ರಾಜ್ಯ

ರಾಜ್ಯ ಪಠ್ಯಕ್ರಮದಿಂದ ಏಳು ಸಾಹಿತಿಗಳ ಪಾಠಗಳನ್ನು ಕೈಬಿಡುವಂತೆ ಆದೇಶ: ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

Sumana Upadhyaya

ಬೆಂಗಳೂರು: 6, 9 ಮತ್ತು 10ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳ ಪಠ್ಯಕ್ರಮದಿಂದ ಏಳು ಸಾಹಿತಿಗಳು/ವಿದ್ವಾಂಸರ ಪಾಠಗಳನ್ನು ಕೈಬಿಡುವಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ (KTS) ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಎಂಪಿ ಆದೇಶ ಹೊರಡಿಸಿ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸಾಹಿತಿಗಳು ತಮ್ಮ ಪಾಠಗಳನ್ನು ಪ್ರಕಟಿಸಲು ನೀಡಿರುವ ಅನುಮತಿಯನ್ನು ಹಿಂತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಅವರ ಪಾಠಗಳನ್ನು ಪಠ್ಯದಿಂದ ಕೈಬಿಡಲಾಗಿದೆ.

10ನೇ ತರಗತಿಯ ಕನ್ನಡ ಪ್ರಥಮ ಭಾಷೆಯ ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಪಾಠವನ್ನು ಕೈಬಿಡುವಂತೆ ಆದೇಶ ನೀಡಲಾಗಿದೆ. ಡಾ ಜಿ ರಾಮಕೃಷ್ಣ ಅವರು ಬರೆದಿರುವ 10 ನೇ ತರಗತಿಯ ಪ್ರಥಮ ಭಾಷೆಯ ಕನ್ನಡ ಪಠ್ಯಪುಸ್ತಕದಿಂದ "ಭಗತ್ ಸಿಂಗ್" ಪಾಠ; ರೂಪ ಹಾಸನ ಅವರು ಬರೆದಿರುವ 9 ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ "ಅಮ್ಮನಾಗುವೆಂದರೆ" ಕವಿತೆ.

ಈರಪ್ಪ ಎಂ ಕಂಬಳಿ ಅವರ 10ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ “ಹೀಗೊಂದು ಉನ್ನತ ಪ್ರಯಾಣ” ಪಾಠ; ಸತೀಶ್ ಕುಲಕರ್ಣಿ ಅವರ 10 ನೇ ತರಗತಿಯ ತೃತೀಯ ಭಾಷೆಯ ಪಠ್ಯಪುಸ್ತಕದಿಂದ “ಕಟ್ಟತೇವ ನಾವು” ಕವಿತೆ; ಸುಕನ್ಯಾ ಮಾರುತಿಯವರ 10ನೇ ತರಗತಿಯ ದ್ವಿತೀಯ ಭಾಷೆಯ ಪಠ್ಯಪುಸ್ತಕದಿಂದ “ಎನಿ” ಕವಿತೆ; ದೊಡ್ಡ ಹುಲ್ಲೂರು ರುಕ್ಕೋಜಿ ರಾವ್ ಅವರ 6 ನೇ ತರಗತಿಯ ಪ್ರಥಮ ಭಾಷಾ ಪಠ್ಯಪುಸ್ತಕದಿಂದ "ಡಾ ರಾಜ್‌ಕುಮಾರ್" ಪಾಠವನ್ನು ಕೈಬಿಡುವಂತೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಆದೇಶ ನೀಡಿದೆ.

SCROLL FOR NEXT