ಸಿಎಂ ಬಸವರಾಜ ಬೊಮ್ಮಾಯಿ 
ರಾಜ್ಯ

ಪಿಎಫ್ ಐ ನಿಷೇಧ ಸೂಕ್ತ ನಿರ್ಧಾರ, ದೇಶ ವಿರೋಧಿ ಕುಕೃತ್ಯ ನಡೆಸುವವರಿಗೆ ಇದು ಸಂದೇಶವಾಗಿದೆ: ಸಿಎಂ ಬೊಮ್ಮಾಯಿ

ಪಿಎಫ್ಐ ಸಂಘಟನೆ ಮೇಲಿಂದ ಮೇಲೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾ ಬಂದಿದೆ. ತನ್ನ ಹಲವಾರು ರೂಪಾಂತರಗಳ ಫಲಶ್ರುತಿಯೇ ಪಿಎಫ್ಐ, ಪಿ.ಎಫ್.ಐ ಮತ್ತದರ ಸಂಘಸಂಸ್ಥೆಗಳು ನಿಷೇಧಿತ ಸಿಮಿ ಸಂಘಟನೆಯ ಮುಂದುವರೆದ ಅವತಾರಗಳಾಗಿದ್ದವು.

ಬೆಂಗಳೂರು: ಪಿಎಫ್ಐ ಸಂಘಟನೆ ಮೇಲಿಂದ ಮೇಲೆ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾ ಬಂದಿದೆ. ತನ್ನ ಹಲವಾರು ರೂಪಾಂತರಗಳ ಫಲಶ್ರುತಿಯೇ ಪಿಎಫ್ಐ, ಪಿ.ಎಫ್.ಐ ಮತ್ತದರ ಸಂಘಸಂಸ್ಥೆಗಳು ನಿಷೇಧಿತ ಸಿಮಿ ಸಂಘಟನೆಯ ಮುಂದುವರೆದ ಅವತಾರಗಳಾಗಿದ್ದವು. ದೇಶದಲ್ಲಿ ಹಲವಾರು ವಿಧ್ವಂಸಕ ಚಟುವಟಿಕೆಯಲ್ಲಿ ಪಾಲ್ಗೊಂಡ ಬಗ್ಗೆ ಅನೇಕ ಸಾಕ್ಷ್ಯಾಧಾರಗಳು ಲಭಿಸಿದ್ದವು. ಈಗ ಆ ಸಂಘಟನೆಗಳನ್ನು ನಿಷೇಧಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ದೇಶದ ಕಾನೂನು, ಸಾಮರಸ್ಯ, ಪ್ರೀತಿ, ಸಹಬಾಳ್ವೆ, ಶಾಂತಿ, ಸೌಹಾರ್ದತೆ ಬಗ್ಗೆ ಪಿಎಫ್ಐ ಸಂಘಟನೆಗೆ ನಂಬಿಕೆಯಿಲ್ಲ. ವಿದೇಶಗಳಿಂದ ಆಜ್ಞೆ, ಹಣ ಪಡೆದು ಅಲ್ಲಿನ ಹಿಡಿತದಲ್ಲಿತ್ತು. ಅಲ್ಲಿಂದ ಸಂಘಟನೆಯ ಕಾರ್ಯನಿರ್ವಹಣೆಯಾಗುತ್ತಿತ್ತು. ಬೇರೆ ದೇಶಗಳ ಹಿಡಿತದಲ್ಲಿತ್ತು. ಇದರ ಕುಕೃತ್ಯಗಳು ಜಗಜ್ಜಾಹೀರಾಗಿದ್ದವು ಎಂದರು.

ಪಿಎಫ್ಐ ಸಂಘಟನೆ ನಿಷೇಧ ಬಗ್ಗೆ ಹಲವಾರು ಸಮಯಗಳಿಂದ ಜನರು ಪ್ರಶ್ನೆ ಮಾಡುತ್ತಿದ್ದರು. ಸಂಘಟನೆ ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದಕ್ಕೆ ಇಂದು ಉತ್ತರ ಸಿಕ್ಕಿದೆ.  ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್‌ನಂತಹ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಈ ದೇಶದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಪಿಎಫ್ಐ ದೇಶ ವಿರೋಧಿ ಚಟುವಟಿಕೆಗಳಲ್ಲಿ, ಹಿಂಸಾಚಾರದಲ್ಲಿ ತೊಡಗಿತ್ತು. ವಿಧ್ವಂಸಕ ಕೃತ್ಯಗಳಿಗೆ ದೇಶದಲ್ಲಿ ಅವಕಾಶವಿಲ್ಲ ಎಂದು ಇಂದು ಉತ್ತರ ಸಿಕ್ಕಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

SCROLL FOR NEXT