ಸಂಗ್ರಹ ಚಿತ್ರ 
ರಾಜ್ಯ

ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಜೋರು: ರಾಷ್ಟ್ರೀಯ ಪಕ್ಷಗಳ ಅತೃಪ್ತ ನಾಯಕರ ಮೇಲೆ ಕಣ್ಣಿಟ್ಟ ಜೆಡಿಎಸ್!

ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ನಾಯಕರಾಗಲೀ, ಸಂಘಟನಾ ಶಕ್ತಿಯಾಗಲೀ ಇಲ್ಲ, ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿನ ಅತೃಪ್ತ ನಾಯಕರನ್ನು ತಮ್ಮತ್ತ ಸೆಳೆದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ನಾಯಕರಾಗಲೀ, ಸಂಘಟನಾ ಶಕ್ತಿಯಾಗಲೀ ಇಲ್ಲ, ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿನ ಅತೃಪ್ತ ನಾಯಕರನ್ನು ತಮ್ಮತ್ತ ಸೆಳೆದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

ಧಾರವಾಡ, ಕಲಘಟಗಿ, ಕುಂದಗೋಳ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಬಂಡಾಯ ಎದುರಿಸುತ್ತಿವೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿರುವ ಅತೃಪ್ತ ನಾಯಕರು ಜೆಡಿಎಸ್ ಪಕ್ಷಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸವಿಟ್ಟುಕೊಂಡಿರುವ ಜೆಡಿಎಸ್, ಇದೀಗ ಧಾರವಾಡ, ಕಲಘಟಗಿ, ಕುಂದಗೋಳ ಕ್ಷೇತ್ರಗಳತ್ತ ಗಮನ ಹರಿಸಿದ್ದು, ಪಕ್ಷದ ಬಲವರ್ಧನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಒಂದು ಕಾಲದಲ್ಲಿ ಧಾರವಾಡ ಜೆಡಿಎಸ್ ಭದ್ರಕೋಟೆಯಾಗಿದ್ದು, ಆದರೆ, ಕಾಲನಂತರ ಅದು ಹಲವಾರು ಗುಂಪುಗಳಾಗಿ ವಿಭಜನೆಗೊಂಡು, ಅಸ್ತಿತ್ವ ಕಳೆದುಕೊಳ್ಳುವಂತಾಗಿತ್ತು.  ಕೆಲವೆಡೆ ಜೆಡಿಎಸ್‌ ಪ್ರಭಾವವಿದ್ದರೂ ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ ಹಾಗೂ ಎನ್‌ಎಚ್‌ ಕೋನರಡ್ಡಿ ಅವರ ನಿರ್ಗಮನದಿಂದ ಅದೂ ಸಾಧ್ಯವಿಲ್ಲದಂತಾಗಿತ್ತು. ಈ ನಡುವೆ ಪಕ್ಷದ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು, ಗ್ರಾಮಾಂತರ ಕ್ಷೇತ್ರಗಳಲ್ಲಿಯಾದರೂ ಪಕ್ಷವನ್ನು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿನ ಕಸರತ್ತು ಕೈಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪಕ್ಷವು ಇದೀಗ ರಾಷ್ಟ್ರೀಯ ಪಕ್ಷಗಳ ನಾಯಕರನ್ನು ಸೆಳೆಯುವಲ್ಲಿ ನಿರತವಾಗಿವೆ ಎಂದು ಹೇಳಲಾಗುತ್ತಿದೆ.

2013ರಲ್ಲಿ ನವಲಗುಂದವನ್ನು ಹೊರತುಪಡಿಸಿದರೆ, ಯಾವುದೇ ಚುನಾವಣೆಯಲ್ಲಿಯೂ ಈ ಭಾಗದಲ್ಲಿ ಜೆಡಿಎಸ್ ಗೆಲುವು ಸಾಧಿಸಿಲ್ಲ. ಈವರೆಗಿನ ಚುನಾವಣೆಯಲ್ಲಿ ಅಮೃತ್ ದೇಸಾಯಿ (ಧಾರವಾಡ) ಮತ್ತು ಇಸ್ಮಲ್ ತಮ್ಮಟಗಾರ (ಎಚ್‌ಡಿ ಪಶ್ಚಿಮ) ಅವರನ್ನಿಟ್ಟುಕ್ಕೊಂಡು ಜೆಡಿಎಸ್ ಸ್ಪರ್ಧೆ ನಡೆಸುತ್ತಿತ್ತು. ಆದರೀಕ ಆ ನಾಯಕರೂ ಕ್ರಮವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವವನ್ನು ಖಾತ್ರಿಪಡಿಸಲು ಸಮರ್ಥ ಅಭ್ಯರ್ಥಿಗಳ ಜೆಡಿಎಸ್ ಹುಡುಕಾಟ ಆರಂಭಿಸಿದೆ. ಈ ನಡುವೆ ಜೆಡಿಎಸ್'ನಿಂದ ಅತೃಪ್ತಗೊಂಡು ಕಾಂಗ್ರೆಸ್-ಬಿಜೆಪಿಗೆ ಸೇರ್ಪಡೆಗೊಂಡಿರುವ ನಾಯಕರನ್ನೇ ಈ ಭಾಗದ ಕಣಕ್ಕಿಳಿಸಲು ರಾಷ್ಟ್ರೀಯ ಪಕ್ಷಗಳು ಮುಂದಾಗಿದ್ದು, ಇದೀಗ ರಾಷ್ಟ್ರೀಯಗಳಲ್ಲಿರುವ ಇತರೆ ಅತೃಪ್ತರನ್ನು ತಮ್ಮ ಪಕ್ಷಕ್ಕೆ ಸೆಳೆದು, ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಇಸ್ಮಾಯಿಲ್ ತಮ್ಮಟಗಾರ ಮತ್ತು ನಾಗರಾಜ್ ಚಬ್ಬಿ ಅವರು ಟಿಕೆಟ್ ಸಿಗದಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದು, ಇವರನ್ನು ಜೆಡಿಎಸ್'ಗೆ ಆಹ್ವಾನಿಸಲು ಕುಮಾರಸ್ವಾಮಿಯವರು ಚಿಂತನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಇಸ್ಮಾಯಿಲ್ ತಮ್ಮಟಗಾರ ಈ ಹಿಂದೆ ಪಕ್ಷದಲ್ಲೇ ಇದ್ದುದ್ದರಿಂದ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ದಾರವಾಡದಿಂದ ಸ್ಪರ್ಧಿಸಲು ಯಾವುದೇ ಪ್ರತಿರೋಧವಿಲ್ಲ ಎಂದು ಜೆಡಿಎಸ್'ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ನಾಗರಾಜ್ ಚಬ್ಬಿ ಅವರ ಹೆಸರನ್ನೂ ಪರಿಗಣಿಸುವ ಸಾಧ್ಯತೆಗಳಿವೆ. ಈಗಾಗಲೇ ಚಬ್ಬಿ ಅವರೊಂದಿಗೆ ಪಕ್ಷದ ನಾಯಕರು ಸಂಪರ್ಕದಲ್ಲಿದ್ದು, ನಾಗರಾಜ್ ಅವರು ಬಿಜೆಪಿ ಅಥವಾ ಜೆಡಿಎಸ್ ಸೇರಬೇಕೇ ಎಂದು ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ.

ಈ ನಡುವೆ ಕುಂದಗೋಳ ಕ್ಷೇತ್ರದ ಎಸ್‌ಐ ಚಿಕ್ಕನಗೌಡರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಪಕ್ಷ ಕಾಯುತ್ತಿದೆ. ಚಿಕ್ಕನಗೌಡರ್ ಹಾಗೂ ಎಂ.ಆರ್.ಪಾಟೀಲ್ ಬಿಜೆಪಿ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸುತ್ತಿದ್ದು, ಪಾಟೀಲರಿಗೆ ಟಿಕೆಟ್ ನೀಡಿದ್ದೇ ಆದರೆ, ಮತ್ತೊಬ್ಬ ನಾಯಕ ಬಂಡಾಯ ಏಳುವ ಸಾಧ್ಯತೆಗಳಿವೆ.

ಚಿಕ್ಕನಗೌಡರ್ ಅವರು ಈಗಾಗಲೇ ಕುಮಾರಸ್ವಾಮಿ ಮತ್ತು ದೇವೇಗೌಡರ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಟಿಕೆಟ್ ನಿರಾಕರಿಸಿದ್ದೇ ಆದರೆ, ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

ಜನವರಿಯೊಳಗೆ ಪಕ್ಷ ಸೇರುವಂತೆ ಇಸ್ಮಾಯಿಲ್ ಅವರಿಗೆ ತಿಳಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಅವರು ಹೇಳಿದ್ದಾರೆ.

ಜಿಲ್ಲೆಯ ಏಳು ಸ್ಥಾನಗಳ ಪೈಕಿ ಐದಕ್ಕೆ ಪಕ್ಷವು ಬಹುತೇಕ ಟಿಕೆಟ್‌ಗಳನ್ನು ನಿರ್ಧರಿಸಿದ್ದು, ಕಲಘಟಗಿ ಮತ್ತು ಕುಂದಗೋಳಕ್ಕೆ ಅಭ್ಯರ್ಥಿಗಳ ಕುರಿತು ಇನ್ನೂ ನಿರ್ಧಾರಗಳಾಗಿಲ್ಲ. ಈ ಕುರಿತು ನಾಯಕತ್ವವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT