ಸಂಗ್ರಹ ಚಿತ್ರ 
ರಾಜ್ಯ

ಒತ್ತಡಕ್ಕೆ ಮಣಿದ ಸರ್ಕಾರ: 12 ಪೊಲೀಸರ ವರ್ಗಾವಣೆ ರದ್ದು

ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಡಿವೈಎಸ್‌ಪಿ ವರ್ಗಾವಣೆ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ತಡೆಹಿಡಿಯಲಾಗಿದ್ದ ಪಟ್ಟಿಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ, ಹಲವನ್ನು ರದ್ದುಪಡಿಸಿ ಬುಧವಾರ ಮರು ಆದೇಶ ಹೊರಡಿಸಲಾಗಿದೆ.

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಡಿವೈಎಸ್‌ಪಿ ವರ್ಗಾವಣೆ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ತಡೆಹಿಡಿಯಲಾಗಿದ್ದ ಪಟ್ಟಿಯನ್ನು ಅಲ್ಪಸ್ವಲ್ಪ ಮಾರ್ಪಡಿಸಿ, ಹಲವನ್ನು ರದ್ದುಪಡಿಸಿ ಬುಧವಾರ ಮರು ಆದೇಶ ಹೊರಡಿಸಲಾಗಿದೆ.

211 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಈಚೆಗೆ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಐವತ್ತಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಸರ್ಕಾರವೇ ತಡೆ ನೀಡಿತ್ತು. ಈಗ 40 ಇನ್‌ಸ್ಪೆಕ್ಟರ್‌ಗಳು, 6 ಡಿವೈಎಸ್‌ಪಿಗಳ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅವರಲ್ಲಿ ಹಿಂದೆ ವಿವಿಧ ಸ್ಥಳಗಳಿಗೆ ನಿಯೋಜಿಸಿದ್ದ 12 ಇನ್‌ಸ್ಪೆಕ್ಟರ್‌ಗಳು ಹಾಗೂ 3 ಡಿವೈಎಸ್‌ಪಿಗಳ ವರ್ಗಾವಣೆಯನ್ನು ರದ್ದುಪಡಿಸಲಾಗಿದೆ.

ಇನ್‌ಸ್ಪೆಕ್ಟರ್‌ಗಳಾದ ನವೀನ್‌ಚಂದ್ರ ಜೋಗಿ, ವಜ್ರಮುನಿ ಕೆ., ಭಾಗ್ಯವತಿ ಜಿ. ಬಂಟಿ, ಜೆ. ಅಶ್ವತ್ಥ್‌ಗೌಡ, ಎಚ್‌.ಬಿ.ಸುನಿಲ್‌, ಮೋಹನ್‌ ಎನ್‌. ಹೆಡ್ಡಣ್ಣವರ್‌, ಎಸ್‌.ಪಾರ್ವತಮ್ಮ, ಶ್ರೀಧರ್‌ ಶಾಸ್ತ್ರಿ ಟಿ. ಗುಡಗಟ್ಟಿ, ಎಂ.ಗೋವಿಂದರಾಜು. ಎಚ್‌.ಎ.ಮಂಜು, ಸಿ.ಪಿ.ನವೀನ್‌, ಎಸ್‌.ಎಡ್ವಿನ್‌ ಪ್ರದೀಪ್‌ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಈ 12 ಇನ್‌ಸ್ಪೆಕ್ಟರ್‌ಗಳನ್ನು ಬೆಂಗಳೂರು ನಗರವು ಸೇರಿದಂತೆ ವಿವಿಧೆಡೆಗೆ ವರ್ಗಾವಣೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶಾದ್ಯಂತ 'ಗ್ಯಾಸ್ ಟ್ರಬಲ್': ಪ್ರಮುಖ ನಗರಗಳಲ್ಲಿ LPG ಕೊರತೆಯ ಭೀತಿ; ಸಮಸ್ಯೆ ಬಗೆಹರಿಸಲು ಅಗತ್ಯ ಸರಕುಗಳ ಕಾಯ್ದೆ ಬಳಸಿದ ಕೇಂದ್ರ!

KPCC ಅಧ್ಯಕ್ಷರಾಗಿ ಆರು ವರ್ಷ: ಡಿ ಕೆ ಶಿವಕುಮಾರ್ ಔತಣಕೂಟ ಆಯೋಜನೆ; ಸಿಎಂ ಸೇರಿ ಸಚಿವರು, ಶಾಸಕರು ಭಾಗಿ, ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ತೀವ್ರ

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

1998-2025ರವರೆಗೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯನೇ ಹೆಚ್ಚು ಸಾಲ ಮಾಡಿದ್ದಾರೆ: ಆರ್.ಅಶೋಕ್

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

SCROLL FOR NEXT