ಪುಟ್ಟ ಪ್ರತಿಭೆ ಶಾಲ್ಮಲಿ ಹಾಗೂ ಪ್ರಧಾನಿ ಮೋದಿ. 
ರಾಜ್ಯ

ಚುನಾವಣೆಯಲ್ಲಿ ಬ್ಯುಸಿಯಿದ್ದರೂ ಪಿಯಾನೋ ನುಡಿಸುವ ಪುಟ್ಟ ಪೋರಿ ಪ್ರತಿಭೆಗೆ ಮನಸೋತ ಪ್ರಧಾನಿ ಮೋದಿ!

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ಯೂಸಿಯಾಗಿದ್ದಾರೆ. ಈ ನಡುವಲ್ಲೂ ಪುಟ್ಟ ಪ್ರತಿಭೆಗಳ ಗುರುತಿಸಿ, ಅವರನ್ನು ಶ್ಲಾಘಿಸುವುದನ್ನು ಮಾತ್ರ ಮೋದಿಯವರು ಮರೆತಿಲ್ಲ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬ್ಯೂಸಿಯಾಗಿದ್ದಾರೆ. ಈ ನಡುವಲ್ಲೂ ಪುಟ್ಟ ಪ್ರತಿಭೆಗಳ ಗುರುತಿಸಿ, ಅವರನ್ನು ಶ್ಲಾಘಿಸುವುದನ್ನು ಮಾತ್ರ ಮೋದಿಯವರು ಮರೆತಿಲ್ಲ.

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ್ದ ಪುಟ್ಟ ಬಾಲಕಿಯ ಪ್ರತಿಭೆಯನ್ನು ಮೋದಿಯವರು ಕೊಂಡಾಡಿದ್ದಾರೆ.

ಇತ್ತೀಚೆಗೆ ಅನಂತ್ ಕುಮಾರ್ ಎಂಬುವವರು ಶಾಲ್ಮಲಿ ಎಂಬ ಪುಟ್ಟ ಬಾಲಕಿ ಕೀಬೋರ್ಡ್ ನುಡಿಸುತ್ತಾ ತನ್ನ ತಾಯಿಯ ಜೊತೆ ಹಾಡು ಹಾಡುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು.

ಈ ವಿಡಿಯೋವನ್ನು ಗಮನಿಸಿ ಪ್ರಧಾನಿ ಮೋದಿ ಅವರು, ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ಬಾಲಕಿಯನ್ನು ಶ್ಲಾಘಿಸಿದ್ದಾರೆ.

ಕೆ.ಎಸ್. ನರಸಿಂಹಸ್ವಾಮಿ ಅವರು ರಚಿಸಿದ ಪಲ್ಲವಗಳ ಪಲ್ಲವಿಯಲ್ಲಿ  ಹಾಡಿಗೆ ತಕ್ಕಂತೆ ಪಿಯಾನೋ ಬಾಲಕಿ ಪಿಯಾನೋ ನುಡಿಸಿದ್ದು, ಬಾಲಕಿಯ ಪ್ರತಿಭೆಗೆ ಮೋದಿಯವರು ಫಿದಾ ಆಗಿದ್ದಾರೆ.

ಶಾಲ್ಮಲಿಯ ಅಸಾಧಾರಣ ಪ್ರತಿಭೆ, ಸೃಜನಶೀಲತೆಯನ್ನು ಮೋದಿಯವರು ಹೊಗಳಿದ್ದು, ಭವಿಷ್ಯದಲ್ಲಿ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದ್ದಾರೆ.

ವಿಡಿಯೋವನ್ನು ಹಂಚಿಕೊಂಡಿರುವ ಮೋದಿಯವರು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!