ರಮೇಶ್ ಜಾರಕಿಹೊಳಿ 
ರಾಜ್ಯ

ಕರ್ನಾಟಕ ವಿಧಾನಸಭೆ ಚುನಾವಣೆ: 122 ಕೋಟಿ ರೂ ಇದ್ದ ರಮೇಶ್ ಜಾರಕಿಹೊಳಿ ಆಸ್ತಿ ಕೇವಲ 49.25 ಕೋಟಿ ರೂ.ಗೆ ಕುಸಿತ!

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಅವರ ಆಸ್ತಿ ಮೌಲ್ಯದಲ್ಲಿ ಬರೊಬ್ಬರಿ 72.25 ಕೋಟಿ ರೂ ಮೌಲ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಅವರ ಆಸ್ತಿ ಮೌಲ್ಯದಲ್ಲಿ ಬರೊಬ್ಬರಿ 72.25 ಕೋಟಿ ರೂ ಮೌಲ್ಯ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಹೌದು.. ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ 72.25 ಕೋಟಿ ಕಡಿಮೆಯಾಗಿದೆ. ಗುರುವಾರ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, 2018ರಲ್ಲಿ 122 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅವರು, ಈ ಬಾರಿ 49.25 ಕೋಟಿ ಆಸ್ತಿ ಹೊಂದಿದ್ದಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಇಳಿಕೆಗೆ ಕಾರಣ ಏನು ಎಂದು ಅವರು ನಮೂದಿಸಿಲ್ಲ.

2018ರಲ್ಲಿ ರಮೇಶ ತಮ್ಮ ಜೊತೆಗೆ, ಪತ್ನಿ ಜಯಶ್ರೀ, ಇಬ್ಬರು ಪುತ್ರರಾದ ಅಮರನಾಥ ಹಾಗೂ ಸಂತೋಷ ಅವರ ಆಸ್ತಿ ವಿವರ ನೀಡಿದ್ದರು. ಆದರೆ, ಈ ಬಾರಿ ತಮ್ಮ, ಪತ್ನಿ ಹಾಗೂ ಒಬ್ಬ ಪುತ್ರನ ಆಸ್ತಿ ಮಾತ್ರ ಘೋಷಿಸಿದ್ದಾರೆ. ಇನ್ನೊಬ್ಬ ಪುತ್ರ ಸಂತೋಷ ಆಸ್ತಿ ವಿವರ ನೀಡಿಲ್ಲ. 2013ರ ಚುನಾವಣೆ ವೇಳೆ ಒಟ್ಟು 57 ಕೋಟಿ ಆಸ್ತಿ ಘೋಷಿಸಿದ್ದರು. ಈಗ ಘೋಷಿಸಿದ ಆಸ್ತಿ ಅದಕ್ಕಿಂತಲೂ ಕಡಿಮೆಯಾಗಿದೆ.

ಕುಟುಂಬದಿಂದ ಕಿರಿಯ ಪುತ್ರ ಪ್ರತ್ಯೇಕವಾಸ
ಇನ್ನು ಮೂಲಗಳ ಪ್ರಕಾರ ‘ರಮೇಶ ಅವರ ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಗಳನ್ನು ನಿರ್ವಹಿಸುತ್ತಿರುವ ಕಿರಿಯ ಪುತ್ರ ಸಂತೋಷ ಜಾರಕಿಹೊಳಿ ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಸ್ತಿ ಮೊತ್ತ ಕಡಿಮೆ ಆಗಲು ಇದೂ ಒಂದು ಕಾರಣವಾಗಿರಬಹುದು. ಅಮರನಾಥ ಅವರು ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ. ಸಹೋದರರ ನಡುವೆ ಆಸ್ತಿ ಹಂಚಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಜಾರಕಿಹೊಳಿ ಕುಟುಂಬದ ಆಪ್ತರಾದ ವಕೀಲರೊಬ್ಬರು ಹೇಳಿದರು.

ಲೈಂಗಿಕ ಪ್ರಕರಣ: 
ಈ ಅಫಿಡವಿಟ್‌ನಲ್ಲಿ ರಮೇಶ ಜಾರಕಿಹೊಳಿ ತಮ್ಮ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಒಂದು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿಯಾದರೂ, ಪ್ರತಿವಾದಿಗಳು ಎಸ್‌ಐಟಿಯ ಸಂವಿಧಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ಎಂದು ಬರೆದು ಕೊಂಡಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT