ರಾಜ್ಯ

ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ, ಆಸ್ತಿ ಎಷ್ಟಿದೆ ಗೊತ್ತಾ?

Manjula VN

ಮೈಸೂರು: ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಪಾರ್ವತಿಯವರೇ ಹೆಚ್ಚಿ ಶ್ರೀಮಂತೆಯಾಗಿದ್ದಾರೆ.

ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಲಾಗಿರುವ ಅಫಿಡವಿಟ್‌'ನಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ

ಸಿದ್ದರಾಮಯ್ಯ ಅವರು 9,58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ. 16.24 ಕೋಟಿ ರೂ. ಸಾಲ ಇದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಬಳಿ 21.86 ಲಕ್ಷ ನಗದು ಠೇವಣಿ ಇದ್ದರೆ, ಪಾರ್ವತಿ ಅವರ ಬಳಿ 6.92 ಕೋಟಿ ರೂ ಠೇವಣಿ ಇದೆ. ಸಿದ್ದರಾಮಯ್ಯ ಅವರ ಬಳಿ 21 ಲಕ್ಷ ಮೌಲ್ಯದ ಚಿನ್ನ, 1.26 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಇವೆ. ಅವರ ಪತ್ನಿ ಬಳಿ 32.40 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2.83 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಇದೆ.

ಪಾರ್ವತಿ ಅವರು ಸುಮಾರು 16.24 ಕೋಟಿ ರೂಪಾಯಿ ಸಾಲ ಹೊಂದಿದ್ದರೆ, ಸಿದ್ದರಾಮಯ್ಯ ಅವರ ಸಾಲದ ಹೊರೆ 6.84 ಕೋಟಿ ರೂಪಾಯಿಗಳಷ್ಟು ಇದೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಆದರೆ, ಪತ್ನಿ ಪಾರ್ವತಿ ಅವರ ಬಳಿ ಕುಂದಲಹಳ್ಳಿಯಲ್ಲಿ 1.08 ಎಕರೆ, ತೊರಾಯನ ಕಾಟೂರಿನಲ್ಲಿ 7.17 ಎಕರೆ, ವಿಜಯನಗರದಲ್ಲಿ ಕೃಷಿಯೇತರ ಭೂಮಿ ಇರುವುದಾಗಿ ಅಫಿಡವಿಟ್‌'ನಲ್ಲಿ ತಿಳಿಸಿದ್ದಾರೆ.

SCROLL FOR NEXT