ಪ್ರಚಾರದಲ್ಲಿ ತೊಡಗಿರುವ ನಟ ಸುದೀಪ್. 
ರಾಜ್ಯ

ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಕಿಚ್ಚನ ಅಬ್ಬರದ ಪ್ರಚಾರ: ಚುನಾವಣೆವರೆಗೂ ಪಕ್ಷದ ಜೊತೆಯಲ್ಲಿರುವೆ ಎಂದ ನಟ ಸುದೀಪ್

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ನಡೆಸುತ್ತಿವೆ. ಮತದಾರರ ಸೆಳೆಯರು ರಾಜಕೀಯ ಪಕ್ಷಗಳು ಸಿನಿ ಸ್ಟಾರ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಟ ಕಿಚ್ಚ ಸುದೀಪ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ನಡೆಸುತ್ತಿವೆ. ಮತದಾರರ ಸೆಳೆಯರು ರಾಜಕೀಯ ಪಕ್ಷಗಳು ಸಿನಿ ಸ್ಟಾರ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಟ ಕಿಚ್ಚ ಸುದೀಪ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಮೊಳಕಾಲ್ಮೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸುದೀಪ್ ಅವರು, ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರವಾಗಿ ಮತಯಾಚನೆ ಮಾಡಿದರು.

ಈ ವೇಳೆ ಸುದೀಪ್ ನೋಡಲು ಸಾವಿರಾರು ಜನರು ರಸ್ತೆಗಳಲ್ಲಿ ಕಿಕ್ಕಿರಿದು ನೆರೆದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆಯೂ ನಟ ಸುದೀಪ್‌ ಅವರು ಮನವಿ ಮಾಡಿಕೊಂಡರು.

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್ ಅವರು, ಮಾತು ಕೊಟ್ಟಿದ್ದೇನೆ, ಚುನಾವಣೆ ಪ್ರಚಾರ ಕಾರ್ಯ ಮುಗಿಯುವವರೆಗೂ ಬಿಜೆಪಿ ಜೊತೆಯಲ್ಲಿ ಇರುತ್ತೇನೆಂದು ಹೇಳಿದರು.

ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ, ಪ್ರಚಾರಕ್ಕೆ ಹೋಗುವುದರಲ್ಲಿ ನನ್ನ ಸ್ವಾರ್ಥ ಕೂಡ ಇದೆ, ಈ ನೆಪದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದು ತಿಳಿಸಿದರು.

ನಾನು ರೋಡ್‌ ಶೋಗಳಲ್ಲಿ ಭಾಗವಹಿಸಿ ತುಂಬಾ ವರ್ಷಗಳಾಗಿದೆ, ಹೆಬ್ಬುಲಿ ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ರೋಡ್‌ ಶೋ ಮಾಡಿದ್ದು ಕೊನೆಯಾಗಿತ್ತು, ಇಂದಿನಿಂದ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬಿಸಿಲು ಜಾಸ್ತಿ ಇರುತ್ತೆ ಎಂದು ಮಧ್ಯಾಹ್ನ ರೋಡ್ ಶೋ ಆಯೋಜನೆ ಮಾಡಿರಲಿಲ್ಲ, ಆದರೂ ನಾನು ರೋಡ್ ಶೋ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲಾ ಕಡೆ ಸ್ನೇಹಿತರು ಇದ್ದಾರೆ, ಚುನಾವಣಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಸುದೀಪ್ ಅವರು ಇಂದು ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT