿದೆ. ಆದ್ದರಿಂದ ನನ್ನ ಬಲಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದಾರೆ. ನನ್ನ ಎಡಭಾಗದಲ್ಲಿ ಉನ್ನತ ಶಿಕ್ಷಣ ಸಚಿವರಿದ್ದಾರೆ. ಇಬ್ಬರು ಕುಳಿತು ಮಾತನಾಡಿ ಜಾನಪದ ವಿವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ: ಜಗತ್ತಿನಾದ್ಯಂತ ಶಾಖೆಗಳು!
 
ಜಾನಪದ ವಿವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದರೆ ಮಾತ್ರ ಅಲ್ಲಿ ಚಟುವಟಿಕ ನಡೆಯುತ್ತವೆ. ಜಾಗ ಕೊಟ್ಟಿದ್ದೀವಿ, ಹಣ ಕೊಟ್ಟಿ, ಕಟ್ಟಡ ಕಟ್ಟಿದ್ದೀವಿ, ಮುಗಿದು ಹೋಯ್ತು ಅಲ್ಲಿಗೆ ವ್ಯವಸ್ಥಿತವಾಗಿ ನಿಂತೋಯ್ತು. ಆದ್ದರಿಂದ ಅಲ್ಲಿಗೆ ನೇಮಕಾತಿ ಮಾಡುವಾಗಲೂ ಕೂಡ ಅರ್ಹತೆ ಇರುವ ಜನಪದ ಕಲಾವಿದರನ್ನೇ ನೇಮಕ ಮಾಡಿ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ನಾನು ಕೂಡ ವಿವಿಗೆ ಹೋಗಿಬಂದಿದ್ದೇನೆ. ಆದ್ದರಿಂದ ಸಚಿವರು ಇದನ್ನು ಪರಿಶೀಲಿಸಬೇಕು. ಆಗ ಮಾತ್ರ ಜನಪದ ವಿವಿಯ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT