ಮತಹಕ್ಕು ಚಲಾಯಿಸುತ್ತಿರುವ ವೃದ್ಧೆ. 
ರಾಜ್ಯ

ವಿಧಾನಸಭಾ ಚುನಾವಣೆ: ವೃದ್ಧರು, ಅಂಗವಿಕಲರ ಮತದಾನ ಆರಂಭ, ಬ್ಯಾಲೆಟ್ ಪೇಪರ್ ನಲ್ಲಿ ಮತದಾನ

ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಬ್ಯಾಲೆಟ್ ಪೇಪರ್ ಮತದಾನ ಶನಿವಾರದಿಂದ ಆರಂಭಗೊಂಡಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಇದೇ ಮೊದಲ ಬಾರಿಗೆ ಮನೆಯಿಂದಲೇ ತಮ್ಮ ಮತಹಕ್ಕು ಚಲಾಯಿಸಿದರು.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಬ್ಯಾಲೆಟ್ ಪೇಪರ್ ಮತದಾನ ಶನಿವಾರದಿಂದ ಆರಂಭಗೊಂಡಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಇದೇ ಮೊದಲ ಬಾರಿಗೆ ಮನೆಯಿಂದಲೇ ತಮ್ಮ ಮತಹಕ್ಕು ಚಲಾಯಿಸಿದರು.

ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಶನಿವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು, 33,036 ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮನೆಯಿಂದಲೇ ಮತದಾನ ಮಾಡಿದರು.

ಶನಿವಾರ ಬ್ಯಾಲೆಟ್ ಪೇಪರ್ ಮೂಲಕ ನೋಂದಾಯಿತ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಂಗವಿಕಲರು ಮತ ಚಲಾಯಿಸಿದರು. ಮೇ.6ರವರೆಗೆ ಈ ಮತದಾನ ಪ್ರಕ್ರಿಯೆ ನಡೆಯಲಿದೆ.

ಮತಗಟ್ಟೆಯ ಅಧಿಕಾರಿಗಳು ಹಾಗೂ ಅವರ ತಂಡ ಬೆಳಿಗ್ಗೆ 9 ಗಂಟೆಯಿಂದಲೇ ಸೇವೆಗೆ ಹಾಜರಾಗುತ್ತಿದ್ದಾರೆ. ಪ್ರತಿ ತಂಡದಲ್ಲಿ ಮುುಖ್ಯಸ್ಥರು, ಒಬ್ಬ ಸಹಾಯಕ, ಒಬ್ಬ ಮೈಕ್ರೋ ಅಬ್ಸರ್ವರ್, ಒಬ್ಬ ಪೊಲೀಸ್ ಅಧಿಕಾರಿ, ಒಬ್ಬ ವಿಡಿಯೋಗ್ರಾಫರ್ ಮತ್ತು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಏಜೆಂಟರ್ ಗಳು ಇರುತ್ತಾರೆ. ಕ್ಷೇತ್ರ ಸಮೀಕ್ಷೆಯನ್ನು 1 ವಾರಗಳ ಕಾಲ ನಡೆಸಲಾಗಿತ್ತು. ನಂತರ ಮಾರ್ಗಗಳ ಕುರಿತು ಮಾಹಿತಿ ಸಂಗ್ರಹಿಸಿ, ಪ್ರತೀ ತಂಡ ದಿನಕ್ಕೆ ಕನಿಷ್ಠ 20 ಮನೆಗಳಿಗೆ ಭೇಟಿ ನೀಡುವ ಗುರಿ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದು ವಿಶಿಷ್ಟ ಸೌಲಭ್ಯವಾಗಿದೆ. ಮನೆಗಳಿಗೆ ಮಿನಿ ಪೋಲಿಂಗ್ ಬೂತ್'ನ್ನು ಕೊಂಡೊಯ್ಯಲಾಗುತ್ತಿದ್ದು, ಮತದಾರರಿಗೆ ಡಿಕ್ಲರೇಷನ್ ಫಾರಂ 13ಎ, ಬಿ ಮತ್ತು ಸೀ ನೀಡಲಾಗುತ್ತಿದೆ. ಫಾರಂ ಪಡೆದವರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಅಧಿಕಾರಿಗಳ ತಂಡ ಮನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಸಿಗದಿದ್ದರೆ ಅವರಿಗೆ ಎರಡನೇ ಅವಕಾಶವನ್ನೂ ನೀಡಲಾಗುತ್ತಿದೆ. ಮೇ.6 ರವರೆಗೆ ಈ ಪ್ರಕ್ರಿಯೆಗಳು ನಡೆಯಲಿವೆ. ಈಗಾಗಲೇ ರಾಜ್ಯಾದಾದ್ಯಂತ  2,542 ತಂಡಗಳನ್ನು ಚುನಾವಣಾ ಆಯೋಗ ನೇಮಿಸಿದ್ದು, ಮೊದಲ ದಿನ 1,627 ಮತ್ತು ಎರಡನೇ ದಿನ 1,627 ಮಾರ್ಗಗಳಲ್ಲಿ ತಂಡಗಳು ಮನೆಗಳಿಗೆ ಭೇಟಿ ನೀಡಿವೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 12.15 ಲಕ್ಷ ಹಿರಿಯ ನಾಗರಿಕರು ಮತ್ತು 5.71 ಲಕ್ಷ ವಿಕಲಚೇತನರು ಮತದಾನಕ್ಕೆ ಅರ್ಹರಾಗಿದ್ದಾರೆ. ಅವರಲ್ಲಿ 80,280 ಹಿರಿಯ ನಾಗರಿಕರು ಮತ್ತು 19,279 ವಿಕಲಚೇತನರು ವಿಎಚ್‌ಎಫ್‌ಗೆ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (ಬಿಎಎಫ್) ಅಧ್ಯಕ್ಷ ನಾಗರಾಜ್ ರಾವ್ (84) ಅವರು ಮಾತನಾಡಿ, ನಾನು ವಿಎಫ್‌ಹೆಚ್ ಆಯ್ಕೆ ಮಾಡಿಕೊಂಡಿದ್ದೆ. ಅಧಿಕಾರಿಗಳು ಮತದಾನದ ಒಂದು ದಿನ ಮುಂಚಿತವಾಗಿ ಸಂಪರ್ಕಿಸಿದ್ದರು. ಭೇಟಿಯ ಸಮಯವನ್ನು ತಿಳಿಸಿದ್ದರು ಎಂದು ಹೇಳಿದ್ದಾರೆ.

ಭೇಟ ವೇಳೆ ಅಧಿಕಾರಿಗಳು ಅಭ್ಯರ್ಥಿಗಳ ಹೆಸರಿನ ಪಟ್ಟಿಯೊಂದಿಗೆ ಮತಪತ್ರವನ್ನು ನೀಡಿದರು. ನಾನು ಮತ ಚಲಾಯಿಸಿದ ನಂತರ, ಅದನ್ನು ಎರಡು ಕವರ್‌ಗಳಲ್ಲಿ ಎರಡು ಬಾರಿ ಸೀಲ್ ಮಾಡಿದರು. ಮೊಹರು ಮಾಡಿದ ಮತಪೆಟ್ಟಿಗೆಯಲ್ಲಿ ಅದನ್ನು ಹಾಕಿದರು. ಸಂಪೂರ್ಣ ಪ್ರಕ್ರಿಯೆಯು ಪರಿಣಾಮಕಾರಿಯಾಗಿ ನಡೆಯಿತು. ” 15 ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿತು. ಈ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಕೋರಮಂಗಲದ ಸೀತಾ ಎ ರಾಮನ್ (85) ಅವರು ಮಾತನಾಡಿ, “ಚುನಾವಣಾ ಅಧಿಕಾರಿಗಳ ಪ್ರಯತ್ನ ಮತ್ತು ಇಡೀ ಪ್ರಕ್ರಿಯೆ ಪ್ರಶಂಸನೀಯವಾದದ್ದು. ಈ ಪ್ರಕ್ರಿಯೆ ಇಲ್ಲದೇ ಹೋಗಿದ್ದರೆ ಒಬ್ಬಂಟಿಯಾಗಿ ಹೋಗಿ ಮತದಾನ ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT