ರಾಜ್ಯ

ಮೈಸೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಟ್ರಾಫಿಕ್ ಜಾಮ್, 6 ಕಿ.ಮೀವರೆಗೂ ಸಾಲುಗಟ್ಟಿ ನಿಂತ ವಾಹನಗಳು

Manjula VN

ಮೈಸೂರು: ತಮಿಳುನಾಡಿಗೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ತಮಿಳುನಾಡು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಹಸಿರು ತೆರಿಗೆ ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಂಚಾರ ದಟ್ಟಣೆ ಎದುರಾಗಿ, ಪ್ರವಾಸಿಗರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ವಾಹನ ತಪಾಸಣೆ ನಡೆಸುತ್ತಿರುವ ಪರಿಣಾಮ ಬಂಡೀಪುರದಲ್ಲಿ 6 ಕಿ.ಮೀಗೂ ಹೆಚ್ಚು ದೂರ ಸಂಚಾರ ದಟ್ಟಣೆ ಎದುರಾಗಿದೆ. ಇದರಿಂದಾಗಿ ನೀಲಗಿರಿ ಬೆಟ್ಟ ಹಾಗೂ ಊಟಿಗೆ ತೆರಳುತ್ತಿದ್ದ ಪ್ರವಾಸಿಗರು ಪರದಾಡುವಂತಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮೈಸೂರು-ನಂಜನಗೂಡು ರಸ್ತೆ ಹಾಗೂ ಗುಂಡ್ಲುಪೇಟೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದೆ. ಹೀಗಾಗಿ ಈ ರಸ್ತೆಯಲ್ಲಿ ತೆರಳುವ ವಾಹನಗಳು ಚಾಮರಾಜನಗರಕ್ಕೆ ತೆರಳಲು ರಿಂಗ್ ರಸ್ತೆ ಹಾಗೂ ಟಿ ನರಸೀಪುರ ರಸ್ತೆಯ ಮೂಲಕ ಸಾಗಬೇಕಿದೆ.

SCROLL FOR NEXT