ರಾಜ್ಯ

ಮೈಸೂರು ದಸರಾ: ಇದೇ ಮೊಟ್ಟ ಮೊದಲ ಬಾರಿಗೆ ಉರ್ದು ಕವಿಗೋಷ್ಠಿ ಆಯೋಜನೆ

Shilpa D

ಮೈಸೂರು: ಉರ್ದು ಕವಿಗಳಿಗೆ ಸಂತಸದ ಸಮಯ. ಉರ್ದು ಕಾವ್ಯ ಪ್ರೇಮಿಗಳು ಖುಷಿಪಡಲು ಕಾರಣವಿದೆ. ಮೊಟ್ಟಮೊದಲ ಬಾರಿಗೆ ದಸರಾ ಕವಿಗೋಷ್ಠಿಯು ಈ ವರ್ಷ ಉರ್ದು (ಮುಶೈರಾ) ಕವಿಗೋಷ್ಠಿ ಆಯೋಜಿಸಲಾಗಿದೆ.

ದೇಶದ ವಿವಿಧ ಭಾಗಗಳಿಂದ ಪ್ರಸಿದ್ಧ ಉರ್ದು ಕವಿಗಳು ತಮ್ಮ ಗಜಲ್‌ಗಳು ಮತ್ತು ಶಾಯರಿ (ಕವಿತೆ) ಪ್ರಸ್ತುತ ಪಡಿಸಲಿದ್ದಾರೆ. ಈ ವೇಳೆ ಮಾತನಾಡಿದ ದಸರಾ ಕವಿಗೋಷ್ಠಿ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ ಮಾತನಾಡಿ, ನಾಡಿನ ವಿವಿಧ ಭಾಗಗಳ ಕವಿಗಳು ಪಾಲ್ಗೊಳ್ಳಲಿದ್ದಾರೆ ಎಂದರಲ್ಲದೆ, ಹಾಸ್ಯ ಕವಿಗೋಷ್ಠಿ, ಉರ್ದು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ, ಚಿಗುರು ಕವಿಗೋಷ್ಠಿ ಮತ್ತು ಪ್ರಧಾನ ಕವಿಗೋಷ್ಠಿಯ ನಡೆಯಲಿದೆ ಎಂದರು.

ಉರ್ದು ಕವಿಗಳಾದ ಜೈಪುರದ ಲತಾ ಹಯಾ, ಕಡಪಾದಿಂದ ರಾಹಿ ಫಿದಾಯಿ, ದೆಹಲಿಯ ರಾಜು ರಿಯಾಜ್, ಹೈದರಾಬಾದ್‌ನ ಜಗ್ತಿಯಾಲ್ ಮತ್ತು ಶಹೀದ್ ಆದಿಲ್, ಭೋಪಾಲ್‌ನ ಶಬಾನಾ ಶಬಾನಂ, ತಮಿಳುನಾಡಿನ ರಾಹತ್ ಹಜರತ್ ಮತ್ತು ಮಹಾರಾಷ್ಟ್ರದ ಫಿರಾಜ್ ಶೋಲಾಪುರಿ  ಭಾಗವಹಿಸಲಿದ್ದಾರೆ.

ಬೆಳಗ್ಗೆ 11.30ಕ್ಕೆ ಹಾಸ್ಯ ಕವಿಗೋಷ್ಠಿ ನಡೆಯಲಿದ್ದು, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಭಾಗವಹಿಸಲಿದ್ದು, ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. 20 ಕವಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಜಾನಪದ ಕಾವ್ಯ ಸಂಭ್ರಮದಲ್ಲಿ ಪ್ರೊ.ಪಿ.ಕೆ.ರಾಜಶೇಖರ್ ತಂಡ, ಡಾ.ಮಳವಳ್ಳಿ ಮಹದೇವಸ್ವಾಮಿ ತಂಡದವರು ಹಾಡಲಿದ್ದಾರೆ ಎಂದರು.

8 ರಾಜ್ಯಗಳ ಕವಿಗಳು ಭಾಗವಹಿಸಲಿದ್ದಾರೆ. ಸೆ.30ರಂದು ಬೆಳಗ್ಗೆ 10.30ಕ್ಕೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಯುವ ಕವಿಗೋಷ್ಠಿಯಲ್ಲಿ 40 ಕವಿಗಳು ಭಾಗವಹಿಸುವವರು. ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರಾದೇಶಿಕ ಕವಿಗೋಷ್ಠಿಯಲ್ಲಿ 40 ಕವಿಗಳು ಕವನ ವಾಚಿಸುವವರು.  ಕವಯತ್ರಿ ನೂತನ ದೋಶೆಟ್ಟಿ, ಮಧ್ಯಾಹ್ನ 2.30ಕ್ಕೆ ಚಿಗುರು ಕವಿಗೋಷ್ಠಿಯಲ್ಲಿ ಕವಯತ್ರಿ ಜ್ಯೋತಿ ಗುರುಪ್ರಸಾದ್, ಕವಿ ಡಾ. ಸಿ.ಪಿ.ಸಿದ್ಧಾಶ್ರಮ ಭಾಗವಹಿಸುವರು ಎಂದು ತಿಳಿಸಿದರು.

ದಸರಾ ಕವಿಗೋಷ್ಠಿಯ ಮೊದಲ ದಿನ ಹಾಸ್ಯ ಕವಿಗೋಷ್ಠಿ ನಡೆಯಲಿದ್ದು, 20 ಸ್ಟ್ಯಾಂಡ್ ಅಪ್ ಕಾಮಿಡಿಗಳಾದ ಕೃಷ್ಣೇಗೌಡ, ಡುಂಡಿರಾಜ್ ಮುಂತಾದವರು ಭಾಗವಹಿಸಲಿದ್ದಾರೆ. ನಂತರ ಪಿ ಕೆ ರಾಜಶೇಖರ್ ಮತ್ತು ಮಳವಳ್ಳಿ ಮಹದೇವಸ್ವಾಮಿ ಅವರಿಂದ ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಸೆಪ್ಟೆಂಬರ್ 30 ರಂದು ನಡೆಯಲಿರುವ ಯುವ ಕವಿ ಗೋಷ್ಠಿಗಾಗಿ ನಾವು ಯುವ ಕವಿಗಳಿಂದ ನೂರಾರು ಅರ್ಜಿಗಳನ್ನು ಸ್ವೀಕರಿಸಿದ್ದೇವೆ, ಅದರಲ್ಲಿ ನಾವು 40 ಅನ್ನು ಶಾರ್ಟ್‌ಲಿಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಅಕ್ಟೋಬರ್ 1 ರಂದು ಪ್ರಾದೇಶಿಕ ಕವಿಗೋಷ್ಠಿ ಮತ್ತು ಅಕ್ಟೋಬರ್ 3 ರಂದು ಪ್ರಧಾನ ಕವಿಗೋಷ್ಠಿ ನಡೆಯಲಿದ್ದು, 40 ಕವಿಗಳು ಭಾಗವಹಿಸಲಿದ್ದಾರೆ,'' ಎಂದು ಹೇಳಿದರು. ರಾಜಕೀಯ ಮತ್ತು ಧರ್ಮ ಸೂಕ್ಷ್ಮ ವಿಷಯಗಳಾಗಿರುವುದರಿಂದ ಆ ವಿಷಯಗಳ ಬಗ್ಗೆ ಪ್ರಸ್ತಾಪಿಸದಂತೆ  ಮನವಿ ಮಾಡಲಾಗಿದೆ ಎಂದು ದಾಸೇಗೌಡ ತಿಳಿಸಿದರು.

SCROLL FOR NEXT