ಪಿಎಂ ನರೇಂದ್ರ ಮೋದಿ 
ರಾಜ್ಯ

ಹಬ್ಬಹರಿದಿನಗಳಲ್ಲಿ ಪ್ಲಾಸ್ಟಿಕ್ ರಹಿತ ಚೀಲ ಬಳಸಿ, ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯ ಕೆಲಸ ಶ್ಲಾಘನೀಯ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನಾಳೆಯಿಂದ 9 ದಿನಗಳ ಕಾಲ ದೇಶಾದ್ಯಂತ ನವರಾತ್ರಿ ಸಂಭ್ರಮ, ಅದಾದ ಕೆಲ ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತದೆ. ಈ ಸಂದರ್ಭದಲ್ಲಿ ಹಳದಿ, ಕುಂಕುಮ, ಬಾಗಿನ, ಹಣ್ಣುಪಂಪಲು, ತಿನಿಸುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಲವರು ಕೊಡುತ್ತಾರೆ.

ನವದೆಹಲಿ: ನಾಳೆಯಿಂದ 9 ದಿನಗಳ ಕಾಲ ದೇಶಾದ್ಯಂತ ನವರಾತ್ರಿ ಸಂಭ್ರಮ, ಅದಾದ ಕೆಲ ದಿನಗಳಲ್ಲಿ ದೀಪಾವಳಿ ಹಬ್ಬ ಬರುತ್ತದೆ. ಈ ಸಂದರ್ಭದಲ್ಲಿ ಹಳದಿ, ಕುಂಕುಮ, ಬಾಗಿನ, ಹಣ್ಣುಪಂಪಲು, ತಿನಿಸುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಲವರು ಕೊಡುತ್ತಾರೆ.

ಹಬ್ಬಹರಿದಿನಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ರಹಿತ ಮರುಬಳಕೆಯ ಚೀಲಗಳನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶದ ಜನತೆಗೆ ಕರೆ ನೀಡಿದ್ದಾರೆ.

ಪ್ಲಾಸ್ಟಿಕ್ ಬದಲಿಗೆ ಹಬ್ಬ ಹರಿದಿನಗಳಲ್ಲಿ ಜನರು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ ರಹಿತ ಚೀಲಗಳನ್ನೇ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರು, ಇಂತಹ ಹಲವು ಸಾಂಪ್ರದಾಯಿಕ ಚೀಲಗಳ ಬಳಕೆಯನ್ನು ಹೆಚ್ಚೆಚ್ಚು ಬಳಸಿ ಎಂದು ಒತ್ತಾಯಿಸಿದ್ದಾರೆ.

ಇಂದಿನ ಮನ್ ಕಿ ಬಾತ್ ನಲ್ಲಿ ಅವರ ಮಾತಿನ ಮುಖ್ಯಾಂಶಗಳು:

ಇಂದು ಮನ್ ಕಿ ಬಾತ್ ನಲ್ಲಿ ನನಗೆ ಭಾರತಕ್ಕೆ ತಂದಿರುವ ಚೀತಾಗಳ ಬಗ್ಗೆ ಮಾತನಾಡಲು ಹಲವರು ಒತ್ತಾಯಿಸಿದ್ದಾರೆ. ದೇಶದ ಜನತೆ ಚೀತಾ ತಂದಿದ್ದಕ್ಕೆ ಖುಷಿಪಟ್ಟಿದ್ದಾರೆ. ಚೀತಾಗಳು ನೋಡಲು ಯಾವಾಗ ಅವಕಾಶ ಸಿಗುತ್ತದೆ ಎಂದು ಕೇಳಿದ್ದಾರೆ. ಮೊದಲು ನಾನು ಈ ಬಗ್ಗೆ  ಸ್ಪರ್ಧೆಯೊಂದರ ಬಗ್ಗೆ  ಹೇಳುತ್ತೇನೆ. ನೀವೂ  ಈ ಸ್ಪರ್ಧೆಯಲ್ಲಿ  ಭಾಗವಹಿಸಿ , ಇದರಲ್ಲಿ  ಗೆಲ್ಲುವ ಮೂಲಕ ನಿಮಗೆ ಚೀತಾಗಳನ್ನು ನೋಡುವ ಅವಕಾಶ ಸಿಗಬಹುದು ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರು ಮೂಲದ ಸಂಸ್ಥೆಯನ್ನು ಪ್ರಸ್ತಾಪಿಸಿದ ಮೋದಿ: ಬೆಂಗಳೂರು ಮೂಲದ ಯೂತ್ ಫಾರ್ ಪರಿವರ್ತನ್ (youth for parivarthan) ಎಂಬ ಸ್ವಯಂ ಸೇವಾ ಸಂಸ್ಥೆ (NGO) ಬಗ್ಗೆ ಪ್ರಸ್ತಾಪಿಸಿದ ಅವರು, ಅದರ ಸಮಾಜಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಯೂತ್ ಫಾರ್ ಪರಿವರ್ತನ್ ಸಂಸ್ಥೆ ಸಮಾಜ ಸೇವೆ ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ತೊಡಗಿದೆ ಎಂದು ಶ್ಲಾಘಿಸಿದರು.

ಸೆಪ್ಟೆಂಬರ್ 28 ರಂದು ಸರ್ಜಿಕಲ್ ಸ್ಟ್ರೈಕ್‌ಗಳ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ನಾವೆಲ್ಲರೂ ನಮ್ಮ ಸೇನೆಯ ಧೈರ್ಯ ಮತ್ತು ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಬೋಸ್ ಅವರಿಗೆ ನಮ್ಮ ದೇಶ ಗೌರವ ಸಲ್ಲಿಸಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಮೂಲಕ ಸೆಪ್ಟೆಂಬರ್ 28 ಅನ್ನು ಅದೇ ರೀತಿಯಲ್ಲಿ ಆಚರಿಸಲು ನಾನು ದೇಶವಾಸಿಗಳನ್ನು ಕೋರುತ್ತೇನೆ ಎಂದರು.

ಜೀವನದ ಹೋರಾಟದಲ್ಲಿರುವ ವ್ಯಕ್ತಿಯ ದಾರಿಯಲ್ಲಿ ಯಾವುದೇ ಅಡಚಣೆಗಳಿರುವುದಿಲ್ಲ. ನಮ್ಮ ದೈನಂದಿನ ಜೀವನದಲ್ಲಿ, ಕೆಲವು ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಕೆಲವು ಸ್ನೇಹಿತರನ್ನು ಸಹ ನಾವು ನೋಡುತ್ತೇವೆ. ನಾವು ವಿಕಲಚೇತನರ ಬಗ್ಗೆ ಜಾಗೃತಿ ಮೂಡಿಸಬೇಕು. ಅವರನ್ನು ನಮ್ಮೊಂದಿಗೆ ಬೆರೆತುಕೊಳ್ಳಲು  ಹೆಚ್ಚಿಸಲು ಸಹಾಯ ಮಾಡಬೇಕಾಗಿದೆ. 2015 ರಲ್ಲಿ ಭಾರತೀಯ ಸಂಜ್ಞೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು.

ಅಂದಿನಿಂದ ಭಾರತೀಯ ಸಂಜ್ಞೆ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಸೆಪ್ಟೆಂಬರ್ 23 ರಂದು, ವಿವಿಧ ಶಿಕ್ಷಣ ಸಂಸ್ಥೆಗಳು ದೇಶದಾದ್ಯಂತ ಸಂಜ್ಞೆ ಭಾಷಾ ದಿನವನ್ನು ಪ್ರಚಾರ ಮಾಡಿದೆ. ಭಾರತೀಯ ಸಂಜ್ಞೆ ಭಾಷೆ ಸಂಶೋಧನೆ ಮತ್ತು ತರಬೇತಿ ಕೇಂದ್ರವು ದೇಶದಲ್ಲಿ ಒಳಗೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತಿದೆ. ಸಂಸ್ಥೆಯು 10,000 ಪದಗಳ ನಿಘಂಟನ್ನು ಅಭಿವೃದ್ಧಿಪಡಿಸಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT