ಹೈಕೋರ್ಟ್ 
ರಾಜ್ಯ

ಕೊಲೆ ಆರೋಪಿಯೊಂದಿಗೆ ಯುವತಿ ಪ್ರೀತಿ, ಮದುವೆಯಾಗಲು ಯುವಕನಿಗೆ 15 ದಿನಗಳ ಪೆರೋಲ್ ನೀಡಿದ ಹೈಕೋರ್ಟ್!

ಯುವಕನೊಬ್ಬನಿಗೆ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಹೈಕೋರ್ಟ್ ಸೋಮವಾರ 15 ದಿನಗಳ ಪೆರೋಲ್ ನೀಡಿದೆ. ಅಸಾಧಾರಣ ಸಂದರ್ಭ ಪರಿಗಣಿಸಿ ಕರುಣೆ ತೋರಿದ ಹೈಕೋರ್ಟ್, ತನ್ನ ಪ್ರೇಮಿಯನ್ನು ಮದುವೆಯಾಗಲು ಬಯಸಿದ್ದ ಮಹಿಳೆಯ ರಕ್ಷಣೆಗೆ ಬಂದಿದೆ. ಆದರೆ ಆತ ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಬೆಂಗಳೂರು: ಯುವಕನೊಬ್ಬನಿಗೆ ತನ್ನ ಪ್ರಿಯತಮೆಯನ್ನು ಮದುವೆಯಾಗಲು ಹೈಕೋರ್ಟ್ ಸೋಮವಾರ 15 ದಿನಗಳ ಪೆರೋಲ್ ನೀಡಿದೆ. ಅಸಾಧಾರಣ ಸಂದರ್ಭ ಪರಿಗಣಿಸಿ ಕರುಣೆ ತೋರಿದ ಹೈಕೋರ್ಟ್, ತನ್ನ ಪ್ರೇಮಿಯನ್ನು ಮದುವೆಯಾಗಲು ಬಯಸಿದ್ದ ಮಹಿಳೆಯ ರಕ್ಷಣೆಗೆ ಬಂದಿದೆ. ಆದರೆ ಆತ ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

63 ವರ್ಷದ ಯುವಕನ ತಾಯಿ ಮತ್ತು ಆತನನ್ನು ಒಂಬತ್ತು ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ ಯುವತಿಯ ಮನವಿಗೆ ಸಮ್ಮತಿಸಿದ  ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ನಾಳೆಯಿಂದ ಏ. 20ರವರೆಗೆ 15 ದಿನಗಳ ಕಾಲ ಆನಂದ್ ಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿದರು. ಅಲ್ಲದೇ ಆತ ಜೈಲಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದರು ಮತ್ತು ಪೆರೋಲ್ ಅವಧಿಯಲ್ಲಿ ಅವರು ಯಾವುದೇ ಇತರ ಅಪರಾಧವನ್ನು ಮಾಡಬಾರದು ಎಂದು ಸೂಚಿಸಿದರು. 

ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರತ್ನಮ್ಮ ಅವರ ಪುತ್ರ ಆನಂದ್ ಕಳೆದ ಆರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು 9 ವರ್ಷಗಳಿಂದ ಪ್ರೀತಿಸುತ್ತಿರುವುದಾಗಿ 30 ವರ್ಷ ವಯಸ್ಸಿನ ಜಿ ನೀತಾ ಹೇಳಿಕೊಂಡಿದ್ದಾಳೆ. ರತ್ನಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರೂ ಜೈಲಿನಲ್ಲಿದ್ದಾರೆ. ವಯಸ್ಸಾದ ಮಹಿಳೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾಳೆ ಮತ್ತು ನೀತಾಳೊಂದಿಗೆ ತನ್ನ ಮಗನ ಮದುವೆಯನ್ನು ನೋಡುವುದು ಅವಳ ಆಸೆಯಾಗಿದೆ. ಇಬ್ಬರೂ ಕೋಲಾರ ಜಿಲ್ಲೆಯವರು.

ತನ್ನನ್ನು ಬೇರೆಯವೊಂದಿಗೆ ಕುಟುಂಬದವರು ಮದುವೆ ಮಾಡಿಸುವ ಆತಂಕದಿಂದ 15 ದಿನಗಳ ತುರ್ತು ಪೆರೋಲ್‌ನಲ್ಲಿ ಆನಂದ್‌ನನ್ನು ಬಿಡುಗಡೆ ಮಾಡುವಂತೆ ಕೋರಿ ನೀತಾ ಕಾರಾಗೃಹಗಳ ಡಿಐಜಿ ಮತ್ತು ಕೇಂದ್ರ ಕಾರಾಗೃಹದ ಮುಖ್ಯ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದರು. ಆದರೆ ಅವರ ಮನವಿಯನ್ನು ಪರಿಗಣಿಸಿರಲಿಲ್ಲ. ಆದ್ದರಿಂದ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಬಂಧಿತನನ್ನು ಬಿಡುಗಡೆ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ಆತ ತನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಿದರು. 

ಪೆರೋಲ್ ಮಂಜೂರು ಮಾಡಲು ಯಾವುದೇ ನಿಬಂಧನೆ ಇಲ್ಲ: 

ಮದುವೆಯಾಗಲು ಪೆರೋಲ್ ಮಂಜೂರು ಮಾಡಲು ಯಾವುದೇ ಅವಕಾಶವಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದರು. ಕೊನೆಗೂ ಅಸಾಧಾರಣ ಸಂದರ್ಭ ಪರಿಗಣಿಸಿ, ದಯೆ ತೋರಿದ ನ್ಯಾಯಮೂರ್ತಿಗಳು, ಆರೋಪಿ ತನ್ನ ಪ್ರಿಯತಮೆಯನ್ನು ಮದುವೆಯಾಗಲು 15 ದಿನಗಳ ಪೆರೋಲ್ ನೀಡಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT