ಹೆಬ್ಬಾವನ್ನೆಸೆದ ಪ್ರಯಾಣಿಕ 
ರಾಜ್ಯ

ವೈರಲ್ ವಿಡಿಯೋ: ರಸ್ತೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಬರಿಗೈಯಲ್ಲೇ ಎಳೆದು ಬಿಸಾಡಿದ ಬಸ್ ಪ್ರಯಾಣಿಕ!!

ಬಸ್ ಗೆ ಅಡ್ಡಲಾಗಿ ರಸ್ತೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಪ್ರಯಾಣಿಕನೋರ್ವ ಬರಿಗೈಯಲ್ಲೇ ಎಳೆದು ಬಿಸಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಚಾಮರಾಜನಗರ: ಬಸ್ ಗೆ ಅಡ್ಡಲಾಗಿ ರಸ್ತೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಪ್ರಯಾಣಿಕನೋರ್ವ ಬರಿಗೈಯಲ್ಲೇ ಎಳೆದು ಬಿಸಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕರ್ನಾಟಕದ ನಾಗರಹೊಳೆ ಹುಲಿ ಅಭಯಾರಣ್ಯ ಪ್ರದೇಶದ ಮಲೆ ಮಹದೇಶ್ವರ ರಸ್ತೆ (MMRoad) ರಸ್ತೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಮಲೆ ಮಹದೇಶ್ವರ ರಸ್ತೆಯಲ್ಲಿ ಹೆಬ್ಬಾವೊಂದು ರಸ್ತೆಗೆ ಬಂದು ಮಲಗಿದ್ದು, ಇದೇ ರಸ್ತೆಯಲ್ಲಿ ಬಸ್ ವೊಂದು ಬಂದಿದೆ.

ಈ ವೇಳೆ ರಸ್ತೆಯಲ್ಲಿ ಹಾವಿರುವುದನ್ನು ಕಂಡು ಚಾಲಕ ಬಸ್ ನಿಲ್ಲಿಸಿದ್ದಾನೆ. ಸುಮಾರು ಹೊತ್ತು ಕಳೆದರೂ ಹಾವು ಕದಲಲಿಲ್ಲ. ಪರಿಣಾಮ ಬಸ್ ನಿಂದ ಇಳಿದ ಪ್ರಯಾಣಿಕನೋರ್ವ ಬರಿಗೈಯಲ್ಲೇ ಹೆಬ್ಬಾವನ್ನು ಹಿಡಿದು ಪಕ್ಕಕ್ಕೆ ಬಿಸಾಡುತ್ತಾನೆ.

ಇದರಿಂದ ಗಲಿಬಿಲಿಯಾದ ಹಾವು ಕೂಡಲೇ ಕಾಡಿನೊಳಗೆ ಸರಸರನೆ ಹೋಗುತ್ತದೆ. ಬಳಿಕ ಪ್ರಯಾಣಿಕ ಬಸ್ ಹತ್ತಿ ಹೋಗುತ್ತಾನೆ. 

ಪರಿಸರ ಪ್ರೇಮಿಗಳ ಕೆಂಗಣ್ಣು
ಇನ್ನು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಲೇ ಪ್ರಯಾಣಿಕನ ಕೃತ್ಯಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ನಿಯಮಗಳ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ. ರಾತ್ರಿ ವೇಳೆಯಲ್ಲಿ ಅಭಯಾರಣ್ಯಗಳಲ್ಲಿ ವಾಹನಗಳಿಗೆ ನಿಷೇಧವಿದೆ.

ಹೀಗಿದ್ದೂ ಬಸ್ ಪ್ರಯಾಣ ತಪ್ಪು. ಅಲ್ಲದೆ ರಸ್ತೆ ಮೇಲೆ ತನ್ನ ಪಾಡಿಗೆ ತಾನು ಮಲಗಿದ್ದ ಹೆಬ್ಬಾವಿಗೆ ತೊಂದರೆ ಕೊಟ್ಟಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ