ರಾಜ್ಯ

ಚುನಾವಣಾ ಆಯೋಗದಿಂದ ಮತದಾನದ ಬಗ್ಗೆ ಹೀಗೊಂದು ಕ್ಯೂಟ್ ಪ್ರೇಮಪತ್ರ....

Sumana Upadhyaya

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ. ಮುಂದಿನ ತಿಂಗಳು ಮೇ 10ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

ಎಲ್ಲಾ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಜವಾಬ್ದಾರಿ ವಯಸ್ಕ ಮತದಾರರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಚುನಾವಣೆಯ ಮಹತ್ವ, ಮತದಾರರ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿದೆ.

ಪ್ರತಿದಿನ ಸೆಲೆಬ್ರಿಟಿಗಳು, ಗಣ್ಯ ವ್ಯಕ್ತಿಗಳ ಮೂಲಕ ಮತ ಚಲಾಯಿಸುವ ಅಗತ್ಯವನ್ನು ಕರ್ನಾಟಕ ಚುನಾವಣಾ ಆಯೋಗ ಸಾರುತ್ತಿದೆ. ವೋಟ್, ಮತವನ್ನು ವ್ಯಕ್ತಿಯಾಗಿ ಬಿಂಬಿಸಿ ಅದಕ್ಕೆ ಒಂದು ಕ್ಯೂಟ್ ಪ್ರೇಮ ಪತ್ರ ಬರೆದ ರೀತಿಯಲ್ಲಿ ಮತ ಚಲಾಯಿಸುವುದು ಪ್ರಜೆಗಳಿಗೆ ಎಷ್ಟು ಮುಖ್ಯ, ಮತದಾನ ಮಾಡುವ ಹಕ್ಕನ್ನು ತಪ್ಪಿಸಿಕೊಳ್ಳಬಾರದು ಎಂಬುದನ್ನು ಇದು ಸಾರುತ್ತದೆ.

SCROLL FOR NEXT