ರಾಜ್ಯ

ತುಮಕೂರು: ಹಣ ಕೊಂಡೊಯ್ಯುತ್ತಿದ್ದ ವರನನ್ನು ತಡೆದ ಪೊಲೀಸರು!

Shilpa D

ತುಮಕೂರು: ತೋವಿನಕೆರೆ ಸಮೀಪದ ಜೋನಿಗರಹಳ್ಳಿ ಕ್ರಾಸ್‌ನಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ  1.20 ಲಕ್ಷ ರೂ. ಹಣ ಕೊಂಡೊಯ್ಯುತ್ತಿದ್ದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಚೇಳೂರು ಪೇಟೆ ಸಮೀಪದ ಅಂಕಸಂದ್ರದ ಕಾಟಯ್ಯ ಎಂಬವರ ಪುತ್ರ ಬೆಸ್ಕಾಂ ಲೈನ್‌ಮ್ಯಾನ್ ಮುನಿಸ್ವಾಮಿ ಅವರ ವಿವಾಹ ಏಪ್ರಿಲ್ 22 ಮತ್ತು 23 ರಂದು ಕೊರಟಗೆರೆ ಪಟ್ಟಣದಲ್ಲಿ ನಡೆಯಲಿದೆ.

ಅವರು ಪಟ್ಟಣದ ಆಭರಣ ವ್ಯಾಪಾರಿಗೆ ಪಾವತಿಸಲು ಹಣವನ್ನು ಸಾಗಿಸುತ್ತಿದ್ದರು. ಚೆಕ್‌ಪೋಸ್ಟ್‌ನಲ್ಲಿ ಅವರನ್ನು ತಡೆದ ಅಧಿಕಾರಿಗಳ ಹಣದ ಬಗ್ಗೆ ತಿಳಿಸುವಂತೆ ಹೇಳಿದ್ದಾರೆ. ಬೆಸ್ಕಾಂ ಲೈನ್‌ಮ್ಯಾನ್ ತನ್ನ ವಧುವಿನ ಮಂಗಳಸೂತ್ರ ಸೇರಿದಂತೆ ತಾನು ಆರ್ಡರ್ ಮಾಡಿದ್ದ ಆಭರಣ ವ್ಯಾಪಾರಿಗೆ ಪಾವತಿಸಲು ಹಣವನ್ನು ತೆಗೆದುಕೊಂಡು ಕೊರಟಗೆರೆಗೆ ತೆರಳುತ್ತಿದ್ದನು.

ಅಧಿಕಾರಿಗಳ ಪ್ರಶ್ನೆಗಳಿಗೆ ಅವರು ಸಮರ್ಪಕವಾಗಿ ಉತ್ತರಿಸಿದ ಕಾರಣ, ಆತನ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನಂತರ ಯುವಕನನ್ನು ಬಿಡುಗಡೆ ಮಾಡಲಾಗಿದ್ದು, ವಿಚಾರಣೆ ಬಾಕಿ ಇದೆ. ಮುನಿಸ್ವಾಮಿ ಅವರು ಈಗಾಗಲೇ 42,000 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದರಿಂದ ಅವರು 1 ಲಕ್ಷ ರೂಪಾಯಿ ಬಾಕಿ ಇರುವ ಆಭರಣದ ರಶೀದಿಯನ್ನು ತೋರಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

SCROLL FOR NEXT