ಕಸದ ವಾಹನ ಚಲಾಯಿಸಿದ ಐಎಎಸ್ ಅಧಿಕಾರಿ ಪ್ರಸನ್ನ 
ರಾಜ್ಯ

ಯಾವ ಕೆಲಸವೂ ಕೀಳಲ್ಲ: ಕಸದ ವಾಹನ ಚಲಾಯಿಸಿದ ಐಎಎಸ್ ಅಧಿಕಾರಿ ಪ್ರಸನ್ನ!

ಯಾವ ಕೆಲಸವೂ ಕೀಳಲ್ಲ ಎಂಬುದನ್ನುಕರ್ನಾಟಕದ ಐಎಎಸ್ ಅಧಿಕಾರಿಪ್ರಸನ್ನ ಅವರು ತಮ್ಮ ಕಾರ್ಯದ ಮೂಲಕ ತೋರ್ಪಡಿಸಿದ್ದು, ಅವರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉಡುಪಿ: ಯಾವ ಕೆಲಸವೂ ಕೀಳಲ್ಲ ಎಂಬುದನ್ನುಕರ್ನಾಟಕದ ಐಎಎಸ್ ಅಧಿಕಾರಿಪ್ರಸನ್ನ ಅವರು ತಮ್ಮ ಕಾರ್ಯದ ಮೂಲಕ ತೋರ್ಪಡಿಸಿದ್ದು, ಅವರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಆಗಿರುವ ಪ್ರಸನ್ನ ಅವರು ಪ್ರತಿ ಕೆಲಸವೂ ಶ್ರೇಷ್ಠ ಮತ್ತು ಅಗತ್ಯ ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಇಂದು ಸ್ವತಃ ತಾವೇ ಕಸ ಸಂಗ್ರಹಿಸುವ ವಾಹನ ಚಲಾಯಿಸಿಕೊಂಡು ಬಂದು ನಿವಾಸಿಗಳಿಂದ ಕಸ ಸಂಗ್ರಹಿಸಿದ್ದಾರೆ.

ಶನಿವಾರ ಉಡುಪಿಯ ಬಡಗಬೆಟ್ಟು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತ್ಯಾಜ್ಯ ಸಂಗ್ರಹಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಖುದ್ದು ವೀಕ್ಷಿಸಿದರು. ಅಧಿಕಾರಿಯೊಬ್ಬರು ತಾವೇ ಕಸದ ವಾಹನ ಚಾಲನೆ ಮಾಡಿಕೊಂಡು ಬಂದು ಕಸ ಸಂಗ್ರಹಿಸಿದ್ದು ಸ್ಥಳೀಯರಿಗೆ ಅಚ್ಚರಿಯನ್ನುಂಟು ಮಾಡಿತ್ತು. 

ಅಲ್ಲದೇ ಹಲವು ನಿವಾಸಿಗಳು ಪ್ರಸನ್ನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT