ಆರಗ ಜ್ಞಾನೇಂದ್ರ 
ರಾಜ್ಯ

ಟೆರರಿಸ್ಟ್ ಗಳ ಹುಟ್ಟು ಹಾಕಿದ್ದೇ ಕಾಂಗ್ರೆಸ್; PFI, SDPI ನಿಷೇಧಕ್ಕೆ ಪ್ರಕ್ರಿಯೆ ಆರಂಭ: ಆರಗ ಜ್ಞಾನೇಂದ್ರ

ಪಿಎಫ್ ಐ ಹಾಗು ಎಸ್ ಡಿಪಿಐ ಮೇಲೆ ಎನ್‌ಐಎ ಹಾಗೂ ಪೊಲೀಸರು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದು, ಏಕತೆ‌, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇದ್ದು, ಇದಕ್ಕೆ ಸಂಬಂಧಿಸಿದವರ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಬೆಂಗಳೂರು: ಪಿಎಫ್ ಐ ಹಾಗು ಎಸ್ ಡಿಪಿಐ ಮೇಲೆ ಎನ್‌ಐಎ ಹಾಗೂ ಪೊಲೀಸರು ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದು, ಏಕತೆ‌, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇದ್ದು, ಇದಕ್ಕೆ ಸಂಬಂಧಿಸಿದವರ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಅವರು, ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ ಎಂದು ಹೇಳಿದರು.

ಪಿಎಫ್ಐ ಕಾರ್ಯಕರ್ತರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು. ತಪ್ಪಿತಸ್ಥರು ಅಲ್ಪಸಂಖ್ಯಾತರಾ, ಅಲ್ವಾ ಅಂತ ಪೊಲೀಸರು ನೋಡಿ ಕೆಲಸ‌ ಮಾಡೋದಕ್ಕೆ ಆಗಲ್ಲ. ಟೆರರಿಸ್ಟ್ ಗಳನ್ನು ಹುಟ್ಟು ಹಾಕಿದ್ದು, ಟೆರರಿಸ್ಟ್‌ಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್. ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು. ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ ಎಂದು ಹೇಳಿದರು.

PFI, SDPI ಶಾಶ್ವತ ನಿಷೇಧಕ್ಕೆ ಕೇಂದ್ರ ಮಟ್ಟದಲ್ಲಿ ಪ್ರಕ್ರಿಯೆ ಆರಂಭ
ಭಯೋತ್ಪಾದಕ ಸಂಘಟನೆಗಳಿಗೆ ಪದೇ ಪದೇ ಕುಮ್ಮಕ್ಕು ನೀಡುತ್ತಿರುವ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳ ಚಟುವಟಿಕೆಗಳಿಗೆ ಶಾಶ್ವತವಾಗಿ ನಿಷೇಧ ಹಾಕುವ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಆರಂಭವಾಗಿದೆ ಎಂದು ಹೇಳಿದ ಸಚಿವರು, ಈ ಎರಡು ಸಂಘಟನೆಗಳು ಕರ್ನಾಟಕ ಮಾತ್ರವಲ್ಲದೆ ದೇಶದ ಬೇರೆ ಬೇರೆ ಕಡೆ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಇಟ್ಟುಕೊಂಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಹೀಗಾಗಿ ಇವುಗಳನ್ನು ನಿಷೇಧಿಸುವ ಪ್ರಕ್ರಿಯೆ ಕೇಂದ್ರ ಮಟ್ಟದಲ್ಲಿ ಆರಂಭವಾಗಿದೆ ಎಂದರು. 

ಪಿಎಫ್ಐ ಮತ್ತು ಎಸ್ಡಿಪಿಐ ದೇಶದಲ್ಲಿ ಇತ್ತೀಚೆಗೆ ಎಂತಹ ದುಷ್ಕøತ್ಯ ನಡೆಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರಿಗೆ ಆರ್ಥಿಕ ನೆರವು ಎಲ್ಲಿಂದ ಬರುತ್ತದೆ. ಇವರಿಗೆ ಬೆಂಬಲ ಕೊಡುತ್ತಿರುವವರು ಯಾರು ಎಂಬುದು ಜಗತ್ತಿಗೆ ಗೊತ್ತಾಗಬೇಕು. ಇದು ಸ್ವಚ್ಛ ಮಾಡಬೇಕೆಂದರೆ ದಾಳಿ ಅನಿವಾರ್ಯ. ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರಿಂದಲೇ ಪೆಂಡಂಬೂತವಾಗಿ ಇವುಗಳು ಬೆಳೆದು ನಿಂತಿವೆ. ಇಂತಹ ಸಂಘಟನೆಗಳನ್ನು ಬಗ್ಗುಬಡಿಯಬೇಕೆಂದರೆ ಜಾತಿ, ಧರ್ಮ, ರಾಜಕೀಯ ಲಾಭ, ನಷ್ಟ ನೋಡಬಾರದು. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕೆಂದು ಮನವಿ ಮಾಡಿದರು.

ಗೃಹ ಸಚಿವರ ಮನೆಗೆ ಭದ್ರತೆ
ರಾಜ್ಯದ ವಿವಿಧೆಡೆ ಎನ್ಐಎ ಮತ್ತು ಇಡಿ ಏಕಕಾಲಕ್ಕೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಜಯಮಹಲ್ನಲ್ಲಿರುವ ಅವರ ನಿವಾಸದ ಬಳಿ ಕೆಎಸ್ಆರ್ಪಿ ತುಕಡಿ, ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳನ್ನು ಭದ್ರತೆ ನಿಯೋಜನೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT