ರಾಜ್ಯ

ಮತದಾರರ ಚೀಟಿ ಇದೆ, ಆದ್ರೆ ಪ್ರಯೋಜನವೇನು? ನಮ್ಮ ಸಮಸ್ಯೆ ಕೇಳುವವರಿಲ್ಲ: ಲೈಂಗಿಕ ಕಾರ್ಯಕರ್ತೆಯರ ಅಳಲು

Nagaraja AB

ಬೆಂಗಳೂರು: ಲೈಂಗಿಕ ಕಾರ್ಯಕರ್ತರಿಗೆ ಮತದಾರರ ಚೀಟಿ ಕೇವಲ ಕಾಗದವಾಗಿದ್ದು, ಅದು ಅವರ ಶೋಚನೀಯ ಜೀವನ ಪರಿಸ್ಥಿತಿ ಬದಲಾಯಿಸುವಲ್ಲಿ ವಿಫಲವಾಗಿದೆ.  ಈ ಸಮುದಾಯದ ಶೇ. 70 ರಷ್ಟು ಮಂದಿ ಮತದಾರರ ಚೀಟಿ, ಆಧಾರ್, ಪ್ಯಾನ್, ಪಡಿತರ ಚೀಟಿಯಂತಹ ಗುರುತಿನ ಚೀಟಿ ಹೊಂದಿದ್ದಾರೆ. ಆದರೆ, ಅವರಿಗೆ ಇಂದಿಗೂ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ ಎಂದು ರಾಜ್ಯ ಸೆಕ್ಸ್ ವರ್ಕರ್ಸ್ ಅಸೋಸಿಯೇಷನ್ ಮತ್ತು ಅವರೊಂದಿಗೆ ಸಂಬಂಧಿಸಿದ ಎನ್ ಜಿಒಗಳು ಹೇಳಿವೆ. 

ಮತದಾನ ಮಾಡಿದರೂ ತಮ್ಮನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಸದಸ್ಯರೂ ಭಾವಿಸಿದ್ದಾರೆ. ಗಾರ್ಮೆಂಟ್ಸ್, ಗೃಹೋಪಯೋಗಿ ಮತ್ತು ನೈರ್ಮಲ್ಯ ಕಾರ್ಮಿಕರೊಂದಿಗೆ ನಮಗೂ ಸಮಾನ ಹಕ್ಕು ಒದಗಿಸಬೇಕು ಎಂದು ಕೆಎಸ್‌ಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಒತ್ತಾಯಿಸಿದರು. ಸಾಂಕ್ರಾಮಿಕ ಸಮಯದಲ್ಲಿ  ಪಡಿತರ ಕಿಟ್‌ ಒದಗಿಸಲು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ತಮಗೆ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದು ಲೈಂಗಿಕ ಅಲ್ಪಸಂಖ್ಯಾತರು ಆರೋಪಿಸಿದ್ದಾರೆ. ಅವರಿಗೆ ಬಹುತೇಕ ಮಂದಿ ಎಚ್‌ಐವಿ ಪಾಸಿಟಿವ್ ಮತ್ತು ಕೋವಿಡ್‌ಗೆ ತುತ್ತಾಗಿದ್ದರೂ ಔಷಧಗಳು ಮತ್ತು ಸರಿಯಾದ ಚಿಕಿತ್ಸೆ ಪಡೆಯುವಲ್ಲಿ ವಿಫಲರಾಗಿದ್ದಾರೆ. 

ಮೂಲಭೂತ ಅಗತ್ಯಗಳಾದ ಆರೋಗ್ಯ, ಶಿಕ್ಷಣ ಹಕ್ಕು ಮತ್ತು ಉದ್ಯೋಗಾವಕಾಶ ದೊರಕಬೇಕು, ಆಸ್ಪತ್ರೆ ಅಥವಾ ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ  ಕಿರುಕುಳ ನೀಡಬಾರದು ಎಂದು ಅವರು ಒತ್ತಾಯಿಸಿದರು. 

ಸಾಲಿಡಾರಿಟಿ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಶುಭಾ ಚಾಕೋ ಮಾತನಾಡಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಅನುಸರಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳಿಂದ ಕಿರುಕುಳವಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಅನೇಕ ಲೈಂಗಿಕ ಕಾರ್ಯಕರ್ತರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸರ್ಕಾರಿ ಗೃಹಗಳಿಗೆ ಕಳುಹಿಸಲಾಗಿದೆ. ದುಡಿಮೆಗೆ ಕಳಂಕ ಅಂಟಿಕೊಂಡಿರುವುದರಿಂದ ಅನೇಕರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಲೈಂಗಿಕ ಕಾರ್ಯಕರ್ತರೊಂದಿಗೆ ವ್ಯವಹರಿಸುವಾಗ ಅವರ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು ಮತ್ತು ಅವರ ಗುರುತನ್ನು ಗೌಪ್ಯವಾಗಿಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

SCROLL FOR NEXT