ಮಂಗಳೂರಿನಲ್ಲಿ ಎನ್ಐಎ ದಾಳಿ, ಮೂವರು ಪಿಎಫ್ಐ ಮುಖಂಡರು ವಶಕ್ಕೆ

ಬರೋಬ್ಬರಿ 5ರಿಂದ ಆರು ಗಂಟೆಗಳ ಕಾಲ ಸತತ ಶೋಧ ನಡೆಸಿ ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಇಂದು ಗುರುವಾರ ಎಸ್​ಡಿಪಿಐ, ಪಿಎಫ್ಐ ಕಚೇರಿಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ತೆರಳಿದ್ದು, ಮೂವರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಬರೋಬ್ಬರಿ 5ರಿಂದ ಆರು ಗಂಟೆಗಳ ಕಾಲ ಸತತ ಶೋಧ ನಡೆಸಿ ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಇಂದು ಗುರುವಾರ ಎಸ್​ಡಿಪಿಐ, ಪಿಎಫ್ಐ ಕಚೇರಿಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ತೆರಳಿದ್ದು, ಮೂವರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.

ಪಿಎಫ್ಐ ಮುಖಂಡರಾದ ಅಶ್ರಫ್ ಎ.ಕೆ, ಮೊಹಿದ್ದೀನ್ ಹಳೆಯಂಗಡಿ, ನವಾಜ್ ಕಾವೂರು ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್​ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ತಿಳಿಸಿದ್ದಾರೆ.

ಹಲವು ಪ್ರತಿಭಟನಾಕಾರರು ವಶಕ್ಕೆಮುಂಜಾನೆ 3.30 ರ ಸುಮಾರಿಗೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್​ಡಿಪಿಐ, ಪಿಎಫ್ಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು, ಸುಮಾರು 5 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.‌ ದಾಳಿ ಕುರಿತು ಮಾಹಿತಿ ಪಡೆದ ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಮುಂಜಾನೆ 5 ಗಂಟೆಗೆ ಕಚೇರಿಗೆ ಆಗಮಿಸಿದ್ದರು.

ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಲ್ಯಾಪ್ ಟಾಪ್, ದಾಖಲೆ ಪತ್ರ ಮತ್ತು ಕಾರ್ಯಕ್ರಮದ ಫೋಟೋಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಎಸ್​ಡಿಪಿಐ ಮತ್ತು ಪಿಎಫ್​ಐಗೆ ಸೇರಿದ ಕೆಲವು ಮುಖಂಡರ ಮನೆ ಮೇಲೂ ಸಹ ದಾಳಿ ನಡೆಸಲಾಗಿದೆ.

ದಾಳಿ ಬಳಿಕ ಮಾತನಾಡಿದ ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಎನ್​ಐಎ ಅವರು ಬಂದಿರುವುದು ಪಿಎಫ್ಐ ಕಚೇರಿ ಮೇಲೆ ದಾಳಿ ಮಾಡಲು. ಅವರ ಎಫ್​ಐಆರ್​ನಲ್ಲಿ ಕೂಡ ಪಿಎಫ್​ಐ ಅಂತ ಇತ್ತು. ಎಸ್​ಡಿಪಿಐ ಕಚೇರಿಗೆ ಬಂದ ಬಳಿಕ ಇದು ಪಿಎಫ್​ಐ ಕಚೇರಿ ಅಲ್ಲ, ಎಸ್​ಡಿಪಿಐ ಕಚೇರಿ ಎಂದು ಗೊತ್ತಾಗಿದೆ. ಬಳಿಕ ಪಿಎಫ್ಐ ಜೊತೆಗೆ ಎಸ್​ಡಿಪಿಐ ಕಚೇರಿ ಪರಿಶೀಲನೆ ಸಹ ನಡೆಸಿದ್ದಾರೆ. ನಮ್ಮ ಕಚೇರಿಯ ಲ್ಯಾಪ್ ಟಾಪ್, ಬಾಡಿಗೆ ಕರಾರು ಪತ್ರ, ಕಾರ್ಯಕ್ರಮದ ಫೋಟೋಗಳನ್ನು ಕೊಂಡೊಯ್ದಿದ್ದಾರೆ ಎಂದರು.

ಇನ್ನು ಎಸ್​ಡಿಪಿಐ ನಾಯಕರ ಮನೆ ಮೇಲೆ ದಾಳಿಯಾಗಿಲ್ಲ. ನಮ್ಮ ಕಚೇರಿಯ ಬೋರ್ಡ್, ಸ್ಟ್ಯಾಂಡ್​ಗಳನ್ನು ಪರಿಶೀಲಿಸಿದ್ದಾರೆ. ಯಾವ ಕಾರಣಕ್ಕಾಗಿ ಎನ್​ಐಎ ದಾಳಿ ಮಾಡಲಾಗಿದೆ ಎಂದು ಹೇಳುತ್ತಿಲ್ಲ. ಇದು ಬಿಜೆಪಿ ಸರ್ಕಾರದ ಕುತಂತ್ರ. ನಾವು ರಾಜಕೀಯವಾಗಿ ವೇಗವಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.

ತೆಲಂಗಾಣದಲ್ಲಿ ನಾಲ್ವರು ವಶಕ್ಕೆ: ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮಾಂಡ್ ವರದಿಯಲ್ಲಿ, ನಿಜಾಮಾಬಾದ್, ಅದಿಲಾಬಾದ್ ಮತ್ತು ಕರೀಂನಗರದಿಂದ ಭಯೋತ್ಪಾದನಾ ಚಟುವಟಿಕೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತ ನಾಲ್ವರು ಏಜೆನ್ಸಿಯನ್ನು ದಾರಿತಪ್ಪಿಸಲು ಪ್ರಯತ್ನಿಸಿದರು ಮತ್ತು ಶಾಂತಿಗೆ ಹಾನಿಕರ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದೆ.

TNIE ವಶದಲ್ಲಿರುವ ರಿಮಾಂಡ್ ವರದಿಯಲ್ಲಿ, ನಿಜಾಂಬಾದ್‌ನ ಸೈಯದ್ ಯಾಹಿಯಾ ಸಮೀರ್, ಆದಿಲಾಬಾದ್‌ನ ಫಿರೋಜ್ ಖಾನ್, ಶಮಿತ್‌ಪೇಟ್‌ನಿಂದ ಮೊಹಮ್ಮದ್ ಒಸ್ಮಾನ್ ಮತ್ತು ಕರೀಂನಗರದ ಮೊಹಮ್ಮದ್ ಇರ್ಫಾನ್ ಬಂಧಿತ ನಾಲ್ವರು ಭಯೋತ್ಪಾದಕ ಶಂಕಿತರನ್ನು ಬಂಧಿಸಲಾಗಿದೆ. ನಿಜಾಂಬಾದ್ ಪೊಲೀಸರು ಬಂಧಿಸಿರುವ ಕರಾಟೆ ತರಬೇತುದಾರ ಅಬ್ದುಲ್ ಖಾದರ್ ತಪ್ಪೊಪ್ಪಿಗೆ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

ಅಬ್ದುಲ್ ಖಾದರ್ ಮತ್ತು ನಾಲ್ವರು ಬಂಧಿತ ವ್ಯಕ್ತಿಗಳು ನಿರ್ಣಾಯಕ ಮಾಹಿತಿಯನ್ನು ಹಿಡಿದಿಟ್ಟುಕೊಂಡಿದ್ದಾರೆ ಮತ್ತು ಅವರ ಚಟುವಟಿಕೆಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಗಳನ್ನು ಹೊರತೆಗೆಯಲು ಅವರಿಗೆ ಹೆಚ್ಚಿನ ಕಸ್ಟಡಿ ಅಗತ್ಯವಿದೆ ಎಂದು ಹೇಳುತ್ತದೆ.

ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಎನ್‌ಐಎ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com