ಅರ್ಕಾವತಿ ಬಡಾವಣೆಯ 18ನೇ ಬ್ಲಾಕ್‌ನಲ್ಲಿ ನಿರ್ಮಾಣವಾಗಿರುವ ಒಂದು ಮನೆ, ಮನೆ ಮಾಲೀಕ ಸುಬ್ರಹ್ಮಣ್ಯ ರೆಡ್ಡಿ ತಮ್ಮ ಪತ್ನಿಯೊಂದಿಗೆ 
ರಾಜ್ಯ

ಬೆಂಗಳೂರು: ಗೆದ್ದಲಹಳ್ಳಿಯಲ್ಲಿನ ಅರ್ಕಾವತಿ ಲೇಔಟ್‌ನಲ್ಲಿ ಒಂದೇ ಮನೆ, ಸಂಕಷ್ಟದಲ್ಲಿ ಕುಟುಂಬ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿರುವ 500ಕ್ಕೂ ಹೆಚ್ಚು ಸೈಟ್‌ಗಳಿರುವ ವಿಶಾಲ ಪ್ರದೇಶದಲ್ಲಿ ಒಂದೇ ಒಂದು ಮನೆ ನಿರ್ಮಾಣವಾಗಿದೆ. ಗೆದ್ದಲಹಳ್ಳಿಯಲ್ಲಿನ ಅರ್ಕಾವತಿ ಲೇಔಟ್‌ನ 18ನೇ ಬ್ಲಾಕ್‌ನಲ್ಲಿರುವ ಏಕೈಕ ಮನೆಯಲ್ಲಿ ಯೋಗ ಕಲಿಸುವ ದಂಪತಿ ತಮ್ಮ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದಾರೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿರುವ 500ಕ್ಕೂ ಹೆಚ್ಚು ಸೈಟ್‌ಗಳಿರುವ ವಿಶಾಲ ಪ್ರದೇಶದಲ್ಲಿ ಒಂದೇ ಒಂದು ಮನೆ ನಿರ್ಮಾಣವಾಗಿದೆ. ಗೆದ್ದಲಹಳ್ಳಿಯಲ್ಲಿನ ಅರ್ಕಾವತಿ ಲೇಔಟ್‌ನ 18ನೇ ಬ್ಲಾಕ್‌ನಲ್ಲಿರುವ ಏಕೈಕ ಮನೆಯಲ್ಲಿ ಯೋಗ ಕಲಿಸುವ ದಂಪತಿ ತಮ್ಮ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದಾರೆ.

ಸಂಜೆಯ ವೇಳೆಗೆ ಖಾಲಿ ನಿವೇಶನಗಳು ವೇಶ್ಯಾವಾಟಿಕೆ, ಗಾಂಜಾ ಮತ್ತು ಮದ್ಯಪಾನಕ್ಕೆ ಹೇಳಿ ಮಾಡಿಸಿದ ಜಾಗವಾಗಿ ಮಾರ್ಪಾಡಾಗುತ್ತಿರುವುದರಿಂದ ಇಲ್ಲಿ ಬದುಕಲು ದಿನನಿತ್ಯ ಹೋರಾಟ ಮಾಡಬೇಕಿದೆ ಎಂದು ಕುಟುಂಬ ಅಳಲು ತೋಡಿಕೊಂಡಿದೆ.

1986 ರಿಂದ ಇಲ್ಲಿ ಬಿಡಿಎ ಸೈಟ್‌ಗಾಗಿ ಪ್ರಯತ್ನಿಸಿದ ನಂತರ, ಮನೆ ಮಾಲೀಕ ಸುಬ್ರಹ್ಮಣ್ಯ ರೆಡ್ಡಿ ಅವರು 1998 ರಲ್ಲಿ ತಮ್ಮ 8ನೇ ಪ್ರಯತ್ನದಲ್ಲಿ ನಿವೇಶನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ 2017ರಲ್ಲಿ ತಮ್ಮ ಮನೆಯನ್ನು ನಿರ್ಮಿಸಿದರು. ಅದಕ್ಕೂ ಮೊದಲು ಅಥವಾ ನಂತರ ಹೆಣ್ಣೂರು ಮುಖ್ಯರಸ್ತೆಯಲ್ಲಿನ ಈ ಬ್ಲಾಕ್‌ನಲ್ಲಿ ಬೇರೆ ಯಾವುದೇ ಮನೆಯೂ ನಿರ್ಮಾಣವಾಗಿಲ್ಲ.

ಸುತ್ತಲೂ ನಾಯಿಕೊಡೆಗಳಂತೆ ಬೆಳೆದಿರುವ ಕಳೆ ಗಿಡಗಳಿಂದಾಗಿ ಹಸಿರಿನ ಮಧ್ಯೆ ಈ ಮನೆಗೆ ರಮಣೀಯವಾದ ವಾತಾವರಣವನ್ನು ನೀಡುತ್ತವೆ. ಆದರೆ, ಇಲ್ಲಿರುವುದು ಒಂದೇ ಒಂದು ಮನೆ.

ಏರೋಸ್ಪೇಸ್ ಇಂಜಿನಿಯರ್ ಆಗಿರುವ ಯೋಗ ಶಿಕ್ಷಕರಾಗಿರುವ ರೆಡ್ಡಿ ಅವರು, 'ಇತ್ತೀಚೆಗೆ ತಮ್ಮ ಗರ್ಭಿಣಿ ಸೊಸೆ ಮನೆಗೆ ಹಿಂದಿರುಗುವಾಗ ದುಷ್ಕರ್ಮಿಗಳು ಲೇಔಟ್‌ನೊಳಗೆ ಬೆನ್ನಟ್ಟಿ ಬಂದಿದ್ದರು. ಈ ವೇಳೆ ಆಕೆ ಕೆಳಗೆ ಬಿದ್ದು, ಸಣ್ಣ ಗಾಯಗಳಾದವು. ಆಕೆಯ ಕಿರುಚಾಟ ಕೇಳಿ ಯಾರೋ ಸಹಾಯಕ್ಕೆ ಧಾವಿಸಿದ್ದು, ದಾಳಿಕೋರ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದೆವು. ನಮ್ಮಲ್ಲಿ ಯಾರಿಗೂ ಸುರಕ್ಷತೆ ಇಲ್ಲ' ಎಂದು ಟಿಎನ್‌ಐಇಗೆ ತಿಳಿಸಿದ್ದಾರೆ.

ಒಂದೇ ಮನೆ ಇರುವುದರಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ್ ಪಡೆಯಲು ಈ ಕುಟುಂಬವು ತಿಂಗಳಿಗೆ 3500 ರೂಪಾಯಿಗಳನ್ನು ಪಾವತಿಸಬೇಕಿದ್ದು, ನೀರಿಗೆ 4000 ರೂ.ಗಳನ್ನು ನೀಡುತ್ತಿದೆ.

'ನಾನು ಯೋಗವನ್ನು ಕಲಿಸಲು ಬೆಳಿಗ್ಗೆ 4 ಗಂಟೆಗೆ ಹೊರಡುತ್ತಿದ್ದೆ. ಈ ವೇಳೆ ಪ್ರವೇಶ ದ್ವಾರವು ಬಂದ್ ಆಗಿತ್ತು. ಈ ವೇಳೆ ಸಣ್ಣದೊಂದು ಸಂದಿ ಇತ್ತು. ಆ ಮೂಲಕ ನಾನು ತೆವಳುತ್ತಾ ಹೋದೆ. ಸಮಯಕ್ಕೆ ಸರಿಯಾಗಿ ನನ್ನ ಕಾರ್ಯಕ್ಷೇತ್ರಕ್ಕೆ ಹೋಗಲು ವಾಹನವನ್ನು ಹಿಡಿಯಬೇಕಾಯಿತು. ಇದೀಗ ನಮ್ಮ ಕುಟುಂಬವು ಮತ್ತೊಂದು ಪ್ರವೇಶದ್ವಾರವನ್ನು ಬಳಸುತ್ತದೆ. ಅದಕ್ಕಾಗಿ ಒಂದು ಸುತ್ತು ಬರಬೇಕು ಎಂದು ಒಂದು ವರ್ಷದ ಹಿಂದೆ ದಿಢೀರನೆ ಬಡಾಣೆಯ ಪ್ರವೇಶ ದ್ವಾರದ ಬಳಿಯಿದ್ದ ಗೋಡೆಯೊಂದು ಏಕಾಏಕಿ ಬಿದ್ದಾಗ ತಮಗಾದ ಆಘಾತವನ್ನು ಪತ್ನಿ ಚಂದ್ರಕಲಾ ನೆನಪಿಸಿಕೊಂಡರು.

ರಾಮ ರೆಡ್ಡಿ

ಬಿಡಬ್ಲ್ಯುಎಸ್‌ಎಸ್‌ಬಿ ಗುತ್ತಿಗೆದಾರ ರಾಮ ರೆಡ್ಡಿ, 'ಹೌದು, ನಾನು ಆ ಗೋಡೆಯನ್ನು ಕಟ್ಟಿದೆ. ಬಿಡಿಎ ಅಧಿಕಾರಿಗಳು ಅಥವಾ ನಿವೇಶನ ಮಾಲೀಕರಿಗೆ ಲೇಔಟ್ ಒಳಗೆ ಮನೆ ಕಟ್ಟಲು ನಾನು ಬಿಡುವುದಿಲ್ಲ. ಬಡಾವಣೆಗಾಗಿ ನಮ್ಮ ಕುಟುಂಬದ ಒಟ್ಟು 14.5 ಎಕರೆ ಜಮೀನು ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ನನ್ನ ಆಸ್ತಿ 2.75 ಎಕರೆ ಸೇರಿದೆ. ಬಿಡಿಎಯಿಂದ ನನಗೆ ಪರಿಹಾರವಾಗಿ ಒಂದು ರೂಪಾಯಿಯಾಗಲಿ ಅಥವಾ ಒಂದಿಂಚು ಭೂಮಿಯಾಗಲಿ ಬಂದಿಲ್ಲ. ಕಳೆದ 18 ವರ್ಷಗಳಿಂದ ನ್ಯಾಯಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದೇನೆ. ಅವರು ನನಗೆ ಪರ್ಯಾಯ ಭೂಮಿಯನ್ನು ನೀಡಲಿ ಮತ್ತು ನಾನು ಯಾರಿಗೂ ತೊಂದರೆ ನೀಡುವುದಿಲ್ಲ' ಎನ್ನುತ್ತಾರೆ.

ರೆಡ್ಡಿಗೆ ಪರ್ಯಾಯ ಭೂಮಿಯನ್ನು ಇನ್ನೂ ನೀಡದ ಕಾರಣ ಇದು ನಮ್ಮದೇ ತಪ್ಪು ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ಒಪ್ಪಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT